ದೆಹಲಿ: ರೈತರ ಜತೆ ಕೇಂದ್ರ ಸರ್ಕಾರದ 11ನೇ ಸುತ್ತಿನ ಸಭೆಯೂ ವಿಫಲಗೊಂಡಿದ್ದು, 3 ಕೃಷಿ ತಿದ್ದುಪಡಿ ಕಾಯ್ದೆಗಳ ಸಂಪೂರ್ಣ ರದ್ದತಿಗೆ ರೈತರ ಪಟ್ಟು ಹಿಡಿದಿದ್ದಾರೆ.
ಜನವರಿ 26ರಂದು ಟ್ರ್ಯಾಕ್ಟರ್ ಪರೇಡ್ ನಡೆಸುವುದಾಗಿ ಇಂದೂ ಸಹ ಪಂಜಾಬ್ ರೈತರು ಹೇಳಿಕೆ ನೀಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ನ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಏನೇ ಆಗಲಿ ಟ್ರ್ಯಾಕ್ಟರ್ ಪರೇಡ್ ನಡೆಸುವುದು ಖಚಿತ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು. ಕೃಷಿ ಕಾಯ್ದೆಗಳಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ರೈತರನ್ನು ಗೌರವಿಸುವ ದೃಷ್ಟಿಯಿಂದ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬಹುದಷ್ಟೇ ಎಂದು ಅವರು ತಿಳಿಸಿದರು.
ಈಗಿನ ಸದಸ್ಯರು ತಜ್ಞರ ಸಮಿತಿಗೆ ಬೇಡ.. ಹೊಸ ಸದಸ್ಯರನ್ನು ನೇಮಿಸಿ: ಸುಪ್ರೀಂ ಕೋರ್ಟ್ಗೆ ರೈತ ಸಂಘಟನೆ ಮನವಿ