ಉತ್ತಮ ನಿದ್ರೆಗೆ ರಾತ್ರಿ ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು?

ನಾವು ಯಾವ ದಿಕ್ಕಿಗೆ ತಲೆ ಇಟ್ಟು ಮಲಗುತ್ತೇವೆ ಎಂಬುದು ಕೂಡ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ? ಪ್ರಾಚೀನ ಕಾಲದಿಂದ ಈ ಬಗ್ಗೆ ನಂಬಿಕೆ ಜನರಲ್ಲಿದೆ. ನಿದ್ರೆ ಮತ್ತು ಮಲಗುವ ದಿಕ್ಕುಗಳ ನಡುವಿನ ಸಂಪರ್ಕವು ಹಲವು ಶತಮಾನಗಳಿಂದ ಬೆಳೆದು ಬಂದಿದೆ.

ಉತ್ತಮ ನಿದ್ರೆಗೆ ರಾತ್ರಿ ಯಾವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು?
ನಿದ್ರೆ
Follow us
|

Updated on: Dec 27, 2023 | 6:45 PM

ಶಾಂತವಾಗಿ ರಾತ್ರಿಯ ವೇಳೆ ನಿದ್ರೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ರೆ ಸರಿಯಾಗದಿದ್ದರೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನಮ್ಮ ಆರೋಗ್ಯ ಹದಗೆಡುತ್ತದೆ. ಆದರೆ, ನಾವು ಯಾವ ದಿಕ್ಕಿಗೆ ತಲೆ ಇಟ್ಟು ಮಲಗುತ್ತೇವೆ ಎಂಬುದು ಕೂಡ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ? ಪ್ರಾಚೀನ ಕಾಲದಿಂದ ಈ ಬಗ್ಗೆ ನಂಬಿಕೆ ಜನರಲ್ಲಿದೆ. ನಿದ್ರೆ ಮತ್ತು ಮಲಗುವ ದಿಕ್ಕುಗಳ ನಡುವಿನ ಸಂಪರ್ಕವು ಹಲವು ಶತಮಾನಗಳಿಂದ ಬೆಳೆದು ಬಂದಿದೆ.

ಪ್ರಾಚೀನ ಅಭ್ಯಾಸಗಳು ಸಾಮಾನ್ಯವಾಗಿ ಸಾಮರಸ್ಯ ಮತ್ತು ಸಮತೋಲನಕ್ಕಾಗಿ ನಿರ್ದಿಷ್ಟ ನಿದ್ರೆಯ ನಿರ್ದೇಶನಗಳನ್ನು ಒತ್ತಿ ಹೇಳುತ್ತದೆ. ಇತ್ತೀಚಿನ ಅಧ್ಯಯನಗಳು ಮಲಗುವ ದಿಕ್ಕಿನ ಅಂಶಗಳು ನಮ್ಮ ನಿದ್ರೆಯ ಗುಣಮಟ್ಟದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಅನ್ವೇಷಿಸಿವೆ.

ಯಾವ ದಿಕ್ಕಿನಲ್ಲಿ ಮಲಗುವುದು ಉತ್ತಮ?:

ಪುರಾತನ ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕಿನ ಕಡೆಗೆ ನಿಮ್ಮ ತಲೆಯನ್ನು ಇಟ್ಟು ಮಲಗುವುದು ಉತ್ತಮವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ನಿದ್ರೆಯನ್ನು ಭೂಮಿಯ ಕಾಂತಕ್ಷೇತ್ರದೊಂದಿಗೆ ಜೋಡಿಸಿ, ನೆಮ್ಮದಿಯನ್ನು ಹೆಚ್ಚಿಸುತ್ತದೆ. ಪ್ರಕೃತಿಯ ಅವಲೋಕನಗಳು ಈ ಕಲ್ಪನೆಯನ್ನು ಬೆಂಬಲಿಸುತ್ತವೆ. ದಕ್ಷಿಣದ ನಿದ್ರೆಯ ದಿಕ್ಕು ನಿಮ್ಮ ವಿಶ್ರಾಂತಿಯ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಆರಂಭಿಕ ವೈಜ್ಞಾನಿಕ ಅಧ್ಯಯನಗಳು ಸುಳಿವು ನೀಡುತ್ತವೆ.

ಇದನ್ನೂ ಓದಿ: ರಾತ್ರಿ ಪದೇ ಪದೆ ನಿದ್ರೆಯಿಂದ ಎಚ್ಚರಗೊಳ್ಳಲು ಕಾರಣವೇನು?

ಯಾವ ದಿಕ್ಕಿನಲ್ಲಿ ಮಲಗಬಾರದು?:

ವಾಸ್ತು ಶಾಸ್ತ್ರದಲ್ಲಿ ನಿಮ್ಮ ತಲೆಯನ್ನು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದು ಒಳ್ಳೆಯದಲ್ಲ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಆಗ ನಿಮ್ಮ ತಲೆಯು ಉತ್ತರ ಧ್ರುವದಂತೆಯೇ ಕಾರ್ಯ ನಿರ್ವಹಿಸುತ್ತದೆ. ಇದು ಉದ್ವೇಗ ಮತ್ತು ತಲೆನೋವಿನಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ, ದಕ್ಷಿಣ ದಿಕ್ಕಿನೆಡೆ ತಲೆ ಹಾಕಿ ಮಲಗುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ. ಇದು ಭೂಮಿಯ ವಿದ್ಯುತ್ಕಾಂತೀಯ ಸೆಳೆತದೊಂದಿಗೆ ನಿಮ್ಮ ತಲೆಯನ್ನು ಜೋಡಿಸುತ್ತದೆ. ಇದರಿಂದ ರಾತ್ರಿ ಸುಖಕರವಾದ ನಿದ್ರೆ ಬರುತ್ತದೆ.

ಇದನ್ನೂ ಓದಿ: ಉತ್ತಮ ನಿದ್ರೆ ಮಾಡಲು ಮಲಗುವ ಮೊದಲು ಏನನ್ನು ಸೇವಿಸಬೇಕು? ಯಾವ ಪದಾರ್ಥವನ್ನು ಸೇವಿಸಬಾರದು

ಪುರಾತನ ಕಾಲದ ನಂಬಿಕೆಯೇನು?:

ಪುರಾತನ ಮಹಾಭಾರತ ಪಠ್ಯದಲ್ಲಿ ಉತ್ತರ ಅಥವಾ ಪಶ್ಚಿಮಕ್ಕೆ ತಲೆಯಿಟ್ಟು ಮಲಗುವುದು ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಅದೇ ಪಠ್ಯವು ಪೂರ್ವ ಮತ್ತು ದಕ್ಷಿಣಕ್ಕೆ ಮಲಗುವುದು ಜನರನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ ಎಂದು ಸೂಚಿಸುತ್ತದೆ. ವಿಷ್ಣು ಪುರಾಣವು ಪೂರ್ವ ಅಥವಾ ದಕ್ಷಿಣಕ್ಕೆ ತಲೆಯಿಟ್ಟು ಮಲಗುವುದು ಪ್ರಯೋಜನಕಾರಿಯಾಗಿದೆ ಎಂದಿದೆ. ಆದರೆ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಮಲಗಿದರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ತಮಿಳು ಪಂಚಾಂಗವಾದ ವರ್ಷಾದಿ ನೂಲ್‌ ಪೂರ್ವಕ್ಕೆ ತಲೆಯಿಟ್ಟು ಮಲಗುವುದು ಒಳ್ಳೆಯದು, ದಕ್ಷಿಣಕ್ಕೆ ತಲೆಯಿಟ್ಟು ಮಲಗಿದರೆ ಆಯುಷ್ಯ ಹೆಚ್ಚುತ್ತದೆ ಎಂದು ಹೇಳಿದೆ. ಆದರೆ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಿದರೆ ತೊಂದರೆ ಉಂಟಾಗಬಹುದು ಎಂದು ಕೂಡ ಹೇಳಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ