ಬೆವರಿನಿಂದ ಉಂಟಾಗುವ ದುರ್ವಾಸನೆ ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್
ಬೆವರಿನಿಂದ ಉಂಟಾಗುವ ದೇಹದ ದುರ್ವಾಸನೆಯನ್ನು ತಡೆಯಲು ಮನೆಮದ್ದುಗಳನ್ನು ಬಳಸಿ. ಇಲ್ಲಿದೆ ನೋಡಿ ಕೆಲವು ಸರಳ ಉಪಾಯಗಳು
ಬೇಸಿಗೆ (Summer) ಆರಂಭವಾಗಿದೆ. ಸೂರ್ಯನ ಬಿಸಿ ಗಾಳಿಗೆ ದೇಹ ನಿರ್ಜಲೀಕರಣಗೊಂಡು ಬೆವರುತ್ತದೆ. ಅದರಲ್ಲೂ ಕಂಕುಳಿನ ಬೆವರು ಬೇಸಿಗೆಯಲ್ಲಿ ಕಾಡುವ ಬಹು ದೊಡ್ಡ ಸಮಸ್ಯೆಯಾಗಿದೆ. ದೇಹ ಬೆವರುವುದರಿಂದ ಗುಳ್ಳೆಗಳು, ಕೆಂಪು ಪ್ಯಾಚಸ್ತುರಿಕೆ ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಬೆವರಿನ ವಾಸನೆ ಇತರರೊಂದಿಗೆ ಸೇರಲು ಮುಜುಗರ ಉಂಟಾಗುತ್ತದೆ. ಧರಿಸಿದ ಬಟ್ಟೆಯೂ ಒದ್ದೆಯಾಗಿ ಕಿರಿಕಿರಿ ಉಂಟಾಗುತ್ತದೆ. ಬೆವರಿನ ವಾಸನೆ (Body Odor) ತಡೆಯಲು ಮಾರುಕಟ್ಟೆಯಲ್ಲಿ ತರಹೇವಾರಿ ಫರ್ಪ್ಯೂಮ್ ಗಳನ್ನು ಬಳಸುತ್ತೇವೆ. ಆದರೆ ಅದರಿಂದಲೂ ಚರ್ಮಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ನೈಸರ್ಗಿಕ ಪದಾರ್ಥಗಳನ್ನು ಬಳಸಿ ದೇಹದ ಬೆವರನ್ನು ತಡೆಯಬಹುದು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್
ಆಲೂಗಡ್ಡೆ ರಸ: ಆಲೂಗಡ್ಡೆ ಸೌಂದರ್ಯವರ್ಧಕವೂ ಹೌದು. ಮುಖದ ಮೇಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ಆಲೂಗಡ್ಡೆ ರಸವನ್ನು ಬಳಸಲಾಗುತ್ತದೆ. ಕಂಕುಳಲ್ಲಿ ದುರ್ವಾಸನೆ ಕಂಡು ಬಂದರೆ ಆಲೂಗೆಡ್ಡೆಯ ತುಂಡನ್ನು ತೆಗೆದುಕೊಂಡು ಆ ಭಾಗಕ್ಕೆ ಉಜ್ಜಿ. 10 ನಿಮಿಷಗಳ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಿರಿ. ನಂತರ ಬಟ್ಟೆಗಳನ್ನು ಧರಿಸಿ.
ಟೀ ಟ್ರೀ ಆಯಿಲ್; ಕಂಕುಳಿನ ಬೆವರು ಕಿರಿಕಿರಿ ಉಂಟಾಗುತ್ತದೆ. ಒಂದು ಬಟ್ಟಲಿನಲ್ಲಿ ಎರಡು ಚಮಚ ಟೀ ಟ್ರೀ ಆಯಿಲ್ ಅನ್ನು ತೆಗೆದುಕೊಂಡು ಅದನ್ನು 2 ಚಮಚ ನೀರಿನ ಜೊತೆ ಮಿಶ್ರಣ ಮಾಡಿ ಆರ್ಮ್ಸ್ ಮೇಲೆ ಸ್ಪ್ರೇ ಮಾಡಿ ಮತ್ತು 15 ನಿಮಿಷಗಳ ಕಾಲ ಬಿಡಿ. ನಂತರ ಹತ್ತಿಯ ಉಂಡೆಯಿಂದ ಒರೆಸಿಕೊಳ್ಳಿ.
ನಿಂಬೆ ಸಿಪ್ಪೆ: ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿರುವ ನಿಂಬೆ ಸಿಪ್ಪೆ ಬೆವರಿನ ವಾಸನೆಯನನ್ಉ ಹೋಗಲಾಡಿಸುತ್ತದೆ. ನಿಂಬೆ ಸಿಪ್ಪೆಯ ಪುಡಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದರಲ್ಲಿ ರೋಸ್ ವಾಟರ್ ಮಿಶ್ರಣ ಮಾಡಿ. ಈಗ ಅದನ್ನು ಅಂಡರ್ ಆರ್ಮ್ಸ್ ಮೇಲೆ ಹಚ್ಚಿ ಮತ್ತು ಲಘುವಾಗಿ ಉಜ್ಜಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನಂತರ ತಣ್ಣೀರಿನಿಂದ ಸ್ವಚ್ಛಗೊಳಿಸಿ.
ತೆಂಗಿನ ಎಣ್ಣೆ : ಎಣ್ಣೆಯಿಂದ ಕೂಡಿರುವ ಚರ್ಮ ಹೆಚ್ಚು ಬೆವರನ್ನು ಉಂಟು ಮಾಡುತ್ತದೆ. ತೆಂಗಿನೆಣ್ಣೆಯನ್ನು ಕೈಗೆ ಹಾಕಿಕೊಂಡು ಕಂಕುಳನ್ನು ಮಸಾಜ್ ಮಾಡಿ. ಸುಮಾರು 5 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ, 15 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸ್ನಾನ ಮಾಡಿ. ಇದರಿಂದ ಬೆವರು ವಾಸನೆ ಕಡಿಮೆಯಾಗುತ್ತದೆ.
ಇದನ್ನೂ ಓದಿ: