AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಳೆಗಳು ಗಟ್ಟಿಯಾಗಿರಲು ನಿಮ್ಮ ಡಯೆಟ್​ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಲು ಮರೆಯದಿರಿ

Bone Health: ಬಹಳ ಬೇಗ ಸವಕಳಿಯಾಗುವ ನಮ್ಮ ದೇಹದ ಅಂಗಗಳಲ್ಲಿ ಮೂಳೆ ಕೂಡ ಒಂದು. ವಯಸ್ಸು, ಕುಟುಂಬದ ಇತಿಹಾಸ ಅಥವಾ ನಿಮ್ಮ ಜೀವನಶೈಲಿ ಸೇರಿದಂತೆ ವಿವಿಧ ಅಂಶಗಳು ನಿಮ್ಮ ಮೂಳೆಗಳು ಮತ್ತು ಕೀಲುಗಳು ಎಷ್ಟು ಆರೋಗ್ಯಕರವಾಗಿವೆ ಎಂಬುದನ್ನು ನಿರ್ಧರಿಸುತ್ತದೆ. ಬಲವಾದ ಮೂಳೆಗಳನ್ನು ಪಡೆಯಲು ಮತ್ತು ಸಂಧಿವಾತವನ್ನು ಎದುರಿಸಲು ಸಹಾಯ ಮಾಡುವ ಹಣ್ಣುಗಳ ಪಟ್ಟಿ ಇಲ್ಲಿದೆ.

ಸುಷ್ಮಾ ಚಕ್ರೆ
|

Updated on: Oct 20, 2023 | 2:23 PM

Share
ನಿಮ್ಮ ದೇಹಕ್ಕೂ ತುಕ್ಕು ಹಿಡಿಯುತ್ತಿರುತ್ತದೆ. ದೇಹಕ್ಕೆ ತುಕ್ಕು ಹಿಡಿಯದಂತೆ ನೋಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ಇಲ್ಲವಾದರೆ, ಒಂದೊಂದೇ ಅಂಗಗಳಿಗೆ ಸಮಸ್ಯೆ ಶುರುವಾಗಲಾರಂಭಿಸುತ್ತದೆ.

1 / 14
ನಮ್ಮ ದೇಹದ ಅಂಗಗಳು ತುಕ್ಕು ಹಿಡಿಯಬಾರದೆಂದರೆ ಅದಕ್ಕೆ ದಿನವೂ ವ್ಯಾಯಾಮ ಸಿಗುತ್ತಿರಬೇಕು. ಬಗ್ಗುವುದು, ಓಡುವುದು, ತಿರುಗಿಸುವುದು ಹೀಗೆ ನಾನಾ ರೀತಿಯಲ್ಲಿ ನಮ್ಮ ಅಂಗಗಳನ್ನು ತಿರುಗಿಸುವುದರಿಂದ ಆ ಅಂಗಗಳು ಆ್ಯಕ್ಟಿವ್ ಆಗಿರುತ್ತವೆ.

2 / 14
ಬಹಳ ಬೇಗ ಸವಕಳಿಯಾಗುವ ನಮ್ಮ ದೇಹದ ಅಂಗಗಳಲ್ಲಿ ಮೂಳೆ ಕೂಡ ಒಂದು. ವಯಸ್ಸು, ಕುಟುಂಬದ ಇತಿಹಾಸ ಅಥವಾ ನಿಮ್ಮ ಜೀವನಶೈಲಿ ಸೇರಿದಂತೆ ವಿವಿಧ ಅಂಶಗಳು ನಿಮ್ಮ ಮೂಳೆಗಳು ಮತ್ತು ಕೀಲುಗಳು ಎಷ್ಟು ಆರೋಗ್ಯಕರವಾಗಿವೆ ಎಂಬುದನ್ನು ನಿರ್ಧರಿಸುತ್ತದೆ.

3 / 14
ಮೂಳೆಗಳು ದುರ್ಬಲಗೊಳ್ಳುವ ಮತ್ತು ಸುಲಭವಾಗಿ ಮುರಿಯಬಹುದಾದ ಆಸ್ಟಿಯೊಪೊರೋಸಿಸ್ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದು ದುರ್ಬಲ ಮೂಳೆಗಳು ಮತ್ತು ಕೀಲುಗಳಿಗೆ ಒಂದು ಪ್ರಮುಖ ಕಾರಣವಾಗಿದೆ. ಮತ್ತೊಂದು ಸಮಸ್ಯೆ ಅಸ್ಥಿಸಂಧಿವಾತವಾಗಿದೆ. ಸರಿಯಾಗಿ ತಿನ್ನದಿರುವುದು, ಸಾಕಷ್ಟು ಚಲಿಸದಿರುವುದು ಮತ್ತು ನಿಮ್ಮ ಹಾರ್ಮೋನುಗಳ ಅಸಮತೋಲನದಂತಹ ವಿಷಯಗಳು ಈ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು.

4 / 14
ಬಲವಾದ ಮೂಳೆಗಳನ್ನು ಪಡೆಯಲು ಮತ್ತು ಸಂಧಿವಾತವನ್ನು ಎದುರಿಸಲು ಸಹಾಯ ಮಾಡುವ ಹಣ್ಣುಗಳ ಪಟ್ಟಿ ಇಲ್ಲಿದೆ:

5 / 14
ಆವಕಾಡೊ: ಆರೋಗ್ಯಕರ ಕೊಬ್ಬುಗಳು ಮತ್ತು ವಿಟಮಿನ್ ಇ ಹೊಂದಿರುವ ಆವಕಾಡೊಗಳು ನಿಮ್ಮ ಕೀಲುಗಳಿಗೆ ಅತ್ಯುತ್ತಮವಾದ ಹಣ್ಣು. ಇದು ಉರಿಯೂತದ ವಿರುದ್ಧ ಹೋರಾಡುತ್ತಾರೆ ಮತ್ತು ಕಾರ್ಟಿಲೆಜ್ ಅನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.

6 / 14
ಬಾಳೆಹಣ್ಣು: ಬಾಳೆಹಣ್ಣುಗಳ ಪೋಷಕಾಂಶಗಳು ಮೂಳೆಯ ಆರೋಗ್ಯಕ್ಕೆ ವರದಾನವಾಗಿದ್ದು, ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ಹೆಚ್ಚಾಗಿರುವ ಈ ಹಣ್ಣುಗಳು ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಉಳಿಸಿಕೊಳ್ಳುತ್ತವೆ. ಇದು ದೃಢವಾದ ಮೂಳೆಗಳನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.

7 / 14
ಬೆರಿ ಹಣ್ಣುಗಳು: ಬೆರಿ ಹಣ್ಣುಗಳಾದ ಸ್ಟ್ರಾಬೆರಿ ಮತ್ತು ರಾಸ್​ಬೆರೀಸ್​ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ಉರಿಯೂತದಿಂದ ನಿಮ್ಮ ಕೀಲುಗಳನ್ನು ರಕ್ಷಿಸುವ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ.

8 / 14
ಮಾವಿನ ಹಣ್ಣುಗಳು: ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುತ್ತದೆ. ಇವೆರಡೂ ಕಾಲಜನ್ ರಚನೆಯನ್ನು ಬೆಂಬಲಿಸುತ್ತವೆ ಮತ್ತು ಆರೋಗ್ಯಕರ ಕೀಲುಗಳಿಗೆ ಕಾರಣವಾಗಿವೆ.

9 / 14
ಕಿವಿ ಹಣ್ಣು: ಈ ಹಣ್ಣು ವಿಟಮಿನ್ ಕೆಯ ಸಮೃದ್ಧ ಮೂಲವಾಗಿದೆ. ಇದು ನಿಮ್ಮ ಮೂಳೆಗಳ ಖನಿಜೀಕರಣ ಮತ್ತು ಸಾಂದ್ರತೆಗೆ ಸಹಾಯ ಮಾಡುತ್ತದೆ.

10 / 14
ಕಿತ್ತಳೆ ಹಣ್ಣು: ಈ ರಸಭರಿತವಾದ ಸಿಟ್ರಸ್ ಹಣ್ಣು ಕಿತ್ತಳೆಯಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ. ಇದು ಕಾಲಜನ್ ಉತ್ಪಾದನೆಗೆ ಪ್ರಮುಖ ಅಂಶವಾಗಿದೆ.

11 / 14
ಅನಾನಸ್‌: ಅನಾನಸ್‌ನಲ್ಲಿ ಬ್ರೊಮೆಲೈನ್ ಎಂಬ ಅಮೂಲ್ಯವಾದ ಕಿಣ್ವವಿದೆ. ಇದು ನಿಮ್ಮ ಕೀಲುಗಳಿಗೆ ಹಿತವಾದ ಮುಲಾಮಿನಂತೆ ಕಾರ್ಯನಿರ್ವಹಿಸುತ್ತದೆ. ನೋವು ಮತ್ತು ಊತವನ್ನು ಸರಾಗಗೊಳಿಸುತ್ತದೆ.

12 / 14
ಪಪ್ಪಾಯಿ ಹಣ್ಣು: ಪಪ್ಪಾಯಿಯಲ್ಲಿ ಕಂಡುಬರುವ ಪಪೈನ್ ಕಿಣ್ವವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಸಂಧಿವಾತದ ಲಕ್ಷಣಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

13 / 14
ಸೇಬು ಹಣ್ಣು: ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿಡುವುದಲ್ಲದೆ, ಕೀಲುಗಳ ಉರಿಯೂತವನ್ನು ದೂರವಿರಿಸುತ್ತದೆ. ಪ್ರಬಲವಾದ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಉತ್ಕರ್ಷಣ ನಿರೋಧಕವಾದ ಕ್ವೆರ್ಸೆಟಿನ್ ಇರುವಿಕೆಯಿಂದಾಗಿ ಇದು ಸಾಧ್ಯ.

14 / 14
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Follow Us
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ

‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್

ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ

ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!

ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ

ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ

ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?

ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ

ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ

ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!