Home Remedies: ಬಿಳಿ ಕೂದಲಿನ ಸಮಸ್ಯೆಗೆ ಎಳ್ಳಿನ ಎಣ್ಣೆಯೊಂದಿಗೆ ಈ ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚಿ
ಕೂದಲಿಗೆ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದರಿಂದ, ಬಿಳಿ ಕೂದಲಿನ ಸಮಸ್ಯೆಯನ್ನು ಮೂಲದಿಂದ ಪರಿಹರಿಸಬಹುದು. ಇದಕ್ಕೆ ಉತ್ತಮ ಆಯ್ಕೆ ಎಂದರೆ ಎಳ್ಳೆಣ್ಣೆ. ಎಳ್ಳಿನ ಎಣ್ಣೆಯು ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದ್ದು, ಇವು ನಿಮ್ಮ ಕೂದಲನ್ನು ಕಪ್ಪಾಗಿಸುವಲ್ಲಿ ಸಹಾಯಕವಾಗಿದೆ.

ಒತ್ತಡದ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಅದರಲ್ಲಿ ಕೂದಲಿನ ಸಮಸ್ಯೆಯೂ ಒಂದು. ಹಿಂದಿನ ಕಾಲದಲ್ಲಿ ಹಿರಿಯರಲ್ಲಿ ಬಿಳಿ ಕೂದಲು ಕಂಡುಬಂದರೆ, ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲೇ ಬಿಳಿಕೂದಲಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಯೌವನದಲ್ಲಿ ಪ್ರತಿಯೊಬ್ಬರಲ್ಲೂ ಸೌಂದರ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಆದ್ದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಈ ರಾಸಾಯನಿಕಗಳು ಕೂದಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ನೀಡುತ್ತವೆ. ಆದರೆ, ಇದು ಶಾಶ್ವತ ಪರಿಹಾರವಲ್ಲ.ಬದಲಾಗಿ ಕೂದಲಿನ ಆರೋಗ್ಯ ಮತ್ತು ಸೌಂದರ್ಯವನ್ನು ಹಾಳು ಮಾಡುತ್ತದೆ. ಆದರೆ ಕೂದಲಿಗೆ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬಳಸುವುದರಿಂದ, ಬಿಳಿ ಕೂದಲಿನ ಸಮಸ್ಯೆಯನ್ನು ಮೂಲದಿಂದ ಪರಿಹರಿಸಬಹುದು. ಇದಕ್ಕೆ ಉತ್ತಮ ಆಯ್ಕೆ ಎಂದರೆ ಎಳ್ಳೆಣ್ಣೆ ಬಳಸುವುದು. ಎಳ್ಳಿನ ಎಣ್ಣೆಯು ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದ್ದು, ಇವು ನಿಮ್ಮ ಕೂದಲನ್ನು ಕಪ್ಪಾಗಿಸುವಲ್ಲಿ ಸಹಾಯಕವಾಗಿದೆ.
ಎಳ್ಳಿನ ಎಣ್ಣೆಯೊಂದಿಗೆ ಈ ವಸ್ತುಗಳನ್ನು ಬೆರೆಸಿ ಕೂದಲಿಗೆ ಹಚ್ಚಿ:
ಎಳ್ಳಿನ ಎಣ್ಣೆಗೆ ಗೋರಂಟಿ ಸೇರಿಸಿ:
ಕೂದಲು ಕಪ್ಪಾಗಾಗಿಸಲು ಎಳ್ಳೆಣ್ಣೆಯೊಂದಿಗೆ ಗೋರಂಟಿ ಎಲೆ ಅಥವಾ ಅದರ ಪುಡಿಯೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ. ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲಿನ ಹೊಳಪು ಹೆಚ್ಚಿಸಿ, ನೆತ್ತಿಯ ಸೋಂಕನ್ನು ತಡೆಯುತ್ತದೆ. ಇದರ ನಿಯಮಿತ ಬಳಕೆಯಿಂದ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದಕ್ಕಾಗಿ 1 ಕಪ್ ಎಳ್ಳಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಗೋರಂಟಿ ಪುಡಿ ಅಥವಾ ಗೋರಂಟಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ನಂತರ ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ವಾರಕ್ಕೆ ಎರಡು ಬಾರಿ ಹಚ್ಚಿ. ನಿಮ್ಮ ಕೂದಲಿಗೆ ಈ ಎಣ್ಣೆಯನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಕ್ರಮೇಣ ನಿಮ್ಮ ಕೂದಲು ಕಪ್ಪಾಗುತ್ತದೆ.
ಇದನ್ನೂ ಓದಿ: ಅತಿಯಾಗಿ ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ವಿಟಮಿನ್ ಕೊರತೆಯಿಂದ ನೀವು ಬಳಲುತ್ತಿರಬಹುದು
ಕರಿಬೇವಿನ ಎಲೆಗಳೊಂದಿಗೆ ಎಳ್ಳು ಎಣ್ಣೆ:
ಕರಿಬೇವಿನ ಪುಡಿಯನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಕರಿಬೇವಿನ ಎಲೆಗಳು ಕೂಡ ಕೂದಲು ಉದುರುವುದನ್ನು ತಡೆಯುತ್ತದೆ. ಅಲ್ಲದೆ ಇದು ಕೂದಲನ್ನು ಬಲಪಡಿಸುತ್ತದೆ. ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಇದನ್ನು ಕೂದಲಿಗೆ ಬಳಸುವ ಮೊದಲು, 1 ಕಪ್ ಎಳ್ಳಿನ ಎಣ್ಣೆಯನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಕಪ್ ಕರಿಬೇವನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ವಾರಕ್ಕೆ ಎರಡು ಬಾರಿ ನಿಯಮಿತವಾಗಿ ಅನ್ವಯಿಸಿ. ಹೀಗೆ ಮಾಡುವುದರಿಂದ ನಿಮ್ಮ ಬಿಳಿ ಕೂದಲು ಕ್ರಮೇಣ ಕಪ್ಪಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: