Blue Zone Diet: ಏನಿದು ಬ್ಲೂ ಜೋನ್ ಡಯೆಟ್?; ಇದರಿಂದ ತೂಕ ಇಳಿಸುವ ವಿಧಾನ ಇಲ್ಲಿದೆ

ನೀಲಿ ವಲಯದಲ್ಲಿ ವಾಸಿಸುವ ಜನರು ಆಹಾರ, ವಿಶ್ರಾಂತಿ, ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಜೀವನಶೈಲಿಯಿಂದಾಗಿ ದೀರ್ಘಾವಧಿಯ ಜೀವನವನ್ನು ನಡೆಸುತ್ತಾರೆ. ನೀವು ನೀಲಿ ವಲಯದ ಡಯೆಟ್ ಮಾಡುವುದಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ರೂಪದಲ್ಲಿ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಲು ಪ್ರಯತ್ನಿಸಿ.

Blue Zone Diet: ಏನಿದು ಬ್ಲೂ ಜೋನ್ ಡಯೆಟ್?; ಇದರಿಂದ ತೂಕ ಇಳಿಸುವ ವಿಧಾನ ಇಲ್ಲಿದೆ
ಹಸಿರು ತರಕಾರಿImage Credit source: iStock
Follow us
ಸುಷ್ಮಾ ಚಕ್ರೆ
|

Updated on:Nov 20, 2023 | 3:38 PM

ಇತ್ತೀಚೆಗೆ ಬ್ಲೂ ಜೋನ್ ಡಯೆಟ್​ ಬಹಳ ಜನಪ್ರಿಯವಾಗುತ್ತಿದೆ. ಇದು ಪ್ರಪಂಚದ 5 ನೀಲಿ ವಲಯಗಳಲ್ಲಿ ಬಳಸುವ ಆಹಾರ ಪದ್ಧತಿಯಾಗಿದೆ. ಅಲ್ಲಿನ ನಿವಾಸಿಗಳು ದೀರ್ಘ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ. ಹೀಗಾಗಿ, ನೀಲಿ ವಲಯಗಳ ಡಯೆಟ್ ಪ್ಲಾನ್ ಅನ್ನು ಅನೇಕರು ಅಳವಡಿಸಿಕೊಳ್ಳುತ್ತಿದ್ದಾರೆ. ಈ ನೀಲಿ ವಲಯಗಳಲ್ಲಿ ಗ್ರೀಸ್‌ನ ಇಕಾರಿಯಾ, ಜಪಾನ್‌ನ ಓಕಿನಾವಾ, ಇಟಲಿಯ ಸಾರ್ಡಿನಿಯಾದ ಒಗ್ಲಿಯಾಸ್ಟ್ರಾ, ಕ್ಯಾಲಿಫೋರ್ನಿಯಾದ ಲೋಮಾ ಲಿಂಡಾದ ಸೆವೆಂತ್-ಡೇ ಅಡ್ವೆಂಟಿಸ್ಟ್‌ಗಳ ಸಮುದಾಯ ಮತ್ತು ಕೋಸ್ಟರಿಕಾದ ನಿಕೋಯಾ ಪೆನಿನ್ಸುಲಾ ಸೇರಿವೆ.

ನೀಲಿ ವಲಯದಲ್ಲಿ ವಾಸಿಸುವ ಜನರು ಆಹಾರ, ವಿಶ್ರಾಂತಿ, ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಜೀವನಶೈಲಿಯಿಂದಾಗಿ ದೀರ್ಘಾವಧಿಯ ಜೀವನವನ್ನು ನಡೆಸುತ್ತಾರೆ. ಜನರು ಮತ್ತು ಅವರ ಆಹಾರ ಪದ್ಧತಿಗಳಿಂದ ಪ್ರಭಾವಿತರಾಗಿ ಖ್ಯಾತ ಲೇಖಕ ಡಾನ್ ಬಟ್ನರ್ ನೀಲಿ ವಲಯದ ಆಹಾರಕ್ರಮವನ್ನು ಎಲ್ಲೆಡೆ ಪರಿಚಯಿಸುತ್ತಿದ್ದಾರೆ. ಇದು ಮುಖ್ಯವಾಗಿ ಅಲ್ಲಿ ವಾಸಿಸುವ ಜನರು ಸೇವಿಸುವ ಆಹಾರಗಳನ್ನು ಒಳಗೊಂಡಿರುತ್ತದೆ. ಇದು ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲದವರೆಗೆ ಫಿಟ್ ಆಗಿರಲು ಸಹಾಯ ಮಾಡುತ್ತದೆ. ನೀಲಿ ವಲಯದ ಆಹಾರದಲ್ಲಿ ಸಸ್ಯ ಆಧಾರಿತ ಪೋಷಣೆ ಹೇರಳವಾಗಿದೆ. ಅವರು ಕಡಿಮೆ ಮಾಂಸ ಮತ್ತು ಡೈರಿ ಉತ್ಪನ್ನವನ್ನು ಸೇವಿಸುತ್ತಾರೆ. ಹಾಗೇ, ಹೆಚ್ಚು ಸಂಸ್ಕರಿಸದ ಶುದ್ಧ, ಕಚ್ಚಾ ಆಹಾರಗಳಿಗೆ ಒತ್ತು ನೀಡುತ್ತಾರೆ.

ಬ್ಲೂ ಝೋನ್ ಆಹಾರವು ನಿಮ್ಮ ತೂಕವನ್ನು ಕಳೆದುಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮೂಳೆಗಳು ಗಟ್ಟಿಯಾಗಿರಲು ನಿಮ್ಮ ಡಯೆಟ್​ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಲು ಮರೆಯದಿರಿ

ನೀಲಿ ವಲಯದ ಆಹಾರವು ಸುಮಾರು ಶೇ. 95ರಷ್ಟು ಹಸಿರು ತರಕಾರಿ, ಸೊಪ್ಪುಗಳನ್ನು ಹೊಂದಿರುತ್ತದೆ. ಅವು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಇದು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ ಮತ್ತು ಕಡುಬಯಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ತೂಕ ಇಳಿಸಲು ಸಹಾಯ ಮಾಡುತ್ತದೆ. ಸೊಪ್ಪು ಮತ್ತು ಬೀನ್ಸ್‌ನಲ್ಲಿರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ, ಕಡುಬಯಕೆಗಳನ್ನು ತಡೆಯುತ್ತದೆ.

ನೀಲಿ ವಲಯಗಳಲ್ಲಿ ವಾಸಿಸುವ ಜನರು ಸಮಗ್ರ ಆಹಾರವನ್ನು ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ನಾವು ಹೆಚ್ಚಾಗಿ ತಿನ್ನುವ ಸಂಸ್ಕರಿಸಿದ ವೈಟ್ ಬ್ರೆಡ್​ಗೆ ಬದಲಾಗಿ ಅವರು ಹುಳಿ ಮತ್ತು ಬಹುಧಾನ್ಯಗಳ ಬ್ರೆಡ್‌ಗಳನ್ನು ಸೇವಿಸುತ್ತಾರೆ. ಅಡುಗೆ, ಸಲಾಡ್‌ಗಳು ಅಥವಾ ಸೂಪ್‌ಗಳ ಮೇಲೆ ಚಿಮುಕಿಸುವ ತೈಲಗಳ ವಿಷಯಕ್ಕೆ ಬಂದಾಗಲೂ ನಾವು ಭಾರತೀಯರು ಪ್ರಧಾನವಾಗಿ ಬಳಸುವ ಸೋಯಾಬೀನ್ ಅಥವಾ ಸೂರ್ಯಕಾಂತಿ ಎಣ್ಣೆಗೆ ಹೋಲಿಸಿದರೆ ನೀಲಿ ವಲಯದಲ್ಲಿ ವಾಸಿಸುವ ಜನರು ಸಂಸ್ಕರಿಸದ ಆಲಿವ್ ಎಣ್ಣೆಯನ್ನು ಬಳಸುತ್ತಾರೆ. ಹೀಗಾಗಿ, ವರ್ಜಿನ್ ಆಲಿವ್ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ತೂಕ ಇಳಿಸಲು ಸಹಾಯವಾಗುತ್ತದೆ.

ನೀವು ಯಾವುದೇ ಆಹಾರಕ್ರಮದಲ್ಲಿದ್ದರೂ ನಿಮ್ಮ ಆರೋಗ್ಯಕ್ಕೆ ನೀರು ಬಹಳ ಮುಖ್ಯ. ಹೀಗಾಗಿ, ನೀವು ನೀಲಿ ವಲಯದ ಡಯೆಟ್ ಮಾಡುವುದಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ರೂಪದಲ್ಲಿ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಲು ಪ್ರಯತ್ನಿಸಿ. ಸಕ್ಕರೆಯುಕ್ತ ಪಾನೀಯಗಳನ್ನು ಸೇವಿಸಬೇಡಿ. ಹೀಗಾಗಿ, ಸಂಸ್ಕರಿಸಿದ ಜ್ಯೂಸ್, ತಂಪು ಪಾನೀಯಗಳು ಮತ್ತು ಕೃತಕ ಸಿಹಿಕಾರಕಗಳನ್ನು ಹೊಂದಿರುವ ಪಾನೀಯಗಳನ್ನು ಮಿತಿಗೊಳಿಸಲು ಪ್ರಯತ್ನಿಸಿ. ನಿಮಗೆ ರುಚಿಯಾದ ಜ್ಯೂಸ್ ಕುಡಿಯಲೇಬೇಕೆಂಬ ಆಸೆಯಾದರೆ ನೀರಿಗೆ ನಿಮಗಿಷ್ಟವಾದ ಹಣ್ಣಿನ ತುಂಡುಗಳನ್ನು ಹಾಕಿಕೊಂಡು ಕುಡಿಯಿರಿ. ಆಗ ನೀರಿನ ಫ್ಲೇವರ್ ಬದಲಾಗುತ್ತದೆ. ಅಥವಾ ಕೆಲವು ಸೌತೆಕಾಯಿ ತುಂಡುಗಳು, ಸ್ಟ್ರಾಬೆರಿ ಅಥವಾ ನಿಂಬೆ ಹಣ್ಣಿನ ತುಂಡುಗಳನ್ನು ಸೇರಿಸುವುದರಿಂದ ನೀರಿನ ರುಚಿಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: Mediterranean Diet: ಹೆಚ್ಚು ಜನಪ್ರಿಯವಾಗುತ್ತಿದೆ ಮೆಡಿಟರೇನಿಯನ್ ಡಯೆಟ್; ಏನಿದರ ವಿಶೇಷತೆ?

ನೀಲಿ ವಲಯಗಳಲ್ಲಿ ವಾಸಿಸುವ ಜನರು ತುಂಬಾ ಕಡಿಮೆ ಮಾಂಸವನ್ನು ಸೇವಿಸುತ್ತಾರೆ. ಮಾಂಸ ಸೇವನೆಯು ಸಾಮಾನ್ಯವಾಗಿ ಆಚರಣೆಗಳು, ಹಬ್ಬಗಳು ಅಥವಾ ವಿಶೇಷ ಸಂದರ್ಭಗಳಿಗೆ ಸೀಮಿತವಾಗಿರುತ್ತದೆ. ಆಹಾರದ ಯೋಜನೆಯನ್ನು ಅನುಸರಿಸುವುದರ ಜೊತೆಗೆ ನಿಮ್ಮ ತೂಕವನ್ನು ನಿರ್ವಹಿಸಲು, ಆರೋಗ್ಯಕರ ಜೀವನಶೈಲಿಯಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ. ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸಲು ವ್ಯಾಯಾಮ, ಸಾಮಾಜಿಕ ಚಟುವಟಿಕೆಗಳು, ಡಿಜಿಟಲ್ ಡಿಟಾಕ್ಸ್, ಇತ್ಯಾದಿಗಳನ್ನು ಅನುಸರಿಸಿ.

ಆಹಾರಕ್ರಮವನ್ನು ಅನುಸರಿಸುವುದರ ಜೊತೆಗೆ, ಜನರು ತಮ್ಮ ಮನಸ್ಸು ಮತ್ತು ಆಲೋಚನೆಗಳನ್ನು ಉತ್ತಮಗೊಳಿಸಲು ವ್ಯಾಯಾಮ ಮಾಡಲು ಅಥವಾ ಯೋಗವನ್ನು ಅಭ್ಯಾಸ ಮಾಡಲು ಅಥವಾ ಧ್ಯಾನ ಮಾಡಲು ದಿನದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವುದು ಅಗತ್ಯ. ಜ್ಞಾನವನ್ನು ಹೆಚ್ಚಿಸಲು ಪ್ರತಿದಿನ ಪುಸ್ತಕದ 5-10 ಪುಟಗಳನ್ನು ಓದಲು ಪ್ರಯತ್ನಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Mon, 20 November 23

ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್