ಇತ್ತೀಚಿನ ದಿನಗಳಲ್ಲಿ ಬ್ರೈನ್‌ಟ್ರೈಮರ್ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಆದರೆ ಮೆದುಳು ಗೆಡ್ಡೆಯ ಬಗ್ಗೆ ಮಾಹಿತಿಯ ಕೊರತೆಯಿಂದ ಲಕ್ಷಣಗಳು ಕಾಣಿಸಿಕೊಂಡರೂ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಈ ಕಾಯಿಲೆ ಗಂಭೀರ ಹಂತಕ್ಕೆ ತಲುಪಿದ ನಂತರ ವೈದ್ಯರನ್ನು ಸಂಪರ್ಕಿಸುವವರೇ ಹೆಚ್ಚು. ಆದರೆ ಬ್ರೈನ್ ಟ್ಯೂಮರ್ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 8 ರಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಮೊದಲ ಬಾರಿಗೆ ಜೂನ್ 8,2000ರಂದು ಜರ್ಮನಿಯ ಬ್ರೈನ್ ಟ್ಯೂಮರ್ ಅಸೋಸಿಯೇಷನ್ ಆಚರಿಸಿತು. ಬ್ರೈನ್ ಟ್ಯೂಮರ್ ರೋಗಿಗಳನ್ನು ಬೆಂಬಲಿಸಲು, ರೋಗದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ವಿಶ್ವದಾದ್ಯಂತ ಮೆದುಳು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ ಟ್ರೈನ್ ಟ್ಯೂಮರ್ ಬಗ್ಗೆ ಕೆಲವು ತಪ್ಪು ಕಲ್ಪನೆ ಗಳಿದ್ದು, ಅದನ್ನು ತೊಡೆದು ಹಾಕುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಮೆದುಳಿನಲ್ಲಿ ಅಥವಾ ಅದರ ಸಮೀಪದಲ್ಲಿ ಜೀವಕೋಶಗಳ ಬೆಳವಣಿಗೆಯನ್ನು ಮೆದುಳಿನ ಗೆಡ್ಡೆ ಎನ್ನಲಾಗುತ್ತದೆ. ಮೆದುಳಿನ ಅಂಗಾಂಶವಲ್ಲದೆ ಹತ್ತಿರದ ನರಗಳು, ಪಿಟ್ಯುಟರಿ ಗ್ರಂಥಿ, ಪೀನಲ್ ಗ್ರಂಥಿ ಮತ್ತು ಮೆದುಳಿನ ಮೇಲ್ಮೈ ಮೇಲೆ ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: ಅತ್ತೆ ಸೊಸೆ ಜಗಳ ಶುರುವಾಗುವುದೇ ಇಲ್ಲಿಂದ!
* ಆಗಾಗ ತಲೆನೋವು ಬರುವುದು
* ವಿಪರೀತ ಸುಸ್ತು
* ಕಣ್ಣು ಮಂಜಾಗುವುದು, ದೃಷ್ಟಿ ಕಡಿಮೆಯಾಗುವುದು
* ತಲೆ ಸುತ್ತುವುದು
* ಬಂಜೆತನ
* ಕಿವಿ ಕೇಳಿಸದೇ ಇರುವುದು
* ಪಿಡ್ಸ್ ಬರುವುದು
* ವಾಂತಿ ಹಾಗೂ ವಾಕರಿಕೆಯಾಗುವುದು
ಬ್ರೈನ್ ಟ್ಯೂಮರನ್ನು ಸಿಟಿ ಅಥವಾ ಸಿಎಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್ ಮೂಲಕ ಪತ್ತೆ ಮಾಡಬಹುದಾಗಿದೆ. ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ ಮೂಲಕ ಗೆಡ್ಡೆಗಳ ರಾಸಾಯನಿಕ ಪ್ರೊಫೈಲ್ ಅನ್ನು ಪರೀಕ್ಷಿಸಬಹುದು. ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಕೂಡ ಗೆಡ್ಡೆಯನ್ನು ಪತ್ತೆಹಚ್ಚಬಹುದಾಗಿದೆ.
ಮೆದುಳಿನ ಗೆಡ್ಡೆಯ ತೀವ್ರತೆಯನ್ನು ಆಧಾರಿಸಿ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ಈ ಮೆದುಳಿನ ಗೆಡ್ಡೆಗೆ ಶಸ್ತ್ರಚಿಕಿತ್ಸೆ, ವಿಕಿರಣ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳನ್ನು ನೀಡಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: