New Year 2024: ಈ ಹೊಸ ವರ್ಷ ಮಕ್ಕಳ ಸ್ನೇಹಿ ಆಚರಣೆಯಾಗಿರಲಿ, ಇದಕ್ಕಾಗಿ ಇಲ್ಲಿದೆ ಐಡಿಯಾ
ಇನ್ನೇನು ಈ ವರ್ಷ ಮುಗಿಯಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಉಳಿದಿರುವುದರಿಂದ, ಹೊಸ ವರ್ಷದ ಸ್ವಾಗತಕ್ಕೆ ಸನ್ನದ್ಧವಾಗಬೇಕಿದೆ. ಇದಕ್ಕಾಗಿ ಈ ತಿಂಗಳ ಕೊನೆಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ತಮ್ಮ ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಒಟ್ಟಿಗೆ ಸೇರುತ್ತಾರೆ. ಅದರಲ್ಲಿಯೂ ಮನೆಯಲ್ಲಿರುವ ಮಕ್ಕಳೊಂದಿಗೆ ಹಬ್ಬ ಮತ್ತು ರಜಾದಿನದ ಉತ್ಸಾಹವನ್ನು ಆನಂದಿಸಲು ಕೂಡ ಇದೊಂದು ಉತ್ತಮ ಮಾರ್ಗವಾಗಿದೆ. ಈ ವಿಶೇಷ ದಿನವನ್ನು ಆಚರಿಸಲು ಕೆಲವು ಮಕ್ಕಳ ಸ್ನೇಹಿ ಉಪಾಯಗಳು ಇಲ್ಲಿವೆ.
ಹೊಸ ವರ್ಷ ಇನ್ನೇನು ಹತ್ತಿರದಲ್ಲಿದೆ. ಈಗಾಗಲೇ ನಾವು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ವರುಷ ಮುಗಿದು ಮತ್ತೊಂದು ವರ್ಷಕ್ಕೆ ಕಾಲಿಡುತ್ತಿದ್ದೇವೆ. ಸಾಮಾನ್ಯವಾಗಿ ಹೊಸ ಹುರುಪು, ಉತ್ಸಾಹ ಎಲ್ಲವೂ ಇರುತ್ತದೆ. ಇನ್ನೇನು ಈ ವರ್ಷ ಮುಗಿಯಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಉಳಿದಿರುವುದರಿಂದ, ಇನ್ನು ಅದಕ್ಕೂ ಮುನ್ನ ಈ ತಿಂಗಳ ಕೊನೆಯಲ್ಲಿ ಅಂದರೆ ಡಿಸೆಂಬರ್ 31ರಂದು ಹೊಸ ವರ್ಷವನ್ನು ಸ್ವಾಗತಿಸಬೇಕಿದೆ. ಜನರು ತಮ್ಮ ಸ್ನೇಹಿತರು, ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಒಟ್ಟಿಗೆ ಸೇರುವುದರಿಂದ ಆ ನೆನೆಪು ಯಾವಾಗಲೂ ಹಸಿರಾಗಿರುತ್ತದೆ. ಅದರಲ್ಲಿಯೂ ಮನೆಯಲ್ಲಿರುವ ಮಕ್ಕಳೊಂದಿಗೆ ಹಬ್ಬ ಮತ್ತು ರಜಾದಿನದ ಉತ್ಸಾಹವನ್ನು ಆನಂದಿಸಲು ಕೂಡ ಇದೊಂದು ಉತ್ತಮ ಮಾರ್ಗವಾಗಿದೆ. ಈ ವಿಶೇಷ ದಿನವನ್ನು ಆಚರಿಸಲು ಕೆಲವು ಮಕ್ಕಳ ಸ್ನೇಹಿ ಉಪಾಯಗಳು ಇಲ್ಲಿವೆ.
ಪ್ರತಿ ಗಂಟೆಗೆ ಒಂದು ಬಲೂನ್ ಅನ್ನು ಹಾರಿಸಿ: ಹೊಸ ವರ್ಷ ಆರಂಭವಾಗುವ ಮೊದಲ ಕೆಲವು ಗಂಟೆಗಳಲ್ಲಿ ಬಲೂನ್ ಗಳನ್ನು ಊದಿ ಒಟ್ಟಿಗೆ ಇಟ್ಟುಕೊಳ್ಳಲು ಹೇಳಿ, ಬಳಿಕ ಅವುಗಳನ್ನು ಮಧ್ಯರಾತ್ರಿ ಆಗುವ ವರೆಗೆ ಪ್ರತಿ ಗಂಟೆಗೊಮ್ಮೆ ಒಂದೊಂದು ಬಲೂನ್ ಗಳನ್ನು ಹಾರಿಸಲು ಹೇಳಿ. ಇದು ಒಂದು ಮೋಜಿನ ಆಟ ಆಗುವುದರ ಜೊತೆಗೆ ಹೊಸ ವರ್ಷದ ಆಚರಣೆ ಮಾಡಲು ಮಕ್ಕಳಿಗೆ ಖುಷಿಯೂ ಸಿಗುತ್ತದೆ. ಈ ಕಲ್ಪನೆಯನ್ನು ಯಾವುದೇ ವಯಸ್ಸಿನ ಮಕ್ಕಳಿಗೂ ಮಾಡಲು ಹೇಳಬಹುದು.
ನಿಧಿ ಹುಡುಕಾಟ (Treasure hunt): ಪ್ರತಿ ವರ್ಷವೂ ಕೂಡ ನಮಗೆ ಸಾಕಷ್ಟು ನೆನಪುಗಳ ಬುತ್ತಿ ಕಟ್ಟು ಕೊಟ್ಟು ಹೋಗುತ್ತದೆ. ಹಾಗಾಗಿ ಈ ಹೊಸ ವರ್ಷದಲ್ಲಿ, ಮಕ್ಕಳಿಗಾಗಿ ನಿಧಿ ಹುಡುಕಾಟ ಮಾಡುವ ಗೇಮ್ ಸಿದ್ಧಪಡಿಸುವುದರ ಜೊತೆಗೆ ವರ್ಷದ ಅಂತಿಮ ಕ್ಷಣಗಳನ್ನು ಆನಂದಿಸುತ್ತಾ ಹೊಸ ವರ್ಷಕ್ಕೆ ವಿನೂತನ ಉಡುಗೊರೆ ದೊರೆಯಲು ದಾರಿ ಮಾಡಿಕೊಡಿ. ಇಂತಹ ಮೋಜು ಮಸ್ತಿ ಮಾಡುವುದರಲ್ಲಿ ಅವರಿಗೆ ಸಂತೋಷ ಸಿಗುವುದಲ್ಲದೆ ಹೊಸ ವರ್ಷಕ್ಕೆ ಅವರು ಹೊಸ ನೆನಪುಗಳನ್ನು ಕೊಂಡೊಯ್ಯುತ್ತಾರೆ.
ಡ್ಯಾನ್ಸ್ ಪಾರ್ಟಿ ಇಟ್ಟುಕೊಳ್ಳಿ: ನಿಮ್ಮ ಎಲ್ಲಾ ಸ್ನೇಹಿತರನ್ನು ನಿಮ್ಮ ಮನೆಗೆ ಕರೆಯಿರಿ. ಅವರೆಲ್ಲರ ಜೊತೆಗೆ ನಿಮ್ಮ ಮಕ್ಕಳ ಸ್ನೇಹಿತರನ್ನು ಕೂಡ ಆಹ್ವಾನಿಸಿ ಬಳಿಕ ಅವರ ನೆಚ್ಚಿನ ಹಾಡುಗಳನ್ನು ಪ್ಲೇ ಮಾಡಿ ಅವರಿಗೆ ಡಾನ್ಸ್ ಮಾಡಲು ಹೇಳಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ನೃತ್ಯ ಮಾಡುತ್ತಾ ಮಾಡುತ್ತಾ ಹೊಸ ವರ್ಷಕ್ಕೆ ಕಾಲಿಡಿ. ಇದು ನಿಮ್ಮ ಮಕ್ಕಳಿಗೂ ಖುಷಿ ನೀಡುತ್ತದೆ ಅದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ:ಭಾರತದ ಈ 5 ತಾಣಗಳಲ್ಲಿ ಕಡಿಮೆ ಬಜೆಟ್‌ನಲ್ಲಿ ಹೊಸ ವರ್ಷ ಆಚರಿಸಿ
ಫೋಟೋ ಬೂತ್ ಮಾಡಿ: ಮಧ್ಯರಾತ್ರಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಒಂದು ಫೋಟೋ ಬೂತ್ ಇರಿಸಿ. ನಿಮ್ಮ ಮಕ್ಕಳ ಸ್ನೇಹಿತರನ್ನು ಆಹ್ವಾನಿಸಿ. ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಮಾಡುವ ಜೊತೆಗೆ ಒಂದು ಥೀಮ್ ಅನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿ ನಿಮ್ಮ ಮಕ್ಕಳೊಂದಿಗೆ ಉಡುಪು ಧರಿಸಿ. ಫೋಟೋ ಬೂತ್ ನಲ್ಲಿ ಫೋಟೋ ಕ್ಲಿಕ್ ಮಾಡುವ ಮೂಲಕ ಹೊಸ ವರ್ಷದ ಫೋಟೋ ಆಲ್ಬಂ ಮಾಡಿ.
ಹೊಸ ವರ್ಷದಂದು ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡಲು ಹೇಳಿ: ದಿನದ ಒಂದು ಭಾಗವನ್ನು ಮಕ್ಕಳಿಗೆ ನೀಡಿ. ಆ ಸಮಯದಲ್ಲಿ ಮಕ್ಕಳನ್ನು ಒಟ್ಟುಗೂಡಿಸಿ, ಮುಂಬರುವ ವರ್ಷದಲ್ಲಿ ಅವರ ನಿರ್ಣಯ ಅಥವಾ ಮಾಡಬೇಕಾದ ಕೆಲಸಗಳನ್ನು ಚರ್ಚಿಸಿ, ಅದನ್ನು ಪಟ್ಟಿ ಮಾಡಲು ಹೇಳಿ. ನೀವು ಅವರಿಗೆ ಸ್ವಲ್ಪ ಸಹಾಯ ಮಾಡಿ. ಒಳ್ಳೆಯ ನಿರ್ಧಾರಗಳ ಜೊತೆಯಲ್ಲಿ ಕೆಲವು ಮೋಜಿನ ಸಂಗತಿಗಳು ಇರುವಂತೆ ನೋಡಿಕೊಳ್ಳಿ. ಇದರಿಂದ ಮಕ್ಕಳಿಗೂ ಕುತೂಹಲ ಮತ್ತು ಆಸಕ್ತಿ ಬೆಳೆಯುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: