ಇಂದು ವಿಶ್ವ ಜಲ ದಿನ (World Water Day). ಸಕಲ ಜೀವರಾಶಿಗಳ ಮೂಲ ನೀರು (Water). ನೀರಿಲ್ಲದ ಬದುಕು ಊಹೆಗೂ ನಿಲುಕದ್ದು, ಹುಟ್ಟಿನಿಂದ ಸಾಯುವವರೆಗೂ ಪ್ರತೀ ಜೀವಿಗೆ ನೀರು ಅತ್ಯಗತ್ಯ. ಸಾಯುವ ಮೊದಲೂ ಕೂಡ ಒಂದು ಹನಿ ನೀರು ಬಾಯಿಗೆ ಬೇಕು ಎನ್ನುವ ಪದ್ಧತಿ ಇದೆ. ಹೀಗಾಗಿ ನೀರನ್ನು ಜೀವಜಲ ಎಂದೇ ಕರೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶದಿಂದ ಸರಿಯಾಗಿ ಮಳೆಯಾಗದೆ ನೀರಿನ ಕೊರತೆ ಎದುರಾಗುತ್ತಿದೆ. ಬಯಲು ಸೀಮೆಯಂತಹ ಪ್ರದೇಶಗಳಲ್ಲಿ ಬೇಸಿಗೆ ಬಂತೆಂದರೆ ಸಾಕು ಎಲ್ಲಡೆ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುವುದು ದುರಂತಹ. ಇಂತಹ ಸಮಸ್ಯೆಗಳಿಗೊಂದು ಪರಿಹಾರ ನೀಡಬೇಕು. ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತೀ ವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಪ್ರತೀ ವರ್ಷ ಮಾರ್ಚ್ 22 ರಂದು ಜಗತ್ತಿನಾದ್ಯಂತ ಜಲ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸುತ್ತಿದೆ.
2022 ರ ಥೀಮ್:
ವಿಶ್ವ ಜಲ ದಿನ 2022 ರ ಥೀಮ್ “ಅಂತರ್ಜಲದ ಅದೃಶ್ಯವನ್ನು ಗೋಚರಿಸುವಂತೆ ಮಾಡುವುದು”. ಕಳೆದ ವಾರ ರೋಮ್‌ನಲ್ಲಿ ನಡೆದ 30ನೇ ಸಭೆಯಲ್ಲಿ ಯುಎನ್-ವಾಟರ್ ಈ ವಿಷಯವನ್ನು ನಿರ್ಧರಿಸಿದೆ. ಇದನ್ನು ಅಂತರರಾಷ್ಟ್ರೀಯ ಅಂತರ್ಜಲ ಸಂಪನ್ಮೂಲಗಳ ಮೌಲ್ಯಮಾಪನ ಕೇಂದ್ರ (IGRAC) ಪ್ರಸ್ತಾಪಿಸಿದೆ. ಹೀಗಾಗಿ ವಾರ್ಷಿಕ ಜಲ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ.
ವಿಶ್ವ ಜಲ ದಿನದ ಮಹತ್ವ:
ಮುಖ್ಯವಾಗಿ ನೀರಿನ ಕೊರತೆಯ ಬಗ್ಗೆ ಅರಿವು ಮೂಡಿಸುವುದು ವಿಶ್ವ ಜಲ ದಿನದ ಮಹತ್ವದ ಉದ್ದೇಶವಾಗಿದೆ. ಇಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಅತೀ ಅಗತ್ಯವಾಗಿದೆ. ಭೂಮಿಯ ಮೇಲೆ ಸುಮಾರು 70 ಪ್ರತಿಶತದಷ್ಟು ನೀರು ಆವರಿಸಿದ್ದರೆ, ಸಿಹಿನೀರು ಅದರ ಶೇಕಡಾ 3 ರಷ್ಟಿದೆ, ಅದರಲ್ಲಿ ಮೂರನೇ ಎರಡರಷ್ಟು ಹೆಪ್ಪುಗಟ್ಟಿದ ಅಥವಾ ಪ್ರವೇಶಿಸಲಾಗುವುದಿಲ್ಲ ಮತ್ತು ಬಳಕೆಗೆ ಲಭ್ಯವಿಲ್ಲ.
ವರದಿಯ ಪ್ರಕಾರ ನಮಗೆ ಕುಡಿಯಲು ಶುದ್ಧ ನೀರು, ಇತರ ಗೃಹೋಪಯೋಗಿ ವಸ್ತುಗಳು ಮತ್ತು ಜಮೀನುಗಳಿಗೆ ನೀರುಣಿಸಲು ಅಗತ್ಯವಿದೆ. ಆದ್ದರಿಂದ, ಪ್ರಪಂಚದಾದ್ಯಂತ ಸುಮಾರು 1.1 ಶತಕೋಟಿ ಜನರು ಶುದ್ಧ ನೀರಿನ್ನು ಪಡೆಯುವುದಿಲ್ಲ ಮತ್ತು ಒಟ್ಟು 2.7 ಶತಕೋಟಿ ಜನರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಕಾಲ ನೀರಿನ ಕೊರತೆಯನ್ನು ಅನುಭವಿಸುತ್ತಾರೆ. ಆದ್ದರಿಂದ ನೀರಿನ ಮಿತ ಬಳಕೆ ಅಗತ್ಯವಾಗಿದೆ.
ನೀರಿನ ಮಿತ ಬಳಕೆಗೆ ಹೀಗೆ ಮಾಡಿ:
ಇದನ್ನೂ ಓದಿ:
International Day of Forests: ಪರಿಸರದ ರಕ್ಷಣೆಗೆ ಅರಣ್ಯಗಳ ಸುಸ್ಥಿರ ಬಳಕೆ ಅಗತ್ಯ
Published On - 10:15 am, Tue, 22 March 22