ಬೆಳಗ್ಗೆ ಅಥವಾ ಸಂಜೆ ವರ್ಕ್ಔಟ್ ಮಾಡುವವರು ನೀವಾಗಿದ್ದರೆ ನಿಮ್ಮ ವ್ಯಾಯಾಮದ ನಂತರ ನೀವು ಏನು ತಿನ್ನುತ್ತೀರಿ ಎಂಬುದು ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ತೂಕ ಇಳಿಸಿಕೊಳ್ಳಲು, ನಿಮ್ಮ ಸ್ನಾಯುಗಳನ್ನು ಗಟ್ಟಿಗೊಳಿಸಲು ಈ ಆಹಾರ ಬಹಳ ಸಹಾಯ ಮಾಡುತ್ತದೆ. ಪ್ರೋಟೀನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಅಗತ್ಯ ಪೌಷ್ಟಿಕಾಂಶಗಳು ಸಮೃದ್ಧವಾಗಿರುವ ಆಹಾರವು ನಿಮ್ಮ ದೇಹವನ್ನು ಗಟ್ಟಿಗೊಳಿಸಲು, ಕೊಬ್ಬನ್ನು ಕರಗಿಸಲು ಅವಶ್ಯಕವಾಗಿದೆ. ಆದ್ದರಿಂದ, ವ್ಯಾಯಾಮದ ನಂತರದ ಆಹಾರ ಬಹಳ ಮುಖ್ಯ.