
ಯಾಕೆ ನಮ್ಮಂತಹ ಒಳ್ಳೆಯವರಿಗೆ (good people) ಆ ದೇವರು ಯಾವಾಗ್ಲೂ ನೋವು ಕೊಡ್ತಾನೆ, ಈ ಕೆಟ್ಟ ಜನಗಳು ಆರಾಮವಾಗಿ ಜೀವನ ನಡೆಸುತ್ತಾರಲ್ಲ ಯಾಕೆ ಹೀಗೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿಗೂ ಬಂದಿರಬಹುದಲ್ವಾ. ಹೆಚ್ಚಿನ ಸಂದರ್ಭದಲ್ಲಿ ಒಳ್ಳೆಯ ಮನಸ್ಸಿನ ಜನರಿಗೆ ನೋವು, ಕಷ್ಟಗಳೇ ಜಾಸ್ತಿ ಲಭಿಸುತ್ತವೆ. ಯಾರಿಗೆ ಎಷ್ಟೇ ಒಳ್ಳೆಯದು ಬಯಸಿದರೂ, ಕೊನೆಗೆ ಅವರಿಗೆ ನೋವೇ ಲಭಿಸುತ್ತದೆ. ಇದರ ಹಿಂದೆಯೂ ಒಂದಷ್ಟು ಅಚ್ಚರಿಯ ಕಾರಣಗಳಿವೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.
ಒಳ್ಳೆಯ ಮನಸ್ಸಿನ ಜನರು ಇತರರಿಂದ ಅದೇ ಒಳ್ಳೆಯತನವನ್ನು ನಿರೀಕ್ಷಿಸುತ್ತಾರೆ. ಅವರು ಇತರರನ್ನು ಪ್ರೀತಿ, ಗೌರವ, ಘನತೆ ಮತ್ತು ಪ್ರಾಮಾಣಿಕತೆಯಿಂದ ನಡೆಸಿಕೊಳ್ಳುತ್ತಾರೆ, ಇತರರು ಕೂಡ ಇದೇ ರೀತಿ ನಮ್ಮನ್ನು ನಡೆಸಿಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಇನ್ನೊಬ್ಬ ವ್ಯಕ್ತಿಯು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ವರ್ತಿಸಿದಾಗ, ಅವರ ಮನಸ್ಸಿಗೆ ಇದು ನೋವನ್ನು ಉಂಟುಮಾಡುತ್ತದೆ. ಇಲ್ಲಿಂದಲೇ ಒಳ್ಳೆಯದನ್ನು ಬಯಸಿದರೂ ನಮಗೆ ಯಾವಾಗಲೂ ಕೆಟ್ಟದ್ದೇ ಆಗೋದು ಭಾವಿಸಲು ಪ್ರಾರಂಭಿಸುತ್ತಾರೆ. ಈ ಅತಿಯಾದ ನಿರೀಕ್ಷೆಗಳು ನೋವಿಗೆ ಕಾರಣ.
ಒಳ್ಳೆಯ ಜನರು ತುಂಬಾ ಭಾವುಕರು. ಯಾರಿಗಾದರೂ ಸಹಾಯ ಮಾಡುವ ವಿಷಯಕ್ಕೆ ಬಂದಾಗ, ಅವರು ತಮ್ಮ ಮಿತಿಗಳನ್ನು ಮರೆತು ಪೂರ್ಣ ಹೃದಯದಿಂದ ಹೆಲ್ಪ್ ಮಾಡುತ್ತಾರೆ. ಅವರ ಒಂದೇ ತಪ್ಪು ಎಂದರೆ ಅವರು ಇತರರಿಂದಲೂ ಇದೆ ಪ್ರೀತಿ ಮತ್ತು ಬೆಂಬಲವನ್ನು ಬಯಸುತ್ತಾರೆ. ಆದರೆ ಇಂದಿನ ಈ ಜಗತ್ತು ಕೇವಲ ಒಳ್ಳೆಯ ಜನರಿಂದ ಕೂಡಿಲ್ಲ. ಇಲ್ಲಿ ಹೆಚ್ಚು ಸ್ವಾರ್ಥಿಗಳೇ ಇದ್ದಾರೆ. ಹಾಗಾಗಿ ಯಾರು ಕೂಡ ಸಹಾಯ, ಬೆಂಬಲ ನೀಡಲು ಅಷ್ಟಾಗಿ ಹೋಗೋದಿಲ್ಲ. ಇದು ಒಳ್ಳೆಯ ಜನರಿಗೆ ಸಿಕ್ಕಾಪಟ್ಟೆ ನೋವನ್ನು ಉಂಟುಮಾಡುತ್ತದೆ.
ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಯಾರಿಗೂ ಇಲ್ಲ ಎಂದು ಹೇಳುವುದಿಲ್ಲ. ಇತರರಿಗೆ ನೋವಾಗುತ್ತೆ ಎಂಬ ಕಾರಣಕ್ಕೆ ಅವರು ಎಲ್ಲದಕ್ಕೂ ಒಕೆ ಹೇಳ್ತಾರೆ. ಇವರ ಈ ಮುಗ್ಧತೆ ಮತ್ತು ಪ್ರಾಮಾಣಿಕತೆಯನ್ನು ಹೆಚ್ಚಿನವರು ತಮ್ಮ ಲಾಭಗಳಿಗಾಗಿ ಬಳಸುತ್ತಾರೆ. ಇದರಿಂದ ಕೊನೆಗೆ ಒಳ್ಳೆಯ ಜನರು ನೋವನ್ನು ಅನುಭವಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಇಲ್ಲ ಎಂದು ಹೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ಇದನ್ನೂ ಓದಿ: ಹಣಕಾಸಿನ ವಿಚಾರದಲ್ಲಿ ಮಾಡುವ ಈ ತಪ್ಪುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು… ಎಚ್ಚರ!
ಒಳ್ಳೆಯ ಜನರಿಗೆ ಕೆಲವು ತತ್ವಗಳಿರುತ್ತವೆ ಮತ್ತು ಅವರು ಅವುಗಳ ಪ್ರಕಾರ ಬದುಕಲು ಬಯಸುತ್ತಾರೆ. ಅವರು ಎಷ್ಟೇ ಕಷ್ಟಗಳನ್ನು ಎದುರಿಸಿದರೂ, ಅವರು ಈ ತತ್ವಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅವರಿಗೆ ಅವರ ನೈತಿಕತೆ ಅತ್ಯುನ್ನತವಾದ ಕಾರಣ ಪ್ರತಿಯೊಂದನ್ನು ಮೋಸ ಮಾಡದೆ ನ್ಯಾಯಯುತವಾಗಿಯೇ ಪಡೆಯಬೇಕು ಎಂದು ಬಯಸುತ್ತಾರೆ. ಈ ಅತಿಯಾದ ಒಳ್ಳೆಯತನವು ಹೆಚ್ಚಾಗಿ ಹೊರೆಯಾಗಿ ಪರಿಣಮಿಸುತ್ತದೆ ಮತ್ತು ಅವರು ಇತರರಿಗಿಂತ ಹೆಚ್ಚು ಜೀವನದಲ್ಲಿ ಹೋರಾಡಬೇಕಾಗುತ್ತದೆ.
ಒಳ್ಳೆಯ ಜನರು ಸಾಮಾನ್ಯವಾಗಿ ಬಹಳ ಸೂಕ್ಷ್ಮವಾಗಿರುತ್ತಾರೆ. ಈ ಕಾರಣದಿಂದಾಗಿ, ಅವರು ಸಣ್ಣ ವಿಷಯಗಳ ಬಗ್ಗೆಯೂ ಗಂಟೆಗಟ್ಟಲೆ ಯೋಚಿಸುತ್ತಾರೆ. ಅವರು ಚಿಕ್ಕ ಪುಟ್ಟ ವಿಷಯಗಳನ್ನು ಸಹ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ, ಅದು ಅವರನ್ನು ಸುಲಭವಾಗಿ ನೋಯಿಸುತ್ತದೆ. ಇದರಿಂದಾಗಿಯೇ ಸಣ್ಣ ಸಮಸ್ಯೆಗಳು ಸಹ ಕೆಲವೊಮ್ಮೆ ಅವರಿಗೆ ದೊಡ್ಡದಾಗಿ ಕಾಣಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ