ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್‌ನೊಂದಿಗೆ ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಅಸೆಸ್ಮೆಂಟ್ ವರ್ಷ 2021-22ಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಕೊನೆಯ ದಿನಾಂಕವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಆದರೆ ಅಂತಿಮ ಗಡುವು ಡಿಸೆಂಬರ್ 31, 2021ರಂದು ಮುಕ್ತಾಯಗೊಂಡಿದೆ. ಈ ದಿನದಲ್ಲೂ ಐಟಿಆರ್ ರಿಟರ್ನ್ಸ್ ಫೈಲ್ ಮಾಡುವುದನ್ನು ತಪ್ಪಿಸಿದವರು ಚಿಂತಿಸಬೇಕಾಗಿಲ್ಲ. ಏಕೆಂದರೆ ಅವರು ಈಗಲೂ “ತಡವಾದ ರಿಟರ್ನ್” ಸಲ್ಲಿಸಬಹುದು. ಇತ್ತೀಚೆಗೆ ಕೇಂದ್ರ ನೇರ ತೆರಿಗೆ ಮಂಡಳಿ (CBDT) ಲೆಕ್ಕ ಪರಿಶೋಧನೆಯ ಪ್ರಕರಣಗಳಿಗೆ ಐಟಿಆರ್ ಗಡುವನ್ನು ಮಾರ್ಚ್ 15, 2022ರವರೆಗೆ ವಿಸ್ತರಿಸಿದೆ ಎಂಬುದನ್ನು ಗಮನಿಸಬೇಕು. ಇದು ಬಹುತೇಕ ವ್ಯವಹಾರಗಳಿಗೆ ಸಂಬಂಧಿಸಿದೆ ಮತ್ತು ವ್ಯಕ್ತಿಗಳಿಗೆ ಗಡುವು ಎಂದು ಗೊಂದಲಕ್ಕೆ ಈಡಾಗಬಾರದು. ಡಿಸೆಂಬರ್ 31, 2021 ರಿಟರ್ನ್‌ಗಳನ್ನು ಸಲ್ಲಿಸಲು ಅಂತಿಮ ದಿನಾಂಕ ಆಗಿಹೋಗಿದೆ ಮತ್ತು ತಮ್ಮ ಖಾತೆಗಳನ್ನು ಆಡಿಟ್ ಮಾಡಬೇಕಾಗಿಲ್ಲದ ವೈಯಕ್ತಿಕ ತೆರಿಗೆದಾರರಿಗೆ ಈ ದಿನಾಂಕ ಅನ್ವಯಿಸುತ್ತದೆ.
ವೈಯಕ್ತಿಕ ತೆರಿಗೆದಾರರು ಮೂರು ತಿಂಗಳ ಸಮಯ ಹೊಂದಿದ್ದಾರೆ. ಅದರಲ್ಲಿ ಅವರು ಇನ್ನೂ AY 22ಕ್ಕೆ ತಡವಾಗಿ ರಿಟರ್ನ್ಸ್ ಸಲ್ಲಿಸಬಹುದು. ಆದಾಯ ತೆರಿಗೆ (IT) ಕಾಯ್ದೆಯ ಸೆಕ್ಷನ್ 139(4) ಪ್ರಕಾರ, ತಡವಾಗಿ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31, 2022 ಕೊನೆಯ ದಿನಾಂಕವಾಗಿದೆ. ಐಟಿ ಕಾಯ್ದೆಯ ಸೆಕ್ಷನ್ 234F ಅಡಿಯಲ್ಲಿ ನಿಗದಿತ ದಿನಾಂಕವನ್ನು ಮೀರಿ ತಡವಾಗಿ ಸಲ್ಲಿಸಲು ದಂಡ ಅನ್ವಯ ಆಗುತ್ತದೆ. ನಿರ್ದಿಷ್ಟ ಅಸೆಸ್ಮೆಂಟ್ ವರ್ಷಕ್ಕೆ ಐಟಿಆರ್ ಫೈಲಿಂಗ್‌ನ ‘ಕೊನೆಯ ದಿನಾಂಕ’ ಮತ್ತು ‘ಪಾವತಿ ದಿನಾಂಕ’ ಮಧ್ಯದ ವ್ಯತ್ಯಾಸವನ್ನು ಗಮನಿಸುವುದು ಮುಖ್ಯ. ‘ಪಾವತಿ ದಿನಾಂಕ’ ಎನ್ನುವುದು ನಿರ್ದಿಷ್ಟ ಅಸೆಸ್ಮೆಂಟ್ ವರ್ಷಕ್ಕಾಗಿ ರಿಟರ್ನ್ ಅನ್ನು ವಿಳಂಬ ಶುಲ್ಕವನ್ನು ಪಾವತಿಸದೆ ಸಲ್ಲಿಸಬಹುದಾದ ದಿನಾಂಕವನ್ನು ಸೂಚಿಸುತ್ತದೆ. ಆದರೆ ‘ಕೊನೆಯ ದಿನಾಂಕ’ ಎಂಬುದು ತೆರಿಗೆದಾರರು ವಿಳಂಬ ಶುಲ್ಕವನ್ನು ಪಾವತಿಸಬೇಕಾದ ದಿನವಾಗಿದೆ.
ವಿಳಂಬ ಐಟಿಆರ್ ಫೈಲಿಂಗ್‌ಗೆ ದಂಡ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234F ಅಡಿಯಲ್ಲಿ ನಿಗದಿತ ದಿನಾಂಕದೊಳಗೆ ಐಟಿಆರ್ ಅನ್ನು ಸಲ್ಲಿಸದಿದ್ದಕ್ಕಾಗಿ ದಂಡವನ್ನು ಹಾಕಲಾಗುತ್ತದೆ. ತಡವಾದ ಶುಲ್ಕ ಅಥವಾ ದಂಡವು ತೆರಿಗೆದಾರರ ಆದಾಯವನ್ನು ಅವಲಂಬಿಸಿರುತ್ತದೆ. ತಡವಾದ ರಿಟರ್ನ್‌ಗಳನ್ನು ಅಸೆಸ್ಮೆಂಟ್ ವರ್ಷದ ಅಂತ್ಯಕ್ಕೆ ಮೊದಲು ಅಥವಾ ಅಸೆಸ್ಮೆಂಟ್ ಪೂರ್ಣಗೊಳ್ಳುವ ಮೊದಲು, ಯಾವುದು ಮೊದಲೋ ಆ ದಿನಾಂಕಕ್ಕೆ ಸಲ್ಲಿಸಬೇಕು. ತೆರಿಗೆಗೆ ಒಳಪಡುವ ಆದಾಯ 5 ಲಕ್ಷಕ್ಕಿಂತ ಹೆಚ್ಚಿಲ್ಲವೋ ಅಂಥವರಿಗೆ 1,000 ರೂಪಾಯಿ ದಂಡ ಮತ್ತು ಇತರರಿಗೆ 5,000 ರೂಪಾಯಿ ದಂಡ ಶುಲ್ಕ ಇದೆ.
ಕೆಲವು ಇತರ ತೆರಿಗೆದಾರರು ನಿಗದಿತ ದಿನಾಂಕದ ನಂತರ ಐಟಿಆರ್ ಸಲ್ಲಿಸಿದರೂ ದಂಡವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ ಎಂಬುದನ್ನು ಗಮನಿಸಬೇಕು. ಒಟ್ಟು ಆದಾಯವು ವಿನಾಯಿತಿ ಮಿತಿಯನ್ನು ಮೀರದ ತೆರಿಗೆದಾರರು ಡಿಸೆಂಬರ್ 31ರ ಗಡುವು ದಿನಾಂಕವನ್ನು ತಪ್ಪಿಸಿದ್ದರೂ ವಿಳಂಬ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಇತರ ಪರಿಣಾಮ
ಐಟಿಆರ್ ತಡವಾಗಿ ಸಲ್ಲಿಸುವ ಅತ್ಯಂತ ಸ್ಪಷ್ಟವಾದ ಪರಿಣಾಮವೆಂದರೆ, ಟಿಡಿಎಸ್ಗಾಗಿ ಮರುಪಾವತಿಯಲ್ಲಿ ವಿಳಂಬವಾಗುತ್ತದೆ. ತಮ್ಮ ರಿಟರ್ನ್ ಫೈಲಿಂಗ್ ಪ್ರೊಸೆಸ್ ಬೇಗ ಪೂರ್ಣಗೊಳಿಸಿದವರಿಗೆ ಆದ್ಯತೆ ಮೇರೆಗೆ ಮರುಪಾವತಿಯನ್ನು ನೀಡಲಾಗುತ್ತದೆ. ಟಿಡಿಎಸ್ ಮರುಪಾವತಿಯನ್ನು ಜನರೇಟ್ ಮಾಡುವಲ್ಲಿ ವಿಳಂಬವಾದಲ್ಲಿ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಆದಾಯ ತೆರಿಗೆ ಪಾವತಿಸುತ್ತದೆ ಎಂಬುದನ್ನು ಗಮನಿಸಬೇಕು. ಆದರೆ ಐಟಿಆರ್ ಸಲ್ಲಿಸಲು ಗಡುವನ್ನು ತಪ್ಪಿಸಿದವರಿಗೆ ಅಂತಹ ಯಾವುದೇ ಬಡ್ಡಿಯನ್ನು ನೀಡುವುದಿಲ್ಲ. ಹಾಗಾಗಿ, ಐಟಿಆರ್ ಸಲ್ಲಿಸುವಲ್ಲಿ ಸಮಯ ಪಾಲನೆಯು ತೆರಿಗೆದಾರರಿಗೆ ಸಮಯಕ್ಕೆ ಸರಿಯಾಗಿ ಮರುಪಾವತಿಯನ್ನು ಖಚಿತಪಡಿಸುತ್ತದೆ ಮತ್ತು ಆದಾಯ ತೆರಿಗೆ ಇಲಾಖೆಯಿಂದ ವಿಳಂಬವಾದರೆ ಬಡ್ಡಿಯನ್ನು ಸಹ ಖಚಿತಪಡಿಸುತ್ತದೆ. ಆದ್ದರಿಂದ ಗಡುವಿನವರೆಗೆ ಕಾಯದೆ ಮತ್ತು ಪ್ರೊಸೆಸ್ ಬೇಗ ಮುಗಿಸಲು ಸಲಹೆ ನೀಡಲಾಗುತ್ತದೆ.
ನಷ್ಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲ್ಲ
ವಿಳಂಬವಾದ ಅಥವಾ ತಡವಾದ ಫೈಲಿಂಗ್ ಸಂದರ್ಭದಲ್ಲಿ ಮನೆ ಆಸ್ತಿಯನ್ನು ಹೊರತುಪಡಿಸಿ ತೆರಿಗೆದಾರರು ನಷ್ಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಅನುಮತಿಸುವುದಿಲ್ಲ. ವ್ಯವಹಾರ ಮತ್ತು ವೃತ್ತಿಯ ಖಾತೆಯಲ್ಲಿ ಸೇರ್ಪಡೆಯಾದ ನಷ್ಟಗಳು, ಉದಾಹರಣೆಗೆ ಇಂಟ್ರಾ-ಡೇ ಟ್ರೇಡಿಂಗ್ ಮತ್ತು ಡೆರಿವೇಟಿವ್ ಟ್ರೇಡಿಂಗ್, ಅಲ್ಪಾವಧಿ ಅಥವಾ ಇತರ ಮೂಲಗಳಿಂದ ಬರುವ ಆದಾಯದ ಮೇಲೆ ದೀರ್ಘಾವಧಿಯ ನಷ್ಟಗಳು, ತಡವಾಗಿ ಫೈಲಿಂಗ್ ಸಂದರ್ಭದಲ್ಲಿ ಮುಂದುವರಿಯಲು ಅನುಮತಿಸಲಾಗುವುದಿಲ್ಲ. ಆದರೆ ಗಡುವಿನ ಮೊದಲು ಐಟಿಆರ್ ಸಲ್ಲಿಸಿದರೆ ಈ ನಷ್ಟಗಳನ್ನು ಮುಂದಕ್ಕೆ ಒಯ್ಯಲು ಅನುಮತಿಸಲಾಗಿದೆ.
ಇದನ್ನೂ ಓದಿ: Tax Refund: ಏಪ್ರಿಲ್ನಿಂದ ಜನವರಿ 10ರ ತನಕ 1.59 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1.54 ಲಕ್ಷ ಕೋಟಿ ರೀಫಂಡ್