ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?

ಕೂದಲನ್ನು ಕಿತ್ತುಕೊಳ್ಳುವುದರಿಂದ ಕೂದಲ ಬೇರಿಗೆ ತೊಂದರೆಯಾಗಬಹುದು. ಹೀಗಾಗಿ, ಕೂದಲು ಕೀಳುವುದು ಒಳ್ಳೆಯ ಅಭ್ಯಾಸವಲ್ಲ. ಆದರೆ, ಬೇರೆ ಕೂದಲು ಬಿಳಿಯಾಗುವುದಕ್ಕೂ ನಿಮ್ಮ ಕೂದಲು ಕಿತ್ತುಕೊಳ್ಳುವುದಕ್ಕೂ ಸಂಬಂಧವಿಲ್ಲ.

ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?
ಬಿಳಿ ಕೂದಲುImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 23, 2023 | 6:50 PM

ಕೂದಲಿನ ಬಗ್ಗೆ ನಮಗೆ ಹಲವು ನಂಬಿಕೆಗಳಿವೆ. ಅದರಲ್ಲೂ ಬಿಳಿಯಾದ ಕೂದಲನ್ನು ಕಿತ್ತರೆ ಅದರ ಸುತ್ತಲಿನ ಕೂದಲು ಬಿಳಿಯಾಗುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ, ಇದು ನಿಜವಾ? ಕೂದಲಿನ ಕೋಶಕದಲ್ಲಿ ಮೆಲನಿನ್ ಕಡಿಮೆಯಾದಾಗ ನಿಮ್ಮ ಕೂದಲಿನ ಬಣ್ಣ ಬದಲಾವಣೆಯಾಗುತ್ತದೆ. ನಿಮ್ಮ ಜೀವಕೋಶಗಳು ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಂತೆ, ನಿಮ್ಮ ಕೂದಲು ಬೂದು ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ, ನಿಮ್ಮ ಬೂದು ಕೂದಲನ್ನು ಕಿತ್ತುಕೊಳ್ಳುವುದರಿಂದ ಉಳಿದ ಕೂದಲುಗಳು ಕೂಡ ಬಿಳಿಯಾಗುತ್ತವೆ ಎಂಬುದು ನಿಜವಲ್ಲ.

ಆದರೆ, ಕೂದಲನ್ನು ಕಿತ್ತುಕೊಳ್ಳುವುದರಿಂದ ಕೂದಲ ಬೇರಿಗೆ ತೊಂದರೆಯಾಗಬಹುದು. ಹೀಗಾಗಿ, ಕೂದಲು ಕೀಳುವುದು ಒಳ್ಳೆಯ ಅಭ್ಯಾಸವಲ್ಲ. ಆದರೆ, ಬೇರೆ ಕೂದಲು ಬಿಳಿಯಾಗುವುದಕ್ಕೂ ನಿಮ್ಮ ಕೂದಲು ಕಿತ್ತುಕೊಳ್ಳುವುದಕ್ಕೂ ಸಂಬಂಧವಿಲ್ಲ. ಒಂದು ಕೂದಲು ಕಿತ್ತುಕೊಂಡರೆ ಅದು ಇತರ ಕೂದಲಿನ ಬೇರುಗಳನ್ನು ದುರ್ಬಲಗೊಳಿಸಬಹುದು. ಇದು ನಿರ್ದಿಷ್ಟ ಸ್ಥಳದಲ್ಲಿ ಕೂದಲು ಮತ್ತೆ ಬೆಳೆಯುವುದನ್ನು ತಡೆಯಬಹುದು.

ನಮ್ಮ ಜೀವನಶೈಲಿಯು ನಮ್ಮ ಜೀವಕೋಶಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ ನೀವು ಸೇವಿಸಬೇಕಾದ ಮತ್ತು ತಪ್ಪಿಸಬೇಕಾದ ಆಹಾರಗಳು ಇಲ್ಲಿವೆ. ಯಾವ ಆಹಾರಗಳು ಉತ್ತಮ ಮೆಲನಿನ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ? ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Hair Growth: ನಿಮ್ಮ ಕೂದಲು ಉದ್ದವಾಗಿ ಬೆಳೆಯಲು ಈ ಹಣ್ಣುಗಳನ್ನು ಸೇವಿಸಿ

ದೀರ್ಘಕಾಲದವರೆಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಮ್ಮ ಚರ್ಮಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ. ಸೂರ್ಯನಿಗೆ ಅತಿಯಾದ ಶಾಖ ಕೂದಲಲ್ಲಿ ಮೆಲನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗಲು ಕಾರಣವಾಗುತ್ತದೆ.

ಧೂಮಪಾನವು ದೇಹದ ಮೇಲೆ ವಿವಿಧ ನೆಗೆಟಿವ್ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ಧೂಮಪಾನವು ನೆತ್ತಿಯಲ್ಲಿ ರಕ್ತದ ಹರಿವನ್ನು ತಡೆಯುತ್ತದೆ. ಇದು ಕೂದಲಿನ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ವಾಸ್ತವವಾಗಿ, ಧೂಮಪಾನವು ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಹಾಗೂ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಒತ್ತಡ ಮತ್ತು ಆತಂಕದಂತಹ ಇತರ ಅಸ್ವಸ್ಥತೆಗಳು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅತಿಯಾದ ಒತ್ತಡವು ನಿದ್ರೆಯ ಕೊರತೆ, ಹಸಿವಿನ ಕೊರತೆ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಇವುಗಳು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಧೂಳು, ಮಾಲಿನ್ಯದಿಂದ ನಿಮ್ಮ ಕೂದಲು ಉದುರದಂತೆ ತಡೆಯುವುದು ಹೇಗೆ?

ಕೂದಲಿನಲ್ಲಿ ಮೆಲನಿನ್ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ವಿಟಮಿನ್‌ಗಳು ಪ್ರಮುಖ ಪೋಷಕಾಂಶವಾಗಿದೆ. ಇದಲ್ಲದೆ, ವಿಶೇಷವಾಗಿ ವಿಟಮಿನ್ ಬಿ 12 ಕೆಂಪು ರಕ್ತ ಕಣಗಳನ್ನು ಉಳಿಸಿಕೊಳ್ಳಲು ದೇಹಕ್ಕೆ ಅಗತ್ಯವಾಗಿರುತ್ತದೆ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ಕೂದಲಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಕೊರತೆಯು ಕೂದಲು ಬಿಳಿಯಾಗುವುದು ಮುಂತಾದ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ