IPL 2025: 6,6,6,6,6,6..! ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ರಿಯಾನ್ ಪರಾಗ್; ವಿಡಿಯೋ
Riyan Parag's 6 Sixes in a Row: 2025ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತು. ಆದರೆ, ಪಂದ್ಯಾವಳಿಯಿಂದ ಹೊರಬಿದ್ದ ನಂತರ ರಿಯಾನ್ ಪರಾಗ್ ಅವರು ಕೆಕೆಆರ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. 45 ಎಸೆತಗಳಲ್ಲಿ 95 ರನ್ ಗಳಿಸಿ ಕೇವಲ 5 ರನ್‌ಗಳಿಂದ ಶತಕ ವಂಚಿತರಾದರು.
2025 ರ ಐಪಿಎಲ್ ಸೀಸನ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಉತ್ತಮವಾಗಿರಲಿಲ್ಲ. ಸತತ ಸೋಲುಗಳಿಂದ ರಾಜಸ್ಥಾನ್ ತಂಡ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಅಲ್ಲದೆ ನಾಯಕ ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ರಿಯಾನ್ ಪರಾಗ್ ಅವರ ಪ್ರದರ್ಶನವೂ ಉತ್ತಮವಾಗಿಲ್ಲ. ಆದರೆ ಪಂದ್ಯಾವಳಿಯಿಂದ ಹೊರಬಿದ್ದ ಬಳಿಕ ಫಾರ್ಮ್ ಕಂಡುಕೊಂಡಿರುವ ರಿಯಾನ್ ಪರಾಗ್ ಕೆಕೆಆರ್ ವಿರುದ್ಧ ಆಡಿದ ಇನ್ನಿಂಗ್ಸ್ ಎಲ್ಲರನ್ನೂ ಬೆರಗುಗೊಳಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ, ರಿಯಾನ್ ಪರಾಗ್ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
13 ನೇ ಓವರ್‌ನಲ್ಲಿ ಕೆಕೆಆರ್ ಪರ ಮೊಯೀನ್ ಅಲಿ ಬೌಲಿಂಗ್ ಆರಂಭಿಸಿದರು. ಈ ಓವರ್‌ನ ಮೊದಲ ಎಸೆತದಲ್ಲಿ ಶಿಮ್ರಾನ್ ಹೆಟ್ಮೆಯರ್ ಒಂದು ರನ್ ಗಳಿಸಿದರೆ, ಪರಾಗ್ ಸ್ಟ್ರೈಕ್‌ಗೆ ಬಂದರು. ನಂತರ ಪರಾಗ್ ಓವರ್‌ನ ಉಳಿದ 5 ಎಸೆತಗಳಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಅವರು ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು.
ಮುಂದಿನ ಓವರ್‌ನಲ್ಲೂ ತನ್ನ ಆಕ್ರಮಣಕಾರಿ ಆಟ ಮುಂದುವರೆಸಿದ ರಿಯಾನ್, ವರುಣ್ ಚಕ್ರವರ್ತಿ ಎಸೆದ 14ನೇ ಓವರ್‌ನ ಎರಡನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಈ ರೀತಿಯಾಗಿ ಪರಾಗ್ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದರು. ಅಂತಿಮವಾಗಿ ರಿಯಾನ್ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್‌ಗಳಿಂದ 95 ರನ್ ಗಳಿಸಿ ಔಟಾದರು. ಈ ಮೂಲಕ ಕೇವಲ 5 ರನ್‌ಗಳಿಂದ ಶತಕ ವಂಚಿತರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ