ಹೊಸ ವರ್ಷದಲ್ಲಿ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಫಿಟ್​ನೆಸ್ ಸಲಹೆಗಳಿವು

ಊಟದ ನಂತರ ವಾಕಿಂಗ್ ಮಾಡುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಗ್ಯಾಸ್ ತುಂಬುವುದು, ಜೀರ್ಣಕ್ರಿಯೆಯ ಸಮಸ್ಯೆ ಮತ್ತು ಇತರ ಸಮಸ್ಯೆಗಳನ್ನು ದೂರವಿಡುತ್ತದೆ. ಈ ಸುಲಭವಾದ, ಸರಳವಾದ ವ್ಯಾಯಾಮವು ಒಳಗಿನಿಂದ ಆರೋಗ್ಯಕರವಾಗಿರಲು ನಿಮಗೆ ಸಹಾಯ ಮಾಡುತ್ತದೆ.

ಹೊಸ ವರ್ಷದಲ್ಲಿ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಫಿಟ್​ನೆಸ್ ಸಲಹೆಗಳಿವು
ಫಿಟ್ನೆಸ್
Follow us
ಸುಷ್ಮಾ ಚಕ್ರೆ
|

Updated on: Dec 30, 2023 | 12:28 PM

ಹೊಸ ವರ್ಷವನ್ನು ಪ್ರಾರಂಭಿಸುತ್ತಿದ್ದಂತೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲು ನಮ್ಮಲ್ಲಿ ಅನೇಕರು ಫಿಟ್‌ನೆಸ್ ಗೋಲ್ ಹಾಕಿಕೊಳ್ಳುತ್ತಾರೆ. ಹೊಸ ವರ್ಷದಿಂದ ಜಿಮ್, ಯೋಗ, ವ್ಯಾಯಾಮಗಳನ್ನು ಮಾಡಬೇಕೆಂದು ಬಹುತೇಕ ಜನರು ನಿರ್ಧಾರ ಮಾಡುತ್ತಾರೆ. ಆದರೆ, ಜನವರಿ ತಿಂಗಳು ಮುಗಿಯುವಷ್ಟರಲ್ಲಿ ಆ ನಿರ್ಧಾರಕ್ಕೆ ಎಳ್ಳು-ನೀರು ಬಿಟ್ಟಾಗುತ್ತದೆ. ನೀವು ಕೂಡ ಹೊಸ ವರ್ಷದಲ್ಲಿ ಫಿಟ್ ಆಗಿರಬೇಕು, ತೂಕ ಇಳಿಸಿಕೊಳ್ಳಬೇಕು ಅಥವಾ ಉತ್ತಮ ರೀತಿಯ ಡಯೆಟ್ ಫಾಲೋ ಮಾಡಬೇಕೆಂಬ ಗುರಿಗಳನ್ನು ಹೊಂದಿದ್ದರೆ ಈ ಕೆಲವು ಸಲಹೆಗಳನ್ನು ತಪ್ಪದೇ ಪಾಲಿಸಿ.

ವಾಕಿಂಗ್ ಮಾಡಿ:

ಊಟದ ನಂತರ ವಾಕಿಂಗ್ ಮಾಡುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಗ್ಯಾಸ್ ತುಂಬುವುದು, ಜೀರ್ಣಕ್ರಿಯೆಯ ಸಮಸ್ಯೆ ಮತ್ತು ಇತರ ಸಮಸ್ಯೆಗಳನ್ನು ದೂರವಿಡುತ್ತದೆ. ಈ ಸುಲಭವಾದ, ಸರಳವಾದ ವ್ಯಾಯಾಮವು ಒಳಗಿನಿಂದ ಆರೋಗ್ಯಕರವಾಗಿರಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Care: ದಿನವೂ ವರ್ಕ್​ಔಟ್ ಮಾಡಿದ ನಂತರ ನಿಮಗೆ ಶಕ್ತಿ ನೀಡುವ 7 ಆಹಾರ​ಗಳಿವು

ವರ್ಕ್​ಔಟ್ ಮಾಡಿ:

ವರ್ಕ್​ಔಟ್ ಮಾಡಲು 2-3 ತಿಂಗಳುಗಳವರೆಗೆ ವೈಯಕ್ತಿಕ ತರಬೇತುದಾರರನ್ನು ನೇಮಿಸಿಕೊಳ್ಳಬಹುದು. ನೀವು ವೈಯಕ್ತಿಕವಾಗಿ ತರಬೇತುದಾರರ ಬಳಿಗೆ ಹೋಗಲು ಸಾಧ್ಯವಾಗದಿದ್ದರೆ ಆನ್‌ಲೈನ್ ತರಬೇತುದಾರರನ್ನು ಆರಿಸಿಕೊಳ್ಳಿ. ಅಥವಾ ಯೂಟ್ಯೂಬ್​ನಲ್ಲೇ ಹಲವು ಫಿಟ್‌ನೆಸ್ ವೀಡಿಯೊಗಳಿವೆ. ಅದನ್ನು ನೋಡಿಕೊಂಡು ಕೂಡ ಪ್ರಾಕ್ಟೀಸ್ ಮಾಡಬಹುದು.

ಫಿಟ್‌ನೆಸ್‌ನತ್ತ ಸಣ್ಣ ಹೆಜ್ಜೆ ಇರಿಸಿ:

ಫಿಟ್‌ನೆಸ್ ನಮ್ಮ ಜೀವನಶೈಲಿಯಾಗಿದ್ದರೂ ನಮ್ಮಲ್ಲಿ ಹೆಚ್ಚಿನವರಿಗೆ ಆರೋಗ್ಯಕರ ಆಹಾರ ಸೇವನೆಯು ಒಂದು ಶಿಕ್ಷೆಯಂತೆ ಭಾಸವಾಗುತ್ತದೆ. ನೀವು ಸೇವಿಸುವ ಆಹಾರವನ್ನು ಇಷ್ಟಪಟ್ಟು ತಿನ್ನಿ. ಫಿಟ್ನೆಸ್ ಕಡೆಗೆ ಸಣ್ಣ ಹೆಜ್ಜೆಗಳನ್ನು ಇಡುವುದರಿಂದ ಆರಂಭಿಸಿ. ಒಂದೇ ಬಾರಿಗೆ ಎಲ್ಲವನ್ನೂ ಮಾಡಲು ಹೋಗಬೇಡಿ. ಅದರಿಂದ ನಿಮಗೆ ಹಿಂಸೆ ಎನಿಸುತ್ತದೆ.

ಮಧ್ಯಂತರ ಉಪವಾಸ ಮಾಡಿ:

ಮಧ್ಯಂತರ ಉಪವಾಸವೆಂದರೆ ನೀವು ಕೇವಲ 12 ಗಂಟೆಗಳ ಕಾಲ ಉಪವಾಸವನ್ನು ಮಾಡಿದರೂ ಸಹ ಪ್ರಯೋಜನಕಾರಿಯಾಗಬಹುದು. ಇಡೀ ದಿನ ಉಪವಾಸದಿಂದ ಇರುವ ಬದಲು ಅರ್ಧ ದಿನ ಉಪವಾಸ ಮಾಡಿ. ಮಧ್ಯಂತರ ಉಪವಾಸವನ್ನು ಸುಲಭವಾಗಿ ಜೀವನಶೈಲಿ ಅಭ್ಯಾಸಕ್ಕೆ ಅಳವಡಿಸಿಕೊಳ್ಳಬಹುದು ಮತ್ತು ಉಪವಾಸದ ಅವಧಿಯನ್ನು ಹೆಚ್ಚಿಸುವ ಮೂಲಕ ನಿಧಾನವಾಗಿ ನಿಮ್ಮ ದೇಹವನ್ನು ಅಡ್ಜಸ್ಟ್ ಮಾಡಿಕೊಳ್ಳಲು ಅವಕಾಶ ನೀಡಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ತೂಕ ಇಳಿಸಬೇಕಾ? ಈ 7 ಹಣ್ಣುಗಳನ್ನು ಮಿಸ್ ಮಾಡಬೇಡಿ

ಫ್ರೆಶ್ ಆಗಿ ತಯಾರಿಸಿದ ಆಹಾರ ಸೇವಿಸಿ:

ಹೊಸದಾಗಿ ಬೇಯಿಸಿದ, ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನುವುದು ಪೌಷ್ಟಿಕಾಂಶ ಮಾತ್ರವಲ್ಲ ಇದು ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ. ಇದು ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳನ್ನು ದೂರವಿರಿಸುತ್ತದೆ. ಹೀಗಾಗಿ, ಫ್ರಿಡ್ಜ್​​ನಲ್ಲಿಟ್ಟ ಆಹಾರ ಸೇವಿಸುವುದು ಅಥವಾ ಹಿಂದಿನ ದಿನದ ಆಹಾರ ಸೇವನೆಯನ್ನು ಆದಷ್ಟೂ ಕಡಿಮೆ ಮಾಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ