AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ನಿದ್ರೆ ಬೇಕೆಂದರೆ ಯಾವಾಗ ನಿಮ್ಮ ಹಾಸಿಗೆಯನ್ನು ಬದಲಾಯಿಸಬೇಕು?

ಉತ್ತಮವಾಗಿ ನಿದ್ರೆ ಮಾಡಲು ನಮ್ಮ ಹಾಸಿಗೆಯ ಜೀವಿತಾವಧಿ ಮುಗಿದಿದೆಯೇ ಎಂಬುದನ್ನು ಗಮನಿಸುವುದು ಕೂಡ ಅಗತ್ಯ. ಹಾಗಾದರೆ, ಎಷ್ಟು ಸಮಯವಾದ ನಂತರ ನಾವು ಬಳಸುವ ಹಾಸಿಗೆಯನ್ನು ಬದಲಾಯಿಸಬೇಕು? ಒಂದೇ ಹಾಸಿಗೆಯನ್ನು ಎಷ್ಟು ಅವಧಿಯವರೆಗೆ ಉಪಯೋಗಿಸಬಹುದು?

ಉತ್ತಮ ನಿದ್ರೆ ಬೇಕೆಂದರೆ ಯಾವಾಗ ನಿಮ್ಮ ಹಾಸಿಗೆಯನ್ನು ಬದಲಾಯಿಸಬೇಕು?
ನಿದ್ರೆ
ಸುಷ್ಮಾ ಚಕ್ರೆ
|

Updated on: Dec 29, 2023 | 6:01 PM

Share

ನಿದ್ರೆ ನಮ್ಮ ಜೀವನದ ಅತ್ಯಗತ್ಯ ಅಂಶ. ನಿದ್ರೆ ಸರಿಯಾಗಿ ಆಗದಿದ್ದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನಿದ್ರೆ ಸರಿಯಾಗಿ ಆಗಬೇಕೆಂದರೆ ಒಳ್ಳೆಯ ಹಾಸಿಗೆಯೂ ಅತ್ಯಗತ್ಯ. ಏಕೆಂದರೆ, ನಾವು ನಮ್ಮ ಜೀವನದ ಹೆಚ್ಚಿನ ಸಮಯವನ್ನು ನಿದ್ರೆಯಲ್ಲಿ ಕಳೆಯುತ್ತೇವೆ. ನಮ್ಮ ದೇಹಕ್ಕೆ ಆರಾಮ ನೀಡುವ ಹಾಸಿಗೆ ನಮ್ಮ ಒಳ್ಳೆಯ ಸ್ನೇಹಿತನಿದ್ದಂತೆ. ಹೀಗಾಗಿ, ಹಾಸಿಗೆಯನ್ನು ಆಯ್ಕೆ ಮಾಡಿಕೊಳ್ಳುವಾಗ ನಮ್ಮ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.

ಉತ್ತಮವಾಗಿ ನಿದ್ರೆ ಮಾಡಲು ನಮ್ಮ ಹಾಸಿಗೆಯ ಜೀವಿತಾವಧಿ ಮುಗಿದಿದೆಯೇ ಎಂಬುದನ್ನು ಗಮನಿಸುವುದು ಕೂಡ ಅಗತ್ಯ. ಹಾಗಾದರೆ, ಎಷ್ಟು ಸಮಯವಾದ ನಂತರ ನಾವು ಬಳಸುವ ಹಾಸಿಗೆಯನ್ನು ಬದಲಾಯಿಸಬೇಕು? ಒಂದೇ ಹಾಸಿಗೆಯನ್ನು ಎಷ್ಟು ಅವಧಿಯವರೆಗೆ ಉಪಯೋಗಿಸಬಹುದು? ಎಂಬುದು ನಿಮಗೆ ತಿಳಿದಿದಿಎಯೇ?

ಅಹಿತಕರ ವಾಸನೆ:

ನಿಮ್ಮ ಹಾಸಿಗೆಯು ಅಹಿತಕರ ವಾಸನೆ ಬರುತ್ತಿದೆ ಎಂದರೆ ನಿಮ್ಮ ಹಾಸಿಗೆಯೂ ದಣಿದಿದೆ, ಅದಕ್ಕೆ ವಿಶ್ರಾಂತಿ ನೀಡುವ ಸಮಯ ಬಂದಿದೆ ಎಂದು ಅರ್ಥ. ನೀವು ಹೊಸತಾಗಿ ಹಾಸಿಗೆಯನ್ನು ಖರೀದಿಸಿದಾಗ ಅದು ವಾಸನೆ ಬರುತ್ತಿದೆಯೇ ಎಂಬುದನ್ನು ಗಮನಿಸಿ. ಹಾಸಿಗೆಯಿಂದ ಕೆಟ್ಟ ವಾಸನೆ ಬರಲಾರಂಭಿಸಿದರೆ ಅದನ್ನು ತಯಾರಿಸಿ ಬಹಳ ಸಮಯವಾಗಿದೆ ಎಂದು ಅರ್ಥ.

ಇದನ್ನೂ ಓದಿ: ಉತ್ತಮ ನಿದ್ರೆಗೆ ರಾತ್ರಿ ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು?

ನಿದ್ರೆಗೆ ಸಮಸ್ಯೆ:

ನಿಮ್ಮ ಹಾಸಿಗೆಯಲ್ಲಿ ಮಲಗಿದಾಗ ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಆ ಹಾಸಿಗೆ ನಿಮಗೆ ಸರಿಯಾದುದಲ್ಲ ಎಂದರ್ಥ. ನೀವು ಹೊಸ ಹಾಸಿಗೆಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದರೆ, ಈ ಸಮಯ ಬಹಳ ದೀರ್ಘವಾಗಿದ್ದರೆ ಅಥವಾ ನೀವು ಈಗಾಗಲೇ ಬಳಸುತ್ತಿರುವ ಹಾಸಿಗೆಯಲ್ಲೇ ಇತ್ತೀಚೆಗೆ ಯಾಕೋ ನಿದ್ರೆ ಬರುತ್ತಿಲ್ಲವೆಂದಾದರೆ ಆ ಹಾಸಿಗೆಯನ್ನು ಬದಲಾಯಿಸುವುದು ಉತ್ತಮ.

ದೀರ್ಘಕಾಲದ ಬೆನ್ನು ನೋವು:

ಬೆನ್ನು ನೋವು ನಿಮ್ಮ ಹಾಸಿಗೆಯ ಕಾರಣದಿಂದಲೂ ಉಂಟಾಗುತ್ತಿರಬಹುದು. ನಿಮ್ಮ ಬೆನ್ನಿಗೆ ಆರಾಮದಾಯಕವಾದ ಹಾಸಿಗೆಯನ್ನು ಬಳಸಿ. ಅತ್ಯುತ್ತಮ ಬೆನ್ನುಮೂಳೆಯ ಬೆಂಬಲವನ್ನು ನೀಡುವ ಹಾಸಿಗೆಗಳನ್ನು ಆನ್‌ಲೈನ್‌ನಲ್ಲಿ ನೋಡಿ ಅದನ್ನು ಬಳಸಿ. ಎಲ್ಲರಿಗೂ ಒಂದೇ ರೀತಿಯ ಹಾಸಿಗೆ ಇಷ್ಟವಾಗಬೇಕು ಅಥವಾ ಆರಾಮ ನೀಡಬೇಕು ಎಂದೇನೂ ಇಲ್ಲ. ಹೀಗಾಗಿ, ನಿಮಗೆ ಅನುಕೂಲವಾಗುವಂತಹ ಹಾಸಿಗೆಯ ಬಗ್ಗೆ ಸಾಕಷ್ಟು ತಿಳಿದುಕೊಂಡು ಖರೀದಿಸಿ.

ಎಷ್ಟು ವರ್ಷ ಬಳಸಬೇಕು?:

ನೀವು 10 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಸ್ಮಾರ್ಟ್‌ಫೋನ್ ಅನ್ನು ಬಳಸಿದರೆ ಏನಾಗುತ್ತದೆ? ಅದು ಬಹಳ ಔಟ್​ಡೇಟೆಡ್ ಎಂದು ಅನಿಸುತ್ತದೆ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ವಿನ್ಯಾಸ, ಫೀಚರ್ ಇರುವ ಫೋನ್​ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಅದು ಹಾಸಿಗೆಗಳಿಗೂ ಅನ್ವಯವಾಗುತ್ತದೆ. ಹಾಸಿಗೆಗಳು ಸಹ ಜೀವಿತಾವಧಿಯನ್ನು ಹೊಂದಿವೆ. ನಿಮ್ಮ ಹಾಸಿಗೆಗೂ ನಿವೃತ್ತಿ ನೀಡಿ.

ನಿಮ್ಮ ಹಾಸಿಗೆಯನ್ನು ಹೆಚ್ಚು ಕಾಲ ಉಳಿಯುವಂತೆ ಮಾಡುವುದು ಹೇಗೆ?:

ಹಾಸಿಗೆಗೆ ಕವರ್ ಹಾಕಿ:

ಹಾಸಿಗೆಗೆ ಕವರ್ ಹಾಕಿ ಧೂಳು, ಶಿಲೀಂಧ್ರದಿಂದ ನಿಮ್ಮ ಹಾಸಿಗೆಯನ್ನು ರಕ್ಷಿಸಿ. ಇದರಿಂದ ನೀರು ಬಿದ್ದು ಕಲೆಯಾಗುವುದು, ಎಣ್ಣೆಯ ಕಲೆಯಾಗುವುದು ಮುಂತಾದ ತೊಂದರೆಗಳು ತಪ್ಪುತ್ತವೆ.

ಇದನ್ನೂ ಓದಿ: ನೀವು ಹಾಸಿಗೆಯಲ್ಲೇ ಮಾಡಬಹುದಾದ ಯೋಗಾಸನಗಳು ಇಲ್ಲಿವೆ

ಹಾಸಿಗೆಯನ್ನು ತಿರುಗಿಸಿ ಹಾಕಿ:

ಆಗಾಗ ಹಾಸಿಗೆಯನ್ನು ತಿರುಗಿಸಿ ಹಾಕಿ ಬಳಸಿ. ಈ ಸಲಹೆಯು ಝೋನ್ಡ್ ಅಥವಾ ಲೇಯರ್ಡ್ ಹೈಬ್ರಿಡ್ ಹಾಸಿಗೆಗಳಿಗೆ ಅನ್ವಯಿಸದಿದ್ದರೂ, ಹತ್ತಿಯ ಹಾಸಿಗೆಗಳಿಗೆ ಇದು ಅನ್ವಯವಾಗುತ್ತದೆ.

ಹೊಸ ಹಾಸಿಗೆ ಖರೀದಿಸುವಾಗ ನೀವು ಏನು ನೋಡಬೇಕು?:

ನಿಮ್ಮ ಹಳೆಯ ಹಾಸಿಗೆಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ನೀವು ಅರಿತುಕೊಂಡ ನಂತರ, ಆನ್‌ಲೈನ್‌ನಲ್ಲಿ ಹಾಸಿಗೆ ಖರೀದಿಸಲು ನೋಡಿದರೆ ನೀವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಸಿಗೆಯ ಗುಣಮಟ್ಟದ ಬಗ್ಗೆಯೂ ನೀವು ಗಮನ ಹರಿಸಬೇಕು.

ನೀವು ಫೋಮ್ ಹಾಸಿಗೆಯ ಹುಡುಕಾಟದಲ್ಲಿದ್ದರೆ ಉತ್ತಮ ಬ್ರಾಂಡ್​ನ ಮೆಮೊರಿ ಫೋಮ್ ಹಾಸಿಗೆಗಳನ್ನು ಖರೀದಿಸಬಹುದು. ಏಕೆಂದರೆ ಅವು ನಿಮ್ಮ ದೇಹದ ನೈಸರ್ಗಿಕ ಆಕಾರಕ್ಕೆ ಅನುಗುಣವಾಗಿರುತ್ತವೆ ಮತ್ತು ರಾತ್ರಿಯಿಡೀ ಬೆನ್ನಿಗೆ ಹೆಚ್ಚಿನ ಸಪೋರ್ಟ್ ನೀಡುತ್ತವೆ. ಹಾಗೇ, ಇದು ಹೆಚ್ಚು ಬಿಸಿಯಾಗುವುದಿಲ್ಲ. ಇದರ ಜೊತೆಗೆ ನಿಮಗೆ ಯಾವ ಸೈಜಿನ ಹಾಸಿಗೆ ಅಗತ್ಯವಿದೆ ಎಂಬುದನ್ನು ಸರಿಯಾಗಿ ನೋಡಿಕೊಂಡು ಖರೀದಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ