AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Day of Forests: ಪರಿಸರದ ರಕ್ಷಣೆಗೆ ಅರಣ್ಯಗಳ ಸುಸ್ಥಿರ ಬಳಕೆ ಅಗತ್ಯ

ಇಂದು ವಿಶ್ವ ಅರಣ್ಯ ದಿನ ಈ ಬಾರಿ ಅರಣ್ಯಗಳು ಮತ್ತು ಸುಸ್ಥಿರ ಉತ್ಪಾದನೆ ಮತ್ತು ಬಳಕೆ ಎನ್ನುವ  ಥೀಮ್​ನಲ್ಲಿ ಆಚರಿಸಲಾಗುತ್ತಿದೆ. 

International Day of Forests: ಪರಿಸರದ ರಕ್ಷಣೆಗೆ ಅರಣ್ಯಗಳ ಸುಸ್ಥಿರ ಬಳಕೆ ಅಗತ್ಯ
ಪ್ರಾತಿನಿಧಿಕ ಚಿತ್ರ
TV9 Web
| Updated By: Pavitra Bhat Jigalemane|

Updated on: Mar 21, 2022 | 11:34 AM

Share

ಭೂಮಿಯ ಮೇಲಿನ ಪ್ರತೀ ಜೀವಿಯ ಇರುವಿಕೆಗೆ ಮೂಲ ಕಾರಣ ಪರಿಸರ. ಕಾಡು, ನೆಲ, ನೀರು ಇವೇ ಪ್ರತೀ ಜೀವಿಯ ಉಸಿರು, ಸಂಪನ್ನತೆ ಹೊದ್ದು ಮಲಗಿದ ಅರಣ್ಯಗಳು ಪ್ರಕೃತಿಯನ್ನು ಶ್ರೀಮಂತಗೊಳಸುತ್ತವೆ. ನಿಸರ್ಗದೊಡಲು ಮಾನವನಿಗೆ ಅಂದಿನಿಂದ ಇಂದಿನವರೆಗೂ ಒಳಿತನ್ನೇ ಮಾಡಿದೆ. ಆದರೆ ದುರಂತವೆಂದರೆ ಮಾನವ ಮಾತ್ರ ಪ್ರಕೃತಿಯ ಮೇಲೆ ತನ್ನ ಅಧಿಕಾರವನ್ನು ಚಲಾಯಿಸುತ್ತಲೇ ಬಂದಿದ್ದಾನೆ. ಅದಾದರೂ ಎಷ್ಟು ತಡೆದುಕೊಳ್ಳುತ್ತದೆ?. ಇದೇ ಕಾರಣಕ್ಕೆ ಪ್ರಕೃತಿ ವಿಕೋಪಗಳು ಸಂಭವಿಸುತ್ತದೆ. ಅರಣ್ಯಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಕಾಡಿದ್ದರೆ ನಾಡುವ ಮಾತು ಎಂದಿಗೂ ಸತ್ಯ ಇದೇ ಕಾರಣಕ್ಕೆ ಪ್ರತೀ ವರ್ಷ ವಿಶ್ವ ಅರಣ್ಯ ದಿನವನ್ನು (International Day of Forests) ಆಚರಿಸಲಾಗುತ್ತದೆ.

ಪ್ರತೀ ವರ್ಷ ಮಾರ್ಚ್​ 21 ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ. ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವುಮೂಡಿಸುವ ಸಲುವಾಗಿ ವಿಶ್ವದೆಲ್ಲೆಡೆ ಅರಣ್ಯ ದಿನವನ್ನು ಆಚರಿಸಲಾಗುತ್ತದೆ. ಇಂದು ವಿಶ್ವ ಅರಣ್ಯ ದಿನ ಈ ಬಾರಿ ಅರಣ್ಯಗಳು ಮತ್ತು ಸುಸ್ಥಿರ ಉತ್ಪಾದನೆ ಮತ್ತು ಬಳಕೆ ಎನ್ನುವ  ಥೀಮ್​ನಲ್ಲಿ ಆಚರಿಸಲಾಗುತ್ತಿದೆ.

1971ರ ನವೆಂಬರ್‌ನಲ್ಲಿ ಆಹಾರ ಮತ್ತು ಕೃಷಿ ಸಂಘಟನೆಯ 16ನೇ ಸಮ್ಮೇಳನದಲ್ಲಿ ವಿಶ್ವ ಅರಣ್ಯ ದಿನ ಆಚರಿಸುವ ನಿರ್ಣಯ ಅಂಗೀಕರಿಸಲಾಗಿತ್ತು. ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆದು ಸದ್ಯದ ಜತೆಗೆ ಮುಂದಿನ ಪೀಳಿಗೆಗೂ ಅರಣ್ಯ ಸಂರಕ್ಷಿಸಲು ಅಂತಾರಾಷ್ಟ್ರೀಯ ಅರಣ್ಯ ದಿನ ಆಚರಣೆ ನಿರ್ಧಾರಕ್ಕೆ ಬರಲಾಯಿತು. ಅರಣ್ಯ ಹಾಗೂ ಮರವನ್ನೊಳಗೊಂಡ ಚಟುವಟಿಕೆಗಳನ್ನು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಿಸಲು ವಿವಿಧ ದೇಶಗಳು ಸಮ್ಮತಿಸಿದ್ದು, 5 ವರ್ಷ ಎಲ್ಲಾ ದೇಶಗಳು ಕಾರ್ಯನಿರ್ವಹಿಸಿವೆ. ಇದರ ಭಾಗವಾಗಿ ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನ ಆಚರಿಸುವ ನಿರ್ಧಾರ ಕೈಗೊಂಡು 2012ರಿಂದಲೇ ಆರಂಭಿಸಲಾಗಿದೆ. 2012ರಲ್ಲಿ ಅಂತಾರಾಷ್ಟ್ರೀಯ ಅರಣ್ಯ ಸಂಶೋಧನಾ ಕೇಂದ್ರ ಆರು ದಿನಗಳ ಅರಣ್ಯ ದಿನಗಳ ಕಾರ‍್ಯಕ್ರಮ ರೂಪಿಸಿ ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಮಾರ್ಚ್‌ 21ರಂದು ವಿಶ್ವ ಅರಣ್ಯ ದಿನ ಆಚರಿಸುವಂತೆ ಮಾಡಿತು. ವಿಶ್ವಸಂಸ್ಥೆಯೂ ಇದಕ್ಕೆ ಅನುಮತಿ ನೀಡಿತು.

ಇದನ್ನೂ ಓದಿ:

World Down Syndrome Day 2022: ಡೌನ್ ಸಿಂಡ್ರೋಮ್‌ನಿಂದ ಮಗುವನ್ನು ಹೊರತರಲು ಬೇಕು ಸಂಯಮ, ಸಂವಹನ: ತೇಜಲ್ ಶಾ