Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾಗಿ ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ವಿಟಮಿನ್​​ ಕೊರತೆಯಿಂದ ನೀವು ಬಳಲುತ್ತಿರಬಹುದು

ದೇಹದಲ್ಲಿನ ವಿಟಮಿನ್ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಆದ್ದರಿಂದ ಯಾವ ವಿಟಮಿನ್​​ ಕೊರತೆ ಕೂದಲು ದುರ್ಬಲವಾಗಲು ಕಾರಣವಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅತಿಯಾಗಿ ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ವಿಟಮಿನ್​​ ಕೊರತೆಯಿಂದ ನೀವು ಬಳಲುತ್ತಿರಬಹುದು
ಸಾಂದರ್ಭಿಕ ಚಿತ್ರ Image Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Dec 27, 2023 | 4:08 PM

ಕೂದಲು ಉದುರುವಿಕೆ ಅಥವಾ ದುರ್ಬಲ ಕೂದಲಿಗೆ ದೇಹದಲ್ಲಿನ ಕೆಲವು ಜೀವಸತ್ವಗಳ ಕೊರತೆಯು ಒಂದು ಕಾರಣ ಎಂದು ನಿಮಗೆ ತಿಳಿದಿದೆಯೇ. ಹೆಚ್ಚಿನ ಜನರು ಈ ಪ್ರಮುಖ ಕಾರಣವನ್ನು ನಿರ್ಲಕ್ಷಿಸುತ್ತಾರೆ. ಕೂದಲು ಉದುರುತ್ತಿದ್ದರೆ ಶ್ಯಾಂಪೂ ಅಥವಾ ತಲೆಗೂದಲಿಗೆ ಹಚ್ಚುವ ಎಣ್ಣೆಯನ್ನು ಬದಲಾಯಿಸುತ್ತಾರೆ. ಆದರೆ ವರದಿಗಳ ಪ್ರಕಾರ, ದೇಹದಲ್ಲಿನ ವಿಟಮಿನ್ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಆದ್ದರಿಂದ ಯಾವ ವಿಟಮಿನ್​​ ಕೊರತೆ ಕೂದಲು ದುರ್ಬಲವಾಗಲು ಕಾರಣವಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಿಟಮಿನ್ ಡಿ ಕೊರತೆ:

ತಜ್ಞರ ಪ್ರಕಾರ, ವಿಟಮಿನ್ ಡಿ ಕೊರತೆಯಿಂದಾಗಿ ಕೂದಲು ಸುಲಭವಾಗಿ ಒಡೆಯಲು ಪ್ರಾರಂಭಿಸುತ್ತದೆ ಅಥವಾ ಅದು ತೆಳ್ಳಗೆ ಮತ್ತು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ. ಆಹಾರ ಅಥವಾ ಸೂರ್ಯನ ಬೆಳಕಿನ ಮೂಲಕ ಈ ಅಗತ್ಯ ವಿಟಮಿನ್ ಪ್ರಮಾಣವನ್ನು ಹೆಚ್ಚಿಸಬಹುದು. ದೇಹದಲ್ಲಿ ವಿಟಮಿನ್ ಡಿ ಕೊರತೆ ಕಂಡುಬಂದರೆ, ಮೊಟ್ಟೆಯ ಹಳದಿ, ಮೀನು ಅಥವಾ ಬಲವರ್ಧಿತ ಡೈರಿ ಉತ್ಪನ್ನಗಳನ್ನು ತಿನ್ನುವುದು ಪ್ರಯೋಜನಕಾರಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

ವಿಟಮಿನ್ ಎ ಕೊರತೆ:

ವಿಟಮಿನ್ ಎ ಕೊರತೆಯು ಕೂದಲು ದುರ್ಬಲವಾಗಿ ಅಥವಾ ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ. ನೆತ್ತಿಯ ಮೇಲೆ ತಲೆಹೊಟ್ಟು ದೇಹದಲ್ಲಿ ವಿಟಮಿನ್ ಎ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್ ಎ ಸಮೃದ್ಧವಾಗಿರುವ ಕಿತ್ತಳೆ ಅಥವಾ ಆಲೂಗಡ್ಡೆ, ಕ್ಯಾರೆಟ್, ಕ್ಯಾಪ್ಸಿಕಂಗಳ ಮೂಲಕ ನೀವು ಈ ವಿಟಮಿನ್ ಸೇವನೆಯನ್ನು ಹೆಚ್ಚಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ಬಿಡುವಿಲ್ಲದ ಬದುಕಲ್ಲೂ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ವಿಟಮಿನ್ ಇ ಕೊರತೆ:

ಕೂದಲಿನ ತುದಿಯಲ್ಲಿ ಸೀಳು ಕಾಣಿಸಿಕೊಳ್ಳುವುದು ನಿಮ್ಮ ದೇಹದಲ್ಲಿ ವಿಟಮಿನ್ ಇ ಕೊರತೆಯಿದೆ ಎಂದು ಸೂಚಿಸುತ್ತದೆ. ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಸೌಂದರ್ಯದ ಆರೈಕೆಯಲ್ಲಿಯೂ ಬಳಸಲಾಗುತ್ತದೆ. ಆದಾಗ್ಯೂ, ನೀವು ಸೂರ್ಯಕಾಂತಿ ಬೀಜಗಳು, ಪಾಲಕ್​​​ ಸೊಪ್ಪು, ಬಾದಾಮಿ, ಆವಕಾಡೊ ಮತ್ತು ಇತರ ಆಹಾರ ಪೂರಕಗಳ ಮೂಲಕ ದೇಹದಲ್ಲಿ ವಿಟಮಿನ್ ಇ ಮಟ್ಟವನ್ನು ಹೆಚ್ಚಿಸಬಹುದು.

ವಿಟಮಿನ್ ಸಿ ಕೊರತೆ:

ಇದು ನಮ್ಮ ದೇಹಕ್ಕೆ ಪ್ರಮುಖವಾದ ವಿಟಮಿನ್ ಆಗಿದೆ ಮತ್ತು ಅದರ ಮಟ್ಟವು ಕಡಿಮೆಯಾಗಲು ಪ್ರಾರಂಭಿಸಿದರೆ ದುರ್ಬಲ , ಕಪ್ಪು ಚರ್ಮ ಮತ್ತು ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ವಿಟಮಿನ್ ಸಿ ಕೊರತೆಯಿಂದಾಗಿ, ಕೂದಲಿನ ಪದರಗಳು ಅಥವಾ ಒಣ ಕೂದಲು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ ಕಿತ್ತಳೆ ಇದರ ಅತ್ಯುತ್ತಮ ಮೂಲವಾಗಿದೆ. ಆದಾಗ್ಯೂ, ಬ್ರೊಕೊಲಿ, ಕ್ಯಾಪ್ಸಿಕಂ, ಇತರ ಸಿಟ್ರಸ್ ಹಣ್ಣುಗಳು ಮತ್ತು ಸ್ಟ್ರಾಬೆರಿಗಳನ್ನು ತಿನ್ನುವ ಮೂಲಕ ದೇಹದಲ್ಲಿ ವಿಟಮಿನ್ ಸಿ ಹೆಚ್ಚಿಸಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ