ಝೂನೋಸಸ್ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಬಹುಬೇಗನೇ ಹರಡುತ್ತವೆ. ಒಂದು ವೇಳೆ ಈ ಸೋಂಕಿತ ಪ್ರಾಣಿಯ ರಕ್ತ, ಮೂತ್ರ ಲೋಳೆ, ಮಲ ಅಥವಾ ದೇಹದ ಇತರ ದ್ರವಗಳೊಂದಿಗೆ ನೇರವಾಗಿ ಇಲ್ಲವಾದರೆ ಪರೋಕ್ಷವಾಗಿ ಸಂಪರ್ಕದಿಂದಾಗಿ ಕಾಯಿಲೆಯೂ ಹರಡುವ ಸಾಧ್ಯತೆಯಿದೆ. ರೇಬಿಸ್, ಎಬೋಲಾ, ಹಂದಿ ಜ್ವರ, ಫ್ಲೂ, ಹಕ್ಕಿ ಜ್ವರ ಇವೆಲ್ಲವೂ ಝೂನೋಟಿಕ್ ಕಾಯಿಲೆಗಳ ಸಾಲಿಗೆ ಸೇರುತ್ತದೆ. ಈ ರೋಗಗಳು ಬಾರದಂತೆ ತಡೆಗಟ್ಟಲು ಹಾಗೂ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜುಲೈ 6 ರಂದು ವಿಶ್ವ ಝೂನೋಸಸ್ ದಿನ ಅಥವಾ ವಿಶ್ವ ಪ್ರಾಣಿ ಜನ್ಯ ರೋಗ ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಜುಲೈ 6 ರಂದು, ಮೊದಲನೇ ಝೂನೋಟಿಕ್ ಕಾಯಿಲೆಯ ಲಸಿಕೆಯಾದ ‘ರೇಬಿಸ್ ಲಸಿಕೆಯ’ ಅಭಿವೃದ್ಧಿಯನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. 1885 ರಲ್ಲಿ ಜೂಯಿಸ್ ಪಾಶ್ಚರ್ ಅವರು ಝೂನೋಟಿಕ್ ಕಾಯಿಲೆಯಾದ ರೇಬಿಸ್ ವಿರುದ್ಧ ಮೊದಲ ಲಸಿಕೆಯನ್ನು ಕಂಡುಹಿಡಿದ ದಿನವನ್ನು ನೆನಪಿಸುವ ದಿನವಾಗಿದೆ. 2007 ರಲ್ಲಿ ಈ ಲಸಿಕೆ ನೂರನೇ ವರ್ಷದ ವಾರ್ಷಿಕೋತ್ಸವದ ದಿನದಂದು ಮೊದಲ ವಿಶ್ವ ಝೂನೋಟಿಕ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಝೂನೋಸಸ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಆರೋಗ್ಯಕ್ಕೆ ಹಿತ ದೊಡ್ಡ ಪತ್ರೆ ಎಲೆಯ ಬಜ್ಜಿ, ರೆಸಿಪಿಯ ವಿಧಾನ ಇಲ್ಲಿದೆ
ಝೂನೋಟಿಕ್ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟಲು, ಈ ಕಾಯಿಲೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ದಿನವೂ ಮಹತ್ವಕಾರಿಯಾಗಿದೆ. ಈ ದಿನದಂದು ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ರೋಗಗಳ ಕಾರಣಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳನ್ನು ಆಯೋಜಿಸುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ