Tongue Brunt: ಬಿಸಿಯಾದ ಆಹಾರ ತಿಂದು ನಾಲಿಗೆ ಸುಟ್ಟಿದೆಯಾ? ಈ ಮನೆಮದ್ದು ಅನುಸರಿಸಿ
ನಾಲಿಗೆಯು ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿರುವುದರಿಂದ ಆಹಾರ ಸೇವನೆಯ ಸಮಯದಲ್ಲಿ ಹೆಚ್ಚಿನ ಜಾಗ್ರತೆವಹಿಸುವುದು ಅತ್ಯಂತ ಅಗತ್ಯವಾಗಿರುತ್ತದೆ.ಬಿಸಿ ಆಹಾರ ಅಥವಾ ಹಾಲು, ಟೀ ಕುಡಿದಾಗ ಸುಟ್ಟು ಹೋದರೆ ಅದರ ನೋವು ಎರಡು ಮೂರು ದಿನದ ವರೆಗೆ ಇರುತ್ತದೆ. ಆದ್ದರಿಂದ ಇನ್ನು ಮುಂದೆ ಬಿಸಿಯಾದ ಆಹಾರ ತಿಂದು ನಾಲಿಗೆ ಸುಟ್ಟಿದ್ದರೆ ಈ ಮನೆಮದ್ದು ಅನುಸರಿಸಿ.
ಸಾಕಷ್ಟು ಜನರಿಗೆ ಬಿಸಿ ಹಾಲು ಅಥವಾ ಟೀ ಕುಡಿದಾಗ ನಾಲಿಗೆ ಸುಟ್ಟು ಹೋಗುತ್ತದೆ. ಇದರಿಂದಾಗಿ ಮತ್ತೆ ಯಾವುದೇ ಆಹಾರ ಸೇವಿಸಿದರೂ ಅದರ ರುಚಿ ಸಿಗುವುದಿಲ್ಲ. ನಾಲಿಗೆಯು ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿರುವುದರಿಂದ ಆಹಾರ ಸೇವನೆಯ ಸಮಯದಲ್ಲಿ ಹೆಚ್ಚಿನ ಜಾಗ್ರತೆವಹಿಸುವುದು ಅತ್ಯಂತ ಅಗತ್ಯವಾಗಿರುತ್ತದೆ. ಬಿಸಿ ಆಹಾರ ಅಥವಾ ಹಾಲು, ಟೀ ಕುಡಿದಾಗ ಸುಟ್ಟು ಹೋದರೆ ಅದರ ನೋವು ಎರಡು ಮೂರು ದಿನದ ವರೆಗೆ ಇರುತ್ತದೆ. ಆದ್ದರಿಂದ ಇನ್ನು ಮುಂದೆ ಬಿಸಿಯಾದ ಆಹಾರ ತಿಂದು ನಾಲಿಗೆ ಸುಟ್ಟಿದ್ದರೆ ಈ ಮನೆಮದ್ದು ಅನುಸರಿಸಿ.
ಸುಟ್ಟ ನಾಲಿಗೆಗೆ ಮನೆಮದ್ದು:
ಸಕ್ಕರೆ:
ಸಕ್ಕರೆಯು ನಾಲಿಗೆ ಸುಟ್ಟಗಾಯಗಳನ್ನು ಶಮನಗೊಳಿಸುವಲ್ಲಿ ಉತ್ತಮ ಔಷಧಿಯಾಗಿದೆ. ಬಿಸಿ ಆಹಾರ ತಿಂದಾಗ ನಾಲಿಗೆ ಉರಿಯುತ್ತಿದ್ದರೆ ಸಕ್ಕರೆಯನ್ನು ಬಾಯಿಗೆ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಇಡಿ. ಈ ರೀತಿ ಮಾಡುವುದರಿಂದ ನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ.
ಮೊಸರು:
ಬಿಸಿ ಆಹಾರ ತಿಂದು ನಾಲಿಗೆ ಸುಟ್ಟು ಹೋಗಿದ್ದರೆ ತಕ್ಷಣ ಮೊಸರು ತಿನ್ನಿ. ಇದು ಉರಿಯನ್ನು ಶಮನಗೊಳಿಸಿ, ತಂಪಿನ ಅನುಭವ ನೀಡುತ್ತದೆ. ಸ್ವಲ್ಪ ಹೊತ್ತು ಬಾಯಿಯಲ್ಲಿ ಮೊಸರು ಇಟ್ಟುಕೊಂಡರೆ ಉರಿ ಮತ್ತು ನೋವು ಎರಡೂ ಕಡಿಮೆಯಾಗುತ್ತದೆ. ಮೊಸರು ಆರೋಗ್ಯಕ್ಕೂ ಕೂಡ ಒಳ್ಳೆಯದು.
ಇದನ್ನೂ ಓದಿ: ಆಹಾರದಲ್ಲಿ ಸಕ್ಕರೆ ಸೇವನೆ ಮಾಡುವುದನ್ನು ಕಡಿಮೆ ಮಾಡಲು ಇಲ್ಲಿವೆ 6 ಸರಳ ಸಲಹೆಗಳು
ಜೇನುತುಪ್ಪ:
ಜೇನುತುಪ್ಪವು ನಾಲಿಗೆಯ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಜೇನುತುಪ್ಪವನ್ನು ನೆಕ್ಕುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಇದನ್ನು ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು.
ಐಸ್ ಕ್ಯೂಬ್:
ಕೆಲವೊಮ್ಮೆ ಬಿಸಿ ಆಹಾರ ಒಮ್ಮೆಲೇ ತಿನ್ನಲು ಪ್ರಯತ್ನಿಸಿದಾಗ ಸುಟ್ಟ ನೋವುಂಟಾಗುತ್ತದೆ. ಇದಲ್ಲದೇ ಕೆಲವೊಮ್ಮೆ ನಾಲಿಗೆ ಕಚ್ಚಿ ಹೋಗಿಬಿಡುತ್ತದೆ.ಈ ಸಂದರ್ಭದಲ್ಲಿ ಇದು ತುಂಬಾ ನೋವಿನಿಂದ ಕೂಡಿರುವುದರಿಂದ ಈ ಸಮಸ್ಯೆಗೆ ನಿವಾರಣೆಗೆ ಐಸ್ ಕ್ಯೂಬ್ ಅನ್ನು ಕೆಲ ಹೊತ್ತಿನ ವರೆಗೆ ಬಾಯಲ್ಲಿ ಇಟ್ಟುಕೊಳ್ಳಿ.
ಬಿಸಿ ಆಹಾರದಿಂದ ನಾಲಿಗೆ ಸುಟ್ಟು ಹೋಗಿದ್ದರೆ, ಸಾಧ್ಯವಾದಷ್ಟು ಸರಳವಾದ, ತಣ್ಣನೆಯ ಆಹಾರವನ್ನು ಸೇವಿಸಿ. ಮಸಾಲೆಯುಕ್ತ ಆಹಾರದಿಂದ ದೂರವಿರುವುದು ಉತ್ತಮ. ತಣ್ಣನೆಯ ಆಹಾರ ನಾಲಿಗೆಯನ್ನು ತಂಪಾಗಿಸುತ್ತದೆ ಮತ್ತು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ