AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 6,6,6,6,6,6..; ರಸೆಲ್ ಸುನಾಮಿಗೆ ತತ್ತರಿಸಿದ ರಾಜಸ್ಥಾನ್; ವಿಡಿಯೋ

IPL 2025: 6,6,6,6,6,6..; ರಸೆಲ್ ಸುನಾಮಿಗೆ ತತ್ತರಿಸಿದ ರಾಜಸ್ಥಾನ್; ವಿಡಿಯೋ

ಪೃಥ್ವಿಶಂಕರ
|

Updated on: May 04, 2025 | 8:18 PM

Andre Russell's 57-Run Blast: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಆ್ಯಂಡ್ರೆ ರಸೆಲ್ 57 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. 407 ದಿನಗಳ ನಂತರ ಬಂದ ಈ ಅರ್ಧಶತಕ, 25 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಒಳಗೊಂಡಿತ್ತು. ಮೊದಲು ನಿಧಾನಗತಿಯ ಬ್ಯಾಟಿಂಗ್ ಮಾಡಿದ ರಸೆಲ್ ನಂತರ ವೇಗವಾಗಿ ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಆಲ್‌ರೌಂಡರ್ ಆಂಡ್ರೆ ರಸೆಲ್ 57 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆರಂಭದಲ್ಲಿ ರನ್ ಗಳಿಸಲು ಪರದಾಡಿದ ರಸೆಲ್ ಮೊದಲ 9 ಎಸೆತಗಳಲ್ಲಿ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಗೇರ್ ಬದಲಾಯಿಸಿದ ರಸೆಲ್ ವೇಗವಾಗಿ ರನ್ ಗಳಿಸಲು ಪ್ರಾರಂಭಿಸಿದರು. ಈ ಮೂಲಕ ರಸೆಲ್ ಮುಂದಿನ 13 ಎಸೆತಗಳಲ್ಲಿ ಬರೋಬ್ಬರಿ 49 ರನ್ ಗಳಿಸಿದರು. ಅಂತಿಮವಾಗಿ ರಸೆಲ್ 25 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ 57 ರನ್ ಗಳಿಸಿದರು.

407 ದಿನಗಳ ನಂತರ ಶತಕ

ಆಂಡ್ರೆ ರಸೆಲ್ ಅವರ ಈ ಅರ್ಧಶತಕ 407 ದಿನಗಳ ನಂತರ ಬಂದಿದೆ. ಇದಕ್ಕೂ ಮೊದಲು, ಮಾರ್ಚ್ 23, 2024 ರಂದು ಅವರು ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 64 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಇದಾದ ನಂತರ, ಅವರ ಬ್ಯಾಟ್‌ನಿಂದ ಒಂದೇ ಒಂದು ಅರ್ಧಶತಕ ಬರಲಿಲ್ಲ. ಈಗ ಈ ಮಹತ್ವದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಈ ಸೀಸನ್​ನಲ್ಲಿ ರಸೆಲ್ ಆಡಿರುವ 11 ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ 18.42 ಸರಾಸರಿಯಲ್ಲಿ 129 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ. ಈ ಪಂದ್ಯಕ್ಕೂ ಮುನ್ನ ಅವರು 10 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 72 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಬೌಲಿಂಗ್ ವಿಷಯಕ್ಕೆ ಬಂದರೆ ರಸೆಲ್ 10 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ ಇದುವರೆಗೆ 11 ವಿಕೆಟ್‌ಗಳನ್ನು ಪಡೆದಿದ್ದಾರೆ.