ಚಳಿಗಾಲದಲ್ಲಿ ಮೊದಲು ನೆನಪಿಗೆ ಬರುವುದು ಒಡೆದ ತುಟಿಗಳು ಮತ್ತು ಒಣ ಚರ್ಮ. ಆದರೆ ಇದರ ಜೊತೆಗೆ ನೀವು ಜಿಡ್ಡಿನ ಕೂದಲಿನ ಬಗ್ಗೆಯೂ ಸ್ವಲ್ಪ ಗಮನ ಹರಿಸಬೇಕಾಗುತ್ತದೆ. ತಂಪಾದ ತಾಪಮಾನ, ಶುಷ್ಕ ಗಾಳಿ ಮತ್ತು ಕಾಲೋಚಿತ ಒತ್ತಡದ ಸಂಯೋಜನೆಯು ನಿಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. “ನಾನು ಕೂದಲನ್ನು ಸರಿಯಾಗಿ ತೊಳೆಯುತ್ತಿದ್ದೇನೆಯೇ?” ಅಥವಾ “ನಾನು ಸರಿಯಾದ ಶಾಂಪೂವನ್ನು ಬಳಸುತ್ತಿದ್ದೇನೆಯೇ?” ಎಂಬುವುದರ ಬಗ್ಗೆ ನೀವು ಮೊದಲು ಯೋಚಿಸಬೇಕಾಗುತ್ತದೆ. ಹಾಗಾದರೆ ಚಳಿಗಾಲದಲ್ಲಿ ಕೂದಲು ಜಿಡ್ಡಾಗದಂತೆ ನೋಡಿಕೊಳ್ಳುವುದು ಹೇಗೆ? ಅದು ಏಕೆ ಕಂಡು ಬರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಚರ್ಮರೋಗ ತಜ್ಞ ಡಾ. ಅಪ್ರತಿಮ್ ಗೋಯೆಲ್ ಅವರು ಚಳಿಗಾಲದಲ್ಲಿ ಜಿಡ್ಡಿನ ಕೂದಲಿನ ಸಂಭಾವ್ಯ ಕಾರಣಗಳನ್ನು ತಿಳಿಸಿದ್ದಾರೆ.
1. ಶುಷ್ಕ, ತಂಪಾದ ಗಾಳಿ:
ಇದು ನಿಮಗೆ ಆಶ್ಚರ್ಯವನ್ನುಂಟುಮಾಡಬಹುದು, ಆದರೆ ಚಳಿಗಾಲದಲ್ಲಿ ಜಿಡ್ಡಿನ ಕೂದಲು ಋತುವಿನ ಶುಷ್ಕ ಮತ್ತು ತಂಪಾದ ಗಾಳಿಯಿಂದಾಗಿ ಸಂಭವಿಸುತ್ತದೆ. ಗಾಳಿಯಲ್ಲಿನ ಶುಷ್ಕತೆ ನಿಮ್ಮ ತಲೆಹೊಟ್ಟಿಗೂ ಕಾರಣವಾಗಬಹುದು.
2. ಕಾಲೋಚಿತ ಒತ್ತಡ:
ಚಳಿಗಾಲದಲ್ಲಿ ನಿಮ್ಮ ಕೂದಲಿನ ಮೇಲೆ ಹೆಚ್ಚು ಜಿಡ್ಡು ಇರುವುದನ್ನು ನೀವು ಗಮನಿಸಿರಬಹುದು. ಕೆಲವರಿಗೆ ರಜಾದಿನಗಳೇ ಒತ್ತಡದ ಸಮಯವಾಗಬಹುದು, ಇಂತಹ ಸಂದರ್ಭಗಳು ದೇಹಕ್ಕೆ ಒತ್ತಡ ನೀಡುವ ಹಾರ್ಮೋನ್ ಆದ ಕಾರ್ಟಿಸೋಲ್ನ ನನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇನ್ನು ದೇಹದಲ್ಲಿ ಕಾರ್ಟಿಸೋಲ್ ನ ಏರಿಕೆಯು ಹೆಚ್ಚು ಸೆಬಮ್ ಉತ್ಪಾದನೆಗೆ ಕಾರಣವಾಗುತ್ತದೆ, ಇದು ಎಣ್ಣೆಯುಕ್ತ ಮತ್ತು ಜಿಡ್ಡಿನ ನೆತ್ತಿಗೆ ಕಾರಣವಾಗುತ್ತದೆ.
3. ಹೆಚ್ಚುವರಿ ನಿರ್ಮಾಣ:
ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸಲು ಮೃದುವಾದ ಟೋಪಿ ಅಥವಾ ಟೈಟ್ ಕ್ಯಾಪ್ ಗಳು ನಿಮ್ಮ ರಕ್ಷಣೆಗೆ ಬರುತ್ತವೆ. ಆದರೆ, ಅವು ಜಿಡ್ಡಿನ ಕೂದಲಿಗೂ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಚಳಿಗಾಲದಲ್ಲಿ ತಲೆಗೆ ಹಾಕಿಕೊಳ್ಳುವ ಟೋಪಿಗಳು ಬೆವರಬಹುದು, ಇದು ಜಿಡ್ಡಿನ ಕೂದಲಿಗೆ ಕಾರಣವಾಗುತ್ತದೆ.
ಜಿಡ್ಡಿನ ಕೂದಲಿಗೆ ಸರಿಯಾದ ಆರೈಕೆ ಮಾಡುವುದರಿಂದ, ನಿಮ್ಮ ಕೂದಲನ್ನು ತಾಜಾ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡಬಹುದು. ಕೂದಲಿನಲ್ಲಿರುವ ಗ್ರೀಸ್ ಅಥವಾ ಜಿಡ್ಡನ್ನು ದೂರವಿಡಲು ಕೆಲವು ಸಲಹೆಗಳು ಇಲ್ಲಿವೆ.
1. ನಿಯಮಿತವಾಗಿ ಮತ್ತು ಆಗಾಗ ಕೂದಲನ್ನು ತೊಳೆಯುವುದು ಅಗತ್ಯ:
ಕೂದಲಿನಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕಲು ಮತ್ತು ಜಿಡ್ಡಿಗೆ ಕಾರಣವಾಗುವ ರಚನೆಯನ್ನು ತಡೆಯಲು ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯುವುದು ಅತ್ಯಗತ್ಯ. “ನಿಮ್ಮ ನೆತ್ತಿಯನ್ನು ಅತಿಯಾಗಿ ಒಣಗಿಸದೆ ಸಮತೋಲನವನ್ನು ಕಾಪಾಡಿಕೊಳ್ಳಲು ಸೌಮ್ಯ, ಸಲ್ಫೇಟ್ ಮುಕ್ತ ಶಾಂಪೂ ಮತ್ತು ಕಂಡೀಷನರ್ ಅನ್ನು ಆರಿಸಿಕೊಳ್ಳಿ” ಎಂದು ತಜ್ಞರು ಸಲಹೆ ನೀಡುತ್ತಾರೆ.
2. ತ್ವರಿತ ಪರಿಹಾರವಾಗಿ ಡ್ರೈ ಶಾಂಪೂ:
ನಿಮ್ಮ ಕೂದಲನ್ನು ತೊಳೆಯಲು ಸಾಧ್ಯವಾಗದ ದಿನಗಳಲ್ಲಿ, ಒಣ ಶಾಂಪೂ ಬಳಸಿ. ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳಲು ಇದು ಅನುಕೂಲಕರ ಮಾರ್ಗವಾಗಿದೆ, ಇದು ನಿಮ್ಮ ಕೂದಲನ್ನು ಪೂರ್ಣ ತೊಳೆಯದೆಯೇ ಸ್ವಚ್ಛ ನೋಟವನ್ನು ನೀಡುತ್ತದೆ. ಆದರೆ ಇದನ್ನು ನಿಯಮಿತವಾಗಿ ಬಳಸುವುದನ್ನು ತಪ್ಪಿಸಿ.
3. ತಲೆಹೊಟ್ಟಿಗೆ ಸರಿಯಾದ ಶಾಂಪೂ ಆಯ್ಕೆ ಮಾಡಿ:
ತಲೆಹೊಟ್ಟು ಜಿಡ್ಡಿಗೆ ಕಾರಣವಾಗುತ್ತದೆ ಹಾಗಾಗಿ ಸತುವಿನ ಪಿರಿಥಿಯೋನ್ ಅಥವಾ ಕೆಟೊಕೊನಜೋಲ್ನಂತಹ ಪದಾರ್ಥಗಳನ್ನು ಹೊಂದಿರುವ ತಲೆಹೊಟ್ಟನ್ನು ಶಮನಗೊಳಿಸುವ ಶಾಂಪೂವನ್ನು ಆಯ್ಕೆ ಮಾಡಿ. ಇದು ತಲೆಹೊಟ್ಟನ್ನು ನಿಯಂತ್ರಿಸಲು ಮತ್ತು ಎಣ್ಣೆಯುಕ್ತ ನೆತ್ತಿಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
4. ಮೂಲ ಸ್ಥಿತಿಯನ್ನು ಗುರುತಿಸಿ:
ತಲೆಹೊಟ್ಟು ಜಿಡ್ಡಿನ ಕೂದಲಿಗೆ ಕಾರಣವಾಗಬಹುದಾದರೂ, ಇತರ ಕೂದಲಿನ ಪರಿಸ್ಥಿತಿಗಳು ಸಹ ಸಮಸ್ಯೆಯನ್ನು ಪ್ರಚೋದಿಸಬಹುದು. ಸಾಮಾನ್ಯ ತಲೆಹೊಟ್ಟು ಮತ್ತು ಸೆಬೊರ್ಹೆಕ್ ಡರ್ಮಟೈಟಿಸ್ ಅಥವಾ ಸೋರಿಯಾಸಿಸ್ನಂತಹ ಇತರ ಮೂಲ ಪರಿಸ್ಥಿತಿಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯ. ನಿಖರವಾದ ರೋಗನಿರ್ಣಯ ಮತ್ತು ವೈಯಕ್ತೀಕರಿಸಿದ ಚಿಕಿತ್ಸಾ ಯೋಜನೆಗಾಗಿ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ. ನೀವು ಯಾವುದರಿಂದ ಬಳಲುತ್ತಿರುವಿರಿ ಎಂಬುದನ್ನು ತಿಳಿದುಕೊಳ್ಳುವುದರಿಂದ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬಿಳಿ ಕೂದಲಿನ ಸಮಸ್ಯೆಗೆ ಎಳ್ಳಿನ ಎಣ್ಣೆಯೊಂದಿಗೆ ಈ ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚಿ
5. ಅತಿಯಾದ ಶಾಖ ಮತ್ತು ಸ್ಟೈಲಿಂಗ್ ಉತ್ಪನ್ನಗಳ ಬಳಕೆಯನ್ನು ತಪ್ಪಿಸಿ:
“ಸ್ಟೈಲಿಂಗ್ ಉಪಕರಣಗಳಿಂದ ಬರುವ ಅತಿಯಾದ ಶಾಖವು ತೈಲ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜಿಡ್ಡಿನ ಅಪಾಯವನ್ನು ಕಡಿಮೆ ಮಾಡಲು ಬಿಸಿ ಉಪಕರಣಗಳು ಮತ್ತು ಸ್ಟೈಲಿಂಗ್ ಉತ್ಪನ್ನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ” ಎಂದು ತಜ್ಞರು ಹೇಳುತ್ತಾರೆ. ಬದಲಿಗೆ ಅತಿಯಾದ ಉತ್ಪನ್ನದ ಅನ್ವಯದ ಅಗತ್ಯವಿಲ್ಲದ ಕೇಶವಿನ್ಯಾಸವನ್ನು ಆರಿಸಿಕೊಳ್ಳಿ.
6. ಅತಿಯಾಗಿ ಎಣ್ಣೆ ಹಚ್ಚುವುದನ್ನು ತಪ್ಪಿಸಿ:
ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚುವುದು ಒಣ ನೆತ್ತಿ ಅಥವಾ ಒಣ ಕೂದಲಿಗೆ ಸಹಾಯಕವಾಗಬಹುದಾದರೂ, ನೆತ್ತಿಗೆ ನೇರವಾಗಿಯೇ ಅತಿಯಾದ ಎಣ್ಣೆ ಹಚ್ಚುವುದನ್ನು ತಪ್ಪಿಸಿ. “ಬೇರುಗಳಿಗೆ ತುಂಬಾ ಹತ್ತಿರವಾಗಿ ಎಣ್ಣೆಯನ್ನು ಹಚ್ಚುವುದರಿಂದ ನೆತ್ತಿಯಿಂದ ಉತ್ಪತ್ತಿಯಾಗುವ ನೈಸರ್ಗಿಕ ಸೆಬಮ್ ಮೇಲೆ ಹೆಚ್ಚುವರಿ ಪದರವನ್ನು ಸೇರಿಸುವ ಮೂಲಕ ಜಿಡ್ಡನ್ನು ಹೆಚ್ಚಿಸಬಹುದು” ಎಂದು ಡಾ. ಗೋಯೆಲ್ ಹೇಳುತ್ತಾರೆ. ಹಾಗಾಗಿ ನಿಮ್ಮ ಕೂದಲಿನ ತುದಿಗೆ ಎಣ್ಣೆಯನ್ನು ಹೆಚ್ಚು ಹಚ್ಚುವತ್ತ ಗಮನ ಹರಿಸಿ.
7. ಜಿಡ್ಡಿನ ಕೂದಲಿಗೆ ಮನೆ ಮದ್ದುಗಳು:
ನಿಮ್ಮ ಕೂದಲಿನ ಆರೈಕೆಯಲ್ಲಿ ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಿ . ಇದರಿಂದ ನಿಮ್ಮ ಕೂದಲನ್ನು ಯಾವುದೇ ರಿತೀಯ ರಾಸಾಯನಿಕ ಬಳಸದ ಉತ್ಪನ್ನಗಳಿಂದ ರಕ್ಷಿಸಬಹುದು.
ನೆನಪಿಡಿ!
ಕೂದಲಿನ ಆರೈಕೆ ಒಬ್ಬರಿಂದ ಒಬ್ಬರಿಗೆ ಬದಲಾಗಬಹುದು ಎಂಬುದನ್ನು ನೆನಪಿಡಿ ಮತ್ತು ನಿಮಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ದಿನಚರಿಯನ್ನು ಕಂಡುಕೊಳ್ಳಲು ಸ್ವಲ್ಪ ಪ್ರಯೋಗಗಳನ್ನು ಮಾಡಬೇಕಾಗಬಹುದು. ಜಿಡ್ಡು ಮುಂದುವರಿದರೆ ಅಥವಾ ಹದಗೆಡುತ್ತಿದ್ದರೆ, ಚರ್ಮರೋಗ ತಜ್ಞರಿಂದ ಮಾರ್ಗದರ್ಶನ ಪಡೆದುಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: