Too sweet: ಆಹಾರದಲ್ಲಿ ಸಕ್ಕರೆ ಸೇವನೆ ಮಾಡುವುದನ್ನು ಕಡಿಮೆ ಮಾಡಲು ಇಲ್ಲಿವೆ 6 ಸರಳ ಸಲಹೆಗಳು
ಅತಿಯಾದ ಸಕ್ಕರೆಯನ್ನು ಸೇವನೆ ಮಾಡುವ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಧುಮೇಹ ಮತ್ತು ಬೊಜ್ಜಿನಂತಹ ಆರೋಗ್ಯ ಸಮಸ್ಯೆಗಳಲ್ಲಿ ಸಕ್ಕರೆ ಹೆಚ್ಚಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಿಮ್ಮ ಆರೋಗ್ಯದ ದೃಷ್ಠಿಯಿಂದ ಆಹಾರದಲ್ಲಿ ಸಕ್ಕರೆಯನ್ನು ಕಡಿಮೆ ಮಾಡಬಹುದು. ಹೇಗೆ? ಇಲ್ಲಿದೆ ಮಾಹಿತಿ.
ನೀವು ಸಕ್ಕರೆ ಪ್ರೀಯರಾ? ಎಷ್ಟೇ ಪ್ರಯತ್ನ ಪಟ್ಟರೂ ಸಹ ಸಕ್ಕರೆ ಸೇವನೆ ಮಡುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲವಾ? ಬೆಳಗ್ಗಿನ ಒಂದು ಕಪ್ ಚಹಾವನ್ನು ಹೆಚ್ಚು ಶುಗರ್ ಜೊತೆಯಲ್ಲಿ ಹೀರಲು ಇಷ್ಟಪಡುತ್ತೀರಾ? ಊಟವಾದ ಮೇಲೆ ಸಿಹಿ ತಿನಿಸುಗಳನ್ನು ತಿನ್ನಲು ಹುಡುಕಾಡುತ್ತೀರಾ? ಇದು ಒಂದು ಎರಡು ಬಾರಿಯಾದರೆ ಪರವಾಗಿಲ್ಲ ಆದರೆ ಅತಿಯಾದ ಸಕ್ಕರೆಯನ್ನು ಸೇವನೆ ಮಾಡುವ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಧುಮೇಹ ಮತ್ತು ಬೊಜ್ಜಿನಂತಹ ಆರೋಗ್ಯ ಸಮಸ್ಯೆಗಳಲ್ಲಿ ಸಕ್ಕರೆ ಹೆಚ್ಚಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ನಿಮ್ಮ ಆರೋಗ್ಯದ ದೃಷ್ಠಿಯಿಂದ ಆಹಾರದಲ್ಲಿ ಸಕ್ಕರೆಯನ್ನು ಕಡಿಮೆ ಮಾಡಬಹುದು. ಹೇಗೆ? ಇಲ್ಲಿದೆ ಮಾಹಿತಿ.
ನಿಮ್ಮ ಆಹಾರದಲ್ಲಿ ಸಕ್ಕರೆಯನ್ನು ಕಡಿಮೆ ಮಾಡುವುದು ಹೇಗೆ?
ನಿಮ್ಮ ಆಹಾರದಲ್ಲಿ ಸಕ್ಕರೆ ಆದಷ್ಟು ಕಡಿತಗೊಳಿಸಲು ಮತ್ತು ಆರೋಗ್ಯಕರ ಜೀವನಕ್ಕಾಗಿ ನಿಮಗೆ ಕೆಲವು ಪರಿಣಾಮಕಾರಿ ಸಲಹೆಗಳು ಇಲ್ಲಿವೆ. ನೀವು ಮಧುಮೇಹಿಯಾಗಿರಲಿ ಅಥವಾ ಇಲ್ಲದಿರಲಿ, ಈ ಸಲಹೆಗಳು ನಿಮಗೆ ಸಹಾಯಕವಾಗಬಹುದು!
1. ನೈಸರ್ಗಿಕ ಸಿಹಿಕಾರಕಗಳನ್ನು ಆರಿಸಿಕೊಳ್ಳಿ
ಸಂಸ್ಕರಿಸಿದ ಸಕ್ಕರೆಯ ಬದಲು ಜೇನುತುಪ್ಪ, ಬೆಲ್ಲ ಅಥವಾ ಮೇಪಲ್ ಸಿರಪ್ ನಂತಹ ನೈಸರ್ಗಿಕ ಸಿಹಿಕಾರಕಗಳನ್ನು ಆರಿಸಿಕೊಳ್ಳಿ. “ಈ ಪರ್ಯಾಯಗಳು ನಿಮ್ಮ ಆಹಾರದಲ್ಲಿ ಸಿಹಿಯನ್ನು ಸೇರಿಸುವುದಲ್ಲದೆ, ನಿಮ್ಮ ಭಕ್ಷ್ಯಗಳಿಗೆ ವಿಶಿಷ್ಟ ರುಚಿಗಳನ್ನು ತರುತ್ತವೆ” ಎಂದು ಪೌಷ್ಟಿಕ ತಜ್ಞ ಅವನಿ ಕೌಲ್ ಹೇಳುತ್ತಾರೆ. ಅನೇಕ ಭಾರತೀಯ ಮನೆಗಳಲ್ಲಿ ಸಾಂಪ್ರದಾಯಿಕ ಸಿಹಿಕಾರಕವಾದ ಬೆಲ್ಲವು ಆರೋಗ್ಯಕರ ಆಯ್ಕೆಯಾಗಿದೆ.
2. ಮಸಾಲೆಗಳ ಪರಿಮಳವನ್ನು ಸವಿಯಿರಿ
ಭಾರತೀಯ ಪಾಕ ಪದ್ಧತಿಯು ಸುವಾಸನೆಯುಕ್ತ ಮಸಾಲೆಗಳಿಗೆ ಹೆಸರುವಾಸಿಯಾಗಿದೆ. “ನಿಮ್ಮ ಭಕ್ಷ್ಯಗಳ ಸಿಹಿಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ದಾಲ್ಚಿನ್ನಿ, ಏಲಕ್ಕಿ ಮತ್ತು ಜಾಯಿಕಾಯಿಯಂತಹ ಮಸಾಲೆಗಳನ್ನು ಬಳಸಿ. ಇದು ರುಚಿಯ ಜೊತೆಗೆ ಹೆಚ್ಚುವರಿ ಸಕ್ಕರೆಯನ್ನು ಕಡಿಮೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ” ಎಂದು ತಜ್ಞರು ಹೇಳುತ್ತಾರೆ.
3. ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಗಳನ್ನು ತಿನ್ನಿ
ನಿಮಗೆ ಬೇಕಾದ ಸಿಹಿ ತಿಂಡಿಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಿ, ಇದರಿಂದ ಸಿಹಿ ಪದಾರ್ಥಗಳನ್ನು ತಿನ್ನುವಾಗ ನಿಮಗೆ ಸ್ವಲ್ಪವಾದರೂ ನಿಯಂತ್ರಣ ಸಿಗುತ್ತದೆ. ಕಡಿಮೆ ಸಕ್ಕರೆಯನ್ನು ಬಳಸುವ ಮೂಲಕ ಅಥವಾ ಸಿಹಿಗೆ ಆರೋಗ್ಯಕರ ಪರ್ಯಾಯಗಳನ್ನು ಸಂಯೋಜಿಸುವ ಪಾಕವಿಧಾನಗಳನ್ನು ಮನೆಯಲ್ಲಿ ಪ್ರಯೋಗ ಮಾಡಿ. ಈ ರೀತಿಯಾಗಿ, ನೀವು ನಿಮ್ಮ ಇಷ್ಟಕ್ಕೆ ತಕ್ಕಂತೆ ಸಿಹಿಯನ್ನು ಹೊಂದಿಸಿಕೊಳ್ಳಬಹುದು ಮತ್ತು ಒಟ್ಟಾರೆ ಸಕ್ಕರೆ ಅಂಶವನ್ನು ಕ್ರಮೇಣ ಕಡಿಮೆ ಮಾಡಬಹುದು.
4. ಸಂಸ್ಕರಿಸಿದ ಸಕ್ಕರೆಗಳ ಬಗ್ಗೆ ಜಾಗರೂಕರಾಗಿರಿ
ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಆಹಾರಗಳು ಹೆಚ್ಚಾಗಿ ಗೊತ್ತಿಲ್ಲದ ಹಾಗೆ ಸಕ್ಕರೆಗಳನ್ನು ಹೊಂದಿರುತ್ತವೆ. ಹಾಗಾಗಿ ಲೇಬಲ್ ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಮತ್ತು ಸುಕ್ರೋಸ್, ಗ್ಲೂಕೋಸ್ ಮತ್ತು ಫ್ರಕ್ಟೋಸ್ ನಂತಹ ಪದಗಳ ಬಗ್ಗೆ ಜಾಗರೂಕರಾಗಿರಿ. ಸಕ್ಕರೆ ಅಂಶದ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಲು, ಸಂಪೂರ್ಣವಾಗಿ ತಾಜಾ ಆಹಾರಗಳನ್ನು ಆರಿಸಿಕೊಳ್ಳಿ.
5. ಸಿಹಿಯಾದ ಪಾನೀಯಗಳನ್ನು ಮಿತಿಗೊಳಿಸಿ
ಸೋಡಾ ಮತ್ತು ಹೆಚ್ಚು ಸಿಹಿಯಾಗಿರುವ ಚಹಾಗಳಂತಹ ಪಾನೀಯಗಳನ್ನು ಕುಡಿಯುವುದನ್ನು ಕಡಿಮೆ ಮಾಡಿ. ಬದಲಿಗೆ, ಇದಕ್ಕೆ ಉತ್ತಮ ಪರ್ಯಾಯವಾದ ಗಿಡಮೂಲಿಕೆ ಚಹಾಗಳನ್ನು ಆರಿಸಿ ಅಥವಾ ಹಣ್ಣಿನ ರಸಗಳನ್ನು ಆಯ್ದುಕೊಳ್ಳಿ. ಸಾಂಪ್ರದಾಯಿಕ ಭಾರತೀಯ ಪಾನೀಯಗಳಾದ ನಿಂಬು ಪಾನಿಯ ಅಥವಾ ಮಜ್ಜಿಗೆಯಂತಹ ಪಾನೀಯಗಳನ್ನು ಹೆಚ್ಚುವರಿ ಸಕ್ಕರೆಗಳಿಲ್ಲದೆ ಆನಂದಿಸಬಹುದು.
ಇದನ್ನೂ ಓದಿ:ಕೃತಕ ಸಿಹಿಕಾರಕಗಳು ಆರೋಗ್ಯಕ್ಕೆ ಕಹಿ
6. ಫಲಪ್ರದ ಪರ್ಯಾಯಗಳು
ನಿಮ್ಮ ಸಿಹಿ ತಿನ್ನುವ ಬಯಕೆಯನ್ನು ತೃಪ್ತಿಪಡಿಸಿಕೊಳ್ಳಲು ಹಣ್ಣುಗಳಲ್ಲಿರುವ ನೈಸರ್ಗಿಕ ಸಿಹಿಯನ್ನು ಬಳಸಿಕೊಳ್ಳಿ. ತಾಜಾ ಹಣ್ಣುಗಳನ್ನು ಸಿಹಿ ತಿಂಡಿಗಳಲ್ಲಿ ಸೇರಿಸಿ ಅಥವಾ ಅದನ್ನೇ ತಿಂಡಿಗಳಾಗಿ ಆನಂದಿಸಿ. ಹಣ್ಣಿನ ಚಾಟ್ ಅಥವಾ ಮಸಾಲೆಗಳ ಜೊತೆಯಲ್ಲಿ ಹುರಿದ ಹಣ್ಣುಗಳು ಸಿಹಿ ತಿಂಡಿಗಳಿಗೆ ಉತ್ತಮ ಪರ್ಯಾಯವಾಗಿವೆ.
ನಿಮ್ಮ ದೈನಂದಿನ ಜೀವನದಲ್ಲಿ ಈ ಸಲಹೆಗಳನ್ನು ಅನುಸರಿಸುವ ಮೂಲಕ, ನಿಮ್ಮ ಸಕ್ಕರೆ ಸೇವನೆಯನ್ನು ಸಕ್ರಿಯವಾಗಿ ಕಡಿಮೆ ಮಾಡಬಹುದು ಜೊತೆಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ನೆನಪಿಡಿ, ಸಣ್ಣ ಬದಲಾವಣೆ ಮತ್ತು ಉತ್ತಮ ಆಯ್ಕೆ ಮಾಡುವುದು ಆರೋಗ್ಯಕ್ಕೆ ಹಾಗೂ ಹೆಚ್ಚು ಸಮತೋಲಿತ ಆಹಾರದ ಸೇವನೆಗೆ ಕಾರಣವಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: