ಬಿಡುವಿಲ್ಲದ ಬದುಕಲ್ಲೂ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ನಿದ್ರೆ ನಮ್ಮ ದೇಹಕ್ಕೆ ಬಹಳ ಅತ್ಯಗತ್ಯ. ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸಬೇಕು, ಆರೋಗ್ಯವಾಗಿರಬೇಕೆಂದರೆ ಉತ್ತಮವಾಗಿ ನಿದ್ರೆ ಮಾಡುವುದು ಬಹಳ ಮುಖ್ಯ. ರಾತ್ರಿ ಮಲಗುವ ಮುನ್ನ ಟಿವಿ, ಮೊಬೈಲ್, ಕಂಪ್ಯೂಟರ್ ನೋಡುವ ಅಭ್ಯಾಸ ಇಟ್ಟುಕೊಳ್ಳಬೇಡಿ.
ಒತ್ತಡದ ಜೀವನದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಕೂಡ ಮುಖ್ಯ. ಬಿಡುವಿಲ್ಲದ ಜೀವನ ಮತ್ತು ನಿಮ್ಮ ಆರೋಗ್ಯದ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಅಗತ್ಯ. ಆರೋಗ್ಯದಿಂದ ಇರಲು ನಮ್ಮ ಜೀವನಶೈಲಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅದರಿಂದ ಏನು ಪ್ರಯೋಜನವಾಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಿಮ್ಮ ನಿದ್ರೆಗೆ ಆದ್ಯತೆ ನೀಡಿ:
ನಿದ್ರೆ ನಮ್ಮ ದೇಹಕ್ಕೆ ಬಹಳ ಅತ್ಯಗತ್ಯ. ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸಬೇಕು, ಆರೋಗ್ಯವಾಗಿರಬೇಕೆಂದರೆ ಉತ್ತಮವಾಗಿ ನಿದ್ರೆ ಮಾಡುವುದು ಬಹಳ ಮುಖ್ಯ. ರಾತ್ರಿ ಮಲಗುವ ಮುನ್ನ ಟಿವಿ, ಮೊಬೈಲ್, ಕಂಪ್ಯೂಟರ್ ನೋಡುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಅವುಗಳ ನೀಲಿ ಬೆಳಕು ನಿಮ್ಮ ನಿದ್ರೆಗೆ ಅಡ್ಡಿ ಪಡಿಸುತ್ತವೆ.
ದೇಹವನ್ನು ಹೈಡ್ರೇಟ್ ಮಾಡಿ:
ನಿಮ್ಮ ದೈನಂದಿನ ನೀರಿನ ಸೇವನೆಯನ್ನು ಟ್ರ್ಯಾಕ್ ಮಾಡಲು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಬಳಸಿ. ಅನೇಕ ಅಪ್ಲಿಕೇಶನ್‌ಗಳು ನೀವು ನಿಮ್ಮ ದೇಹಕ್ಕೆ ಬೇಕಾದಷ್ಟು ನೀರು ಕುಡಿದಿದ್ದೀರಾ ಎಂಬುದರ ಬಗ್ಗೆ ರಿಮೈಂಡರ್ಗಳನ್ನು ಕಳುಹಿಸುತ್ತವೆ. ಆಗಾಗ ನೀರು ಕುಡಿಯುತ್ತಿರಲು ಮರೆಯಬೇಡಿ.
ಇದನ್ನೂ ಓದಿ: Sleeping Tips: ಮಲಗಿದ ಕೂಡಲೆ ನಿದ್ರೆ ಬರಲು ಏನು ಮಾಡಬೇಕು?
ನಿಮ್ಮ ಊಟವನ್ನು ಪ್ಲಾನ್ ಮಾಡಿ:
ಪೌಷ್ಟಿಕಾಂಶದ ಊಟವನ್ನು ತಯಾರಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅದರ ಬಗ್ಗೆ ಮಾಹಿತಿ ಇರುವ ಅಪ್ಲಿಕೇಶನ್‌ಗಳನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಈ ಅಪ್ಲಿಕೇಶನ್‌ಗಳು ನಿಮಗೆ ಶಾಪಿಂಗ್ ಪಟ್ಟಿಗಳನ್ನು ರಚಿಸಲು, ಆರೋಗ್ಯಕರ ಪಾಕವಿಧಾನಗಳನ್ನು ಸೂಚಿಸಲು ಮತ್ತು ಊಟದ ಪೂರ್ವಸಿದ್ಧತೆಯ ಬಗ್ಗೆ ಮಾಹಿತಿ ನೀಡಲು ಸಹಾಯ ಮಾಡುತ್ತವೆ.
ಸಮಾಧಾನವಾಗಿರುವುದನ್ನು ಅಭ್ಯಾಸ ಮಾಡಿ:
ಮೊಬೈಲ್ನಲ್ಲಿ ನಿಮ್ಮ ಮನಸಿಗೆ ಸಮಾಧಾನ ನೀಡುವ ಮ್ಯೂಸಿಕ್ ಇರುವ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ. ಅದನ್ನು ಕೇಳುತ್ತಾ 5 ನಿಮಿಷಗಳ ಕಾಲ ಧ್ಯಾನ ಮಾಡಿ. ಇದು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ:
ಹವ್ಯಾಸಗಳಿಗಾಗಿ ಸಮಯವನ್ನು ನಿಗದಿಪಡಿಸುವುದು ನಿಮ್ಮ ಕೆಲಸದ ನಡುವೆ ಸಾಧ್ಯವಾಗದಿರಬಹುದು. ಆದರೆ, ಅದಕ್ಕಾಗಿ ಪ್ರಯತ್ನಿಸಿದರೆ ಖಂಡಿತ ಅಸಾಧ್ಯವಲ್ಲ. ಹವ್ಯಾಸಗಳು ನಿಮ್ಮ ಮನಸನ್ನು ಕ್ರಿಯಾಶೀಲವಾಗಿಡುತ್ತದೆ, ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?
ಪ್ರಕೃತಿಯೊಂದಿಗೆ ಬೆರೆಯಿರಿ:
ನೈಸರ್ಗಿಕ ಸ್ಥಳಗಳಿಗೆ ಹೋಗುವುದು, ಪಾರ್ಕ್ನಲ್ಲಿ ವಾಕಿಂಗ್ ಮಾಡುವುದು, ಕಾಡಿನಲ್ಲಿ ಟ್ರೆಕಿಂಗ್ ಮಾಡುವುದು, ವೀಕೆಂಡ್ನಲ್ಲಿ ಪ್ರಕೃತಿಯೊಂದಿಗೆ ಸಮಯ ಕಳೆಯುವುದರಿಂದ ನಿಮ್ಮ ಮನಸು ಉಲ್ಲಸಿತವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ