ಚಳಿಗಾಲದಲ್ಲಿ ತೂಕ ಇಳಿಸಬೇಕಾ? ಈ 7 ಹಣ್ಣುಗಳನ್ನು ಮಿಸ್ ಮಾಡಬೇಡಿ

ನಿಮಗೆ ತೂಕ ಇಳಿಸಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ 7 ಅತ್ಯುತ್ತಮ ಹಣ್ಣುಗಳು ಇಲ್ಲಿವೆ. ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಆಹಾರದಲ್ಲಿ ಹೆಚ್ಚು ಅಗತ್ಯವಿರುವ ಫೈಬರ್, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಸೇರಿಸಬಹುದಾಗಿದೆ.

ಚಳಿಗಾಲದಲ್ಲಿ ತೂಕ ಇಳಿಸಬೇಕಾ? ಈ 7 ಹಣ್ಣುಗಳನ್ನು ಮಿಸ್ ಮಾಡಬೇಡಿ
Follow us
ಸುಷ್ಮಾ ಚಕ್ರೆ
|

Updated on: Dec 20, 2023 | 7:04 PM

ತೂಕ ಇಳಿಸುವುದಾದರೆ ಬೇಸಿಗೆಗಿಂತಲೂ ನೀವು ಚಳಿಗಾಲದಲ್ಲಿ ದೀರ್ಘಾವಧಿಯವರೆಗೆ ವ್ಯಾಯಾಮ ಮಾಡಲು ಸಾಧ್ಯವಾಗುತ್ತದೆ. ಆದರೆ, ಕೆಲವೊಮ್ಮೆ ಶೀತ ಹವಾಮಾನವು ನಿಮಗೆ ಆಲಸ್ಯ ತರಬಹುದು. ಇದರಿಂದ ತೂಕ ಇಳಿಸಲು ಮನಸಿದ್ದರೂ ನೀವು ನಿರ್ಲಕ್ಷ್ಯ ವಹಿಸಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ನಿಮಗೆ ತೂಕ ಇಳಿಸಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ 7 ಅತ್ಯುತ್ತಮ ಹಣ್ಣುಗಳು ಇಲ್ಲಿವೆ. ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಆಹಾರದಲ್ಲಿ ಹೆಚ್ಚು ಅಗತ್ಯವಿರುವ ಫೈಬರ್, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಸೇರಿಸಬಹುದಾಗಿದೆ.

1. ಸೇಬು ಹಣ್ಣು:

ಸೇಬುಗಳು ಫೈಬರ್-ಸಮೃದ್ಧ ಹಣ್ಣುಗಳಾಗಿವೆ. ಇವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಪೂರ್ಣತೆಯ ಭಾವನೆಯನ್ನು ನೀಡುತ್ತದೆ. ತೂಕ ಇಳಿಸಲು ಬಯಸುವವರಿಗೆ ಇದು ಅತ್ಯುತ್ತಮವಾದ ಆಯ್ಕೆಯಾಗಿದೆ.

2. ಬೆರ್ರಿ ಹಣ್ಣುಗಳು:

ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಬೆರಿ ಹಣ್ಣುಗಳಾದ ಸ್ಟ್ರಾಬೆರಿಗಳು ಮತ್ತು ರಾಸ್ ಬೆರಿ ಹಣ್ಣುಗಳು ರುಚಿಕರವಾಗಿರುವುದು ಮಾತ್ರವಲ್ಲದೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಈ ಹಣ್ಣುಗಳನ್ನು ಮೊಸರು, ಸಲಾಡ್‌ ಜೊತೆ ಸೇವಿಸಬಹುದು. ಇವು ಪೋಷಕಾಂಶಗಳು ಮತ್ತು ಫೈಟೊಕೆಮಿಕಲ್‌ಗಳ ಉಗ್ರಾಣವಾಗಿದ್ದು, ಆರೋಗ್ಯವನ್ನು ಹೆಚ್ಚಿಸುತ್ತವೆ ಮತ್ತು ವಿವಿಧ ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತವೆ.

ಇದನ್ನೂ ಓದಿ: ಆಯುರ್ವೇದದ ಪ್ರಕಾರ ಯಾವ ಹಣ್ಣುಗಳು ಬೆಸ್ಟ್?

3. ಪೇರಲೆ ಹಣ್ಣು:

ಡಯೆಟರಿ ಫೈಬರ್‌ ಅಂಶ ಅಧಿಕವಾಗಿರುವ ಪೇರಲೆ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೇರಲೆಯಲ್ಲಿರುವ ಕಡಿಮೆ ಕ್ಯಾಲೋರಿ ಅಂಶವು ತಮ್ಮ ಆಹಾರದಲ್ಲಿ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸೂಕ್ತವಾದ ಆಯ್ಕೆಯಾಗಿದೆ.

4. ದ್ರಾಕ್ಷಿ ಹಣ್ಣು:

ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಗುಣಲಕ್ಷಣಗಳಿಗೆ ದ್ರಾಕ್ಷಿ ಹೆಸರುವಾಸಿಯಾಗಿದೆ. ದ್ರಾಕ್ಷಿ ಹಣ್ಣು ತೂಕ ಇಳಿಸಲು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರ ಕಿಣ್ವಗಳು ಮತ್ತು ಉತ್ಕರ್ಷಣ ನಿರೋಧಕಗಳ ವಿಶಿಷ್ಟ ಸಂಯೋಜನೆಯು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕೊಬ್ಬನ್ನು ಹೆಚ್ಚು ಪರಿಣಾಮಕಾರಿಯಾಗಿ ಕರಗಿಸುತ್ತದೆ.

5. ಕಿತ್ತಳೆ ಹಣ್ಣು:

ವಿಟಮಿನ್ ಸಿ ಮತ್ತು ಫೈಬರ್‌ ಅಂಶ ಸಮೃದ್ಧವಾಗಿರುವ ಕಿತ್ತಳೆ ಹಣ್ಣು ಉಲ್ಲಾಸವನ್ನು ನೀಡುವುದು ಮಾತ್ರವಲ್ಲದೆ ಆರೋಗ್ಯಕರವಾಗಿ ತೂಕ ಇಳಿಸಲು ಕೂಡ ಕೊಡುಗೆ ನೀಡುತ್ತದೆ. ಫೈಬರ್ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ವಿಟಮಿನ್ ಸಿ ಚಳಿಗಾಲದ ತಿಂಗಳುಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.

6. ಕಿವಿ ಹಣ್ಣು:

ಪೋಷಕಾಂಶಗಳು ಮತ್ತು ಕಡಿಮೆ ಕ್ಯಾಲೋರಿಗಳಿಂದ ತುಂಬಿರುವ ಕಿವಿ ಹಣ್ಣು ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಆಹಾರದ ನಾರಿನ ಶಕ್ತಿಯ ಕೇಂದ್ರವಾಗಿದೆ.

ಇದನ್ನೂ ಓದಿ: ಕಿಡ್ನಿ ಸ್ಟೋನ್ ಇದ್ದರೆ ಕರ್ಬೂಜ ಹಣ್ಣು ತಿನ್ನಿ

7. ದಾಳಿಂಬೆ ಹಣ್ಣು:

ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವ ದಾಳಿಂಬೆ ಹಣ್ಣು ತೂಕ ಇಳಿಸಲು ಪ್ರಯತ್ನದಲ್ಲಿರುವವರಿಗೆ ಅತ್ಯುತ್ತಮವಾದ ಆಯ್ಕೆ. ಇದನ್ನು ಮೊಸರಿನೊಂದಿಗೆ ಸೇರಿಸಿಕೊಂಡು ತಿನ್ನಬಹುದು. ಅಥವಾ ಸಲಾಡ್​ಗೆ ಹಾಕಿಕೊಂಡು ಸೇವಿಸಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ