AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕಾಸಿನ ವಿಚಾರದಲ್ಲಿ ಮಾಡುವ ಈ ತಪ್ಪುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು… ಎಚ್ಚರ!

ಪ್ರತಿಯೊಬ್ಬರೂ ತಾವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಉತ್ತಮ ಮತ್ತು ಸುರಕ್ಷಿತ ಭವಿಷ್ಯವನ್ನು ನಿರ್ಮಿಸಲು ಬಯಸುತ್ತಾರೆ. ಇದರ ಜೊತೆಗೆ ಅರಿವಿಲ್ಲದೆಯೇ ಹಣಕಾಸಿನ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಅರಿವಿಲ್ಲದೆ ಮಾಡುವ ಈ ತಪ್ಪುಗಳು ಗಮನಾರ್ಹ ನಷ್ಟಗಳಿಗೆ ಕಾರಣವಾಗುತ್ತದೆ, ಈ ತಪ್ಪುಗಳು ಮುಂದೊಂದು ದಿನ ವ್ಯಕ್ತಿಯನ್ನೂ ಪೂರ್ಣವಾಗಿ ದಿವಾಳಿಯನ್ನಾಗಿಸುತ್ತದೆ. ಹಾಗಿದ್ರೆ ಯಾವ ತಪ್ಪುಗಳು ಆರ್ಥಿಕ ಸಂಕಷ್ಟ ಮತ್ತು ಬಡತನಕ್ಕೆ ಕಾರಣವಾಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಹಣಕಾಸಿನ ವಿಚಾರದಲ್ಲಿ ಮಾಡುವ ಈ ತಪ್ಪುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು… ಎಚ್ಚರ!
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Nov 10, 2026 | 6:28 PM

Share

ಹಣವನ್ನು (Money) ಸಂಪಾದಿಸುವ ಜೊತೆಗೆ, ಗಳಿಸಿದ ಹಣವನ್ನು ಉಳಿತಾಯ ಮಾಡಬೇಕು, ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡ್ಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇದೆ. ಆದರೆ ಅನೇಕರ ಕೈಯಲ್ಲಿ ಕಷ್ಟಪಟ್ಟು ಗಳಿಸಿದ ಹಣ ಉಳಿಯುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಹಣಕಾಸಿನ ವಿಚಾರದಲ್ಲಿ ಮಾಡುವ ಕೆಲವೊಂದು ತಪ್ಪುಗಳು. ಅರಿವಿಲ್ಲದೆಯೇ ಮಾಡುವಂತಹ ಈ  ಹಣಕಾಸಿನ ತಪ್ಪುಗಳು ಗಮನಾರ್ಹ ನಷ್ಟಗಳಿಗೆ ಕಾರಣವಾಗುತ್ತದೆ. ನೀವು ಸಹ  ಈ ಕೆಟ್ಟ ಅಭ್ಯಾಸಗಳನ್ನು ಸಕಾಲದಲ್ಲಿ ಸರಿಪಡಿಸಿಕೊಳ್ಳದಿದ್ದರೆ, ಈ ಆರ್ಥಿಕ ತಪ್ಪುಗಳು ನಿಮ್ಮನ್ನು ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡಬಹುದು, ಇದು ನಿಮ್ಮನ್ನು ದಿವಾಳಿಯನ್ನಾಗಿ ಮಾಡಬಹುದು.  ಹಾಗಿದ್ರೆ ಹಣಕಾಸಿನ ಯಾವ ತಪ್ಪುಗಳು ಅರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು ಎಂಬುದನ್ನು ನೋಡೋಣ ಬನ್ನಿ.

ಕ್ರೆಡಿಟ್ ಕಾರ್ಡ್‌ಗಳು ಮತ್ತು ಸಾಲಗಳ ಅತಿಯಾದ ಬಳಕೆ:

ಕ್ರೆಡಿಟ್ ಕಾರ್ಡ್‌ಗಳು ಮತ್ತು ವೈಯಕ್ತಿಕ ಸಾಲಗಳು ಅಗತ್ಯದ ಸಮಯದಲ್ಲಿ ಉಪಯುಕ್ತವಾಗಬಹುದು. ಈ ಕ್ರೆಡಿಟ್ ಕಾರ್ಡ್ ಸೌಲಭ್ಯವು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಮಾತ್ರ ಪ್ರಯೋಜನಕಾರಿಯಾಗಿದೆ. ಆದರೆ ಅವುಗಳ ಮೇಲೆ ವಿಧಿಸಲಾಗುವ ಬಡ್ಡಿಯು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ, ಕ್ರೆಡಿಟ್‌ ಕಾರ್ಡ್‌ ಮತ್ತು ವಿವಿಧ ಕಂಪೆನಿಗಳು ನೀಡುವ ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಬಜೆಟ್ ಇಲ್ಲದೆ ಅತಿಯಾಗಿ ಖರ್ಚು ಮಾಡುವುದು:

ಪ್ರತಿ ತಿಂಗಳು ನಿಮ್ಮ ಆದಾಯ ಮತ್ತು ಅಗತ್ಯ ಖರ್ಚುಗಳನ್ನು ಲೆಕ್ಕ ಹಾಕುವುದು ಮುಖ್ಯ. ಖರ್ಚು ಮಾಡುವಾಗ ಅಗತ್ಯ ಮತ್ತು ಬಯಕೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅನಗತ್ಯ ಸಾಲವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಸಂಬಳ ಬಂದ ನಂತರ, ತಿಂಗಳ ಆರಂಭದಲ್ಲಿ ನೀವು ಇಡೀ ತಿಂಗಳು ಎಷ್ಟು ಮತ್ತು ಎಲ್ಲಿ ಖರ್ಚು ಮಾಡಬೇಕೆಂದು ಬಜೆಟ್ ಮಾಡಿ. ತಿಂಗಳ ಆರಂಭದಲ್ಲಿ ಬಜೆಟ್ ಮಾಡುವುದರಿಂದ ಎಷ್ಟು ಹಣ ಖರ್ಚು ಮಾಡಬೇಕು ಮತ್ತು ಎಷ್ಟು ಉಳಿಸಬೇಕು ಎಂದು ತಿಳಿಯಲು ಸಹಾಯವಾಗುತ್ತದೆ. ಇದು ಹಣಕಾಸಿನ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ.

ತುರ್ತು ನಿಧಿಯನ್ನು ಸಂಗ್ರಹಿಸದಿರುವುದು:

ಉದ್ಯೋಗ ನಷ್ಟ, ಹಠಾತ್ ಅನಾರೋಗ್ಯ, ಮನೆ ದುರಸ್ತಿ ಅಥವಾ ಯಾವುದೇ ಇತರ ಪ್ರಮುಖ ವೆಚ್ಚಗಳು ಯಾವ ಸಮಯದಲ್ಲಿ ಬೇಕಾದರೂ ಉದ್ಭವಿಸಬಹುದು. ಅಂತಹ ಸಮಯಗಳಿಗಾಗಿ ನಿಮ್ಮ ಬಳಿ ಹಣವಿಲ್ಲದಿದ್ದರೆ, ನೀವು ಕ್ರೆಡಿಟ್ ಕಾರ್ಡ್‌ಗಳು ಅಥವಾ ಸಾಲಗಳನ್ನು ಆಶ್ರಯಿಸಬೇಕಾಗುತ್ತದೆ. ಅದೇ ತುರ್ತು ನಿಧಿಯು ಅಂತಹ ಸಂದರ್ಭಗಳಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ನಿಯಮಿತ ಉಳಿತಾಯದ ಒಂದು ಭಾಗವನ್ನು ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಿಡಿ.

ಆದಾಯ ಹೆಚ್ಚಾದಂತೆ, ಹೆಚ್ಚು ಖರ್ಚು ಮಾಡುವುದು:

ಆದಾಯ ಹೆಚ್ಚಾದಂತೆ ಕೆಲವರ ಖರ್ಚು ಕೂಡ ಗಣನೀಯವಾಗಿ ಹೆಚ್ಚಾಗುತ್ತದೆ. ಇದು ಕೂಡ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ನಿಮ್ಮ ಆದಾಯ ಹೆಚ್ಚಾದಂತೆ ನಿಮ್ಮ ಖರ್ಚನ್ನು ಹೆಚ್ಚಿಸುವ ಬದಲು, ನಿಮ್ಮ ಉಳಿತಾಯ ಮತ್ತು ಹೂಡಿಕೆಗಳನ್ನು ಹೆಚ್ಚಿಸುವುದು ಉತ್ತಮ. ಇದು ಕಾಲಾನಂತರದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನೀವು ಹಣ ಉಳಿತಾಯ ಮಾಡಲು ಬಯಸಿದರೆ, ಈ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿ

ಭವಿಷ್ಯಕ್ಕಾಗಿ ಉಳಿತಾಯ ಮತ್ತು ಹೂಡಿಕೆಗಳನ್ನು ಯೋಜಿಸದಿರುವುದು:

ಕೇವಲ ಹಣ ಸಂಪಾದನೆ ಮಾಡಿದರೆ ಸಾಲದು, ನಿಮ್ಮ ಗುರಿಗಳು ಮತ್ತು ಸಮಯದ ಪ್ರಕಾರ ನಿಮ್ಮ ಉಳಿತಾಯ ಮತ್ತು ಹೂಡಿಕೆಗಳನ್ನು ಯೋಜಿಸುವುದು ಸಹ ಮುಖ್ಯವಾಗಿದೆ. ಸರಿಯಾದ ಸ್ಥಳದಲ್ಲಿ ಹೂಡಿಕೆಯನ್ನು ಮಾಡಿ. ಹೂಡಿಕೆ ಮಾಡುವ ಮೊದಲು ನಿಮ್ಮ ಅಗತ್ಯತೆಗಳು ಮತ್ತು ಅಪಾಯದ ಹಂಬಲವನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ.

ದುಂದುವೆಚ್ಚಗಳು ಸಹ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು:

ಹಲವು ಬಾರಿ, ನಮಗೆ ಸಾಮಾನ್ಯವೆನಿಸುವ ಖರ್ಚುಗಳಿಂದಲೂ ದುಡ್ಡು ಸುಮ್ಮವೆ ವೇಸ್ಟ್‌ ಆಗುತ್ತವೆ. ಉದಾಹರಣೆಗೆ, ಕಾಲ್ನಡಿಗೆಯಲ್ಲಿ ಕ್ರಮಿಸಬಹುದಾದ ದೂರಕ್ಕೆ ಆಟೋರಿಕ್ಷಾ ಅಥವಾ ಟ್ಯಾಕ್ಸಿಯಲ್ಲಿ  ಹೋಗುವುದು ಅಥವಾ ಆಫರ್‌ ನೋಡಿ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುವುದು ಇವೆಲ್ಲವೂ ಸಣ್ಣ ವಿಷಯವಾದರೂ ಸುಮ್ಮನೆ ಹಣ ವ್ಯರ್ಥವಾಗಲು ಕಾರಣವಾಗುತ್ತದೆ. ಹಾಗಾಗಿ ವ್ಯರ್ಥ ಖರ್ಚುಗಳನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ