ನಿಮ್ಮ ಹೃದಯದ ಸಮಸ್ಯೆಗಳ ಬಗ್ಗೆ ಸೂಚನೆ ನೀಡುವ ಲಕ್ಷಣಗಳಿವು

ನಿಮಗೆ ಹೃದಯದ ಸಮಸ್ಯೆ ಇದೆ ಎಂದು ಅನುಮಾನ ಉಂಟಾದರೆ ಅಥವಾ ಈ ಯಾವುದೇ ಲಕ್ಷಣಗಳು ಗೋಚರವಾದರೆ ಅವುಗಳನ್ನು ನಿರ್ಲಕ್ಷಿಸಬೇಡಿ. ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಹೃದಯಾಘಾತದ ಕೆಲವು ಸಾಮಾನ್ಯ ಲಕ್ಷಣಗಳು ಇಲ್ಲಿವೆ.

ನಿಮ್ಮ ಹೃದಯದ ಸಮಸ್ಯೆಗಳ ಬಗ್ಗೆ ಸೂಚನೆ ನೀಡುವ ಲಕ್ಷಣಗಳಿವು
ಹೃದಯಾಘಾತ
Follow us
ಸುಷ್ಮಾ ಚಕ್ರೆ
|

Updated on: Dec 27, 2023 | 12:31 PM

ಇತ್ತೀಚೆಗೆ 30 ವರ್ಷದ ಆಸುಪಾಸಿನವರಲ್ಲೂ ಹೃದಯಾಘಾತ ಸಾಮಾನ್ಯವಾಗಿಬಿಟ್ಟಿದೆ. ಹೃದಯಾಘಾತ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಹಲವಾರು ರೀತಿಯಲ್ಲಿ ಪ್ರಕಟವಾಗಬಹುದು. ಹೃದಯಾಘಾತದ ಕೆಲವು ಲಕ್ಷಣಗಳು ಸಾಂಪ್ರದಾಯಿಕವಾಗಿರುತ್ತವೆ. ಆದರೆ ಕೆಲವರಿಗೆ ಎಲ್ಲರಿಗೂ ಕಾಣಿಸಿಕೊಳ್ಳುವ ರೋಗಲಕ್ಷಣಗಳು ಗೋಚರವಾಗದೇ ಇರಬಹುದು. ಇದರಿಂದ ಅವರಿಗೆ ತಮಗೆ ಹೃದಯಾಘಾತ ಉಂಟಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲ. ಈ ರೋಗ ಲಕ್ಷಣಗಳು ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಬದಲಾಗುತ್ತದೆ. ಅದರಲ್ಲೂ ಮಹಿಳೆಯರು ಪುರುಷರಿಗಿಂತ ವಿಭಿನ್ನ ಅಥವಾ ಹೆಚ್ಚು ಸೂಕ್ಷ್ಮ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.

ನಿಮಗೆ ಹೃದಯದ ಸಮಸ್ಯೆ ಇದೆ ಎಂದು ಅನುಮಾನ ಉಂಟಾದರೆ ಅಥವಾ ಈ ಯಾವುದೇ ಲಕ್ಷಣಗಳು ಗೋಚರವಾದರೆ ಅವುಗಳನ್ನು ನಿರ್ಲಕ್ಷಿಸಬೇಡಿ. ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಹೃದಯಾಘಾತದ ಕೆಲವು ಸಾಮಾನ್ಯ ಲಕ್ಷಣಗಳು ಇಲ್ಲಿವೆ…

ಎದೆಯಲ್ಲಿ ನೋವು:

ಎದೆಯ ಮಧ್ಯದಲ್ಲಿ ಅಥವಾ ಎರಡೂ ಬದಿಗಳಲ್ಲಿ, ತೋಳುಗಳು, ದವಡೆ ಅಥವಾ ಹಿಂಭಾಗಕ್ಕೆ ಹರಡುವ ಎದೆಯ ನೋವು ಹೃದಯದ ಸಮಸ್ಯೆಯ ಲಕ್ಷಣಗಳಲ್ಲಿ ಒಂದಾಗಿದೆ. ಈ ರೋಗಲಕ್ಷಣಗಳು ಸಾಮಾನ್ಯವಾಗಿ ಶ್ರಮದ ಸಮಯದಲ್ಲಿ, ನಿರ್ದಿಷ್ಟ ಸಮಯಗಳಲ್ಲಿ ಸಂಭವಿಸುತ್ತವೆ. ವಿಶ್ರಾಂತಿ ಪಡೆದ ತಕ್ಷಣ ಆ ನೋವು ನಿವಾರಣೆಯಾಗುತ್ತದೆ. ಈ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ. ಈ ರೋಗಲಕ್ಷಣವು ಯಾವುದೇ ಹಂತದಲ್ಲಿ ಉದ್ಭವಿಸಿದರೆ ಇದು ಸಂಭಾವ್ಯ ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ ಎಂಬುದು ನಿಮಗೆ ತಿಳಿದಿರಬೇಕು.

ಇದನ್ನೂ ಓದಿ: ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಇಲ್ಲಿದೆ ಕಾರಣ

ಉಸಿರಾಟದ ತೊಂದರೆ:

ಉಸಿರಾಟದ ತೊಂದರೆಯು ಹೃದಯಾಘಾತದ ಮತ್ತೊಂದು ಎಚ್ಚರಿಕೆಯ ಸಂಕೇತವಾಗಿದೆ. ವಿಶೇಷವಾಗಿ ಇದು ಕನಿಷ್ಠ ಪರಿಶ್ರಮದಿಂದ ಅಥವಾ ವಿಶ್ರಾಂತಿಯಲ್ಲಿ ಸಂಭವಿಸಿದರೆ ಅದರ ಬಗ್ಗೆ ಎಚ್ಚರ ವಹಿಸಲೇಬೇಕು. ರೋಗಿಗಳು ವಾಕಿಂಗ್ ಅಥವಾ ಕ್ಲೈಂಬಿಂಗ್ ಮಾಡುವಾಗ ಉಸಿರಾಟದ ತೊಂದರೆಗೆ ಒಳಗಾಗುತ್ತಾರೆ. ವಾಕಿಂಗ್ ನಿಲ್ಲಿಸಿದ ತಕ್ಷಣ ಅವರ ಉಸಿರಾಟದ ಏರುಪೇರು ಸರಿಯಾಗುತ್ತದೆ. ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆ ಅಥವಾ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುವುದು ಹೃದಯದ ಸಮಸ್ಯೆಯ ಮತ್ತೊಂದು ಲಕ್ಷಣವಾಗಿದೆ. ಇದನ್ನು ಆಸ್ತಮಾ ಅಥವಾ ಅಂತಹ ಯಾವುದೇ ಉಸಿರಾಟದ ಸಮಸ್ಯೆ ಎಂದು ತಪ್ಪಾಗಿ ಭಾವಿಸಬಾರದು.

ಅನಿಯಮಿತ ಹೃದಯ ಬಡಿತ:

ಅನಿಯಮಿತ ಹೃದಯ ಬಡಿತ ಕೂಡ ಹೃದಯದ ಸಮಸ್ಯೆಯನ್ನು ಸೂಚಿಸಬಹುದು. ನೀವು ನಿರಂತರವಾಗಿ ವೇಗವಾಗಿ ಅಥವಾ ಅನಿಯಮಿತ ಹೃದಯ ಬಡಿತವನ್ನು ಅನುಭವಿಸುತ್ತಿದ್ದರೆ ಅಥವಾ ಇತರ ರೋಗಲಕ್ಷಣಗಳನ್ನು ಅನುಭವಿಸಿದರೆ ತುರ್ತು ವೈದ್ಯಕೀಯ ಸಹಾಯವನ್ನು ಪಡೆಯುವುದು ಅಗತ್ಯ.

ಆಯಾಸ:

ಸಾಮಾನ್ಯ ಆಯಾಸವನ್ನು ಮೀರಿ ನಿರಂತರ ಆಯಾಸ, ಹೃದಯರಕ್ತನಾಳದ ವ್ಯವಸ್ಥೆಗೆ ಹಾನಿ ಉಂಟಾದರೆ ಅದು ಹೃದಯದ ಸಮಸ್ಯೆಯ ಸಂಕೇತವಾಗಿರಬಹುದು. ಈ ಬಳಲಿಕೆ ದೈಹಿಕ ಅಥವಾ ಮಾನಸಿಕವಾಗಿರಬಹುದು. ಇದು ವಿಶ್ರಾಂತಿಯಿಂದ ಕಡಿಮೆಯಾಗುವುದಿಲ್ಲ.

ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಾಗಲು ಕಾರಣವೇನು?

ಕಾಲುಗಳಲ್ಲಿ ಊತ:

ಕಾಲುಗಳು, ಹೊಟ್ಟೆಯಲ್ಲಿ ಊತವು ಹೃದಯ ವೈಫಲ್ಯದ ಸಂಕೇತವಾಗಿರಬಹುದು. ಹೃದಯವು ಪರಿಣಾಮಕಾರಿಯಾಗಿ ಪಂಪ್ ಮಾಡಲು ಹೆಣಗಾಡುತ್ತಿರುವಾಗ ಆ ಜಾಗದಲ್ಲಿ ದ್ರವ ಸಂಗ್ರಹಗೊಳ್ಳುತ್ತದೆ. ಇದು ಊತವನ್ನು ಉಂಟುಮಾಡುತ್ತದೆ. ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ.

ವಿಪರೀತ ಬೆವರುವುದು:

ಹೃದಯಾಘಾತದ ಲಕ್ಷಣ ಕೇವಲ ಬೆವರುವಿಕೆಯೊಂದಿಗೆ ಅಥವಾ ಕಿಬ್ಬೊಟ್ಟೆಯ ನೋವು ಅಥವಾ ಭೇದಿಯಿಂದಲೂ ಕಂಡುಬರಬಹುದು. ಈ ರೋಗಲಕ್ಷಣಗಳು ವಿಶೇಷವಾಗಿ ಮಧುಮೇಹಿಗಳಲ್ಲಿ ಕಂಡುಬರುತ್ತವೆ. ನೀವು ಮಧುಮೇಹಿಗಳಾಗಿದ್ದರೆ ಮತ್ತು ಈ ಅಸಾಮಾನ್ಯ ಲಕ್ಷಣಗಳನ್ನು ಅನುಭವಿಸಿದರೆ ಇಸಿಜಿ ಮಾಡಿಸಿಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ