ಹೈದರಾಬಾದ್: ಅಲ್ಲಿ ಕಂಡದ್ದು ಅಸಾಮಾನ್ಯ ದೃಶ್ಯವಾಗಿತ್ತು, ವಾರಂಗಲ್ ಸೆಂಟ್ರಲ್ ಜೈಲಿನಲ್ಲಿರುವ ಕೈದಿಗಳು ತಮ್ಮ ಎಲ್ಲಾ ವಸ್ತುಗಳು, ಹಾಸಿಗೆ, ಬಟ್ಟೆ, ಬಕೆಟ್ ಮತ್ತು ತಟ್ಟೆ ಎಲ್ಲವನ್ನೂ ಪ್ಯಾಕ್ ಮಾಡಿ ಸ್ಥಳಾಂತರಕ್ಕೆ ಸಿದ್ಧವಾಗುತ್ತಿದ್ದರು. ಎಲ್ಲರೂ ಅಚ್ಚುಕಟ್ಟಾಗಿ ಜೈಲು ಬಟ್ಟೆಗಳನ್ನು ಧರಿಸಿ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಕಾಯುವಂತೆ ಗೋಡೆಯ ಹೊರಗೆ ಕಾಯುತ್ತಿದ್ದರು. ಒಮ್ಮೆ ಬಸ್ಸುಗಳು ಬಂದಾಗ ಕರೆದೊಯ್ಯಲು ಬಂದಾಗ ತಮ್ಮ ವಸ್ತುಗಳನ್ನು ಕೈಯಲ್ಲಿ ಹಿಡಿದು ಸರತಿ ಸಾಲಿನಲ್ಲಿ ನಿಂತು ಹತ್ತುತ್ತಿದ್ದರು.
39 ಮಹಿಳೆಯರು ಸೇರಿದಂತೆ 119 ಕೈದಿಗಳ ಮೊದಲ ಬ್ಯಾಚ್ ಹೊರಹೋಗಿದ್ದುಬೆಂಗಾವಲು ವಾಹನಗಳು ಮತ್ತು ಸಶಸ್ತ್ರ ಪೊಲೀಸರು ಸೇರಿರುವ ಭಾರೀ ಭದ್ರತೆಯೊಂದಿಗೆ. ಮೂರು ಗಂಟೆಗಳ ಕಾಲ ಅವರು ಪ್ರಯಾಣಿಸುತ್ತಿದ್ದರು. ಪುರುಷರು ಹೈದರಾಬಾದ್‌ನ ಚೆರ್ಲಾಪಲ್ಲಿ ಜೈಲಿಗೆ ಮತ್ತು ಮಹಿಳೆಯರಿಗೆ ವಿಶೇಷ ಮಹಿಳಾ ಕಾರಾಗೃಹವನ್ನು ತಲುಪಬೇಕಾಗಿತ್ತು.
ಮುಂದಿನ ಎರಡು ವಾರಗಳಲ್ಲಿ, ತೀವ್ರವಾದಿಗಳು ಮತ್ತು ರಾಜಕೀಯ ಕೈದಿಗಳು ಸೇರಿದಂತೆ ಇಲ್ಲಿರುವ ಎಲ್ಲಾ 966 ಕೈದಿಗಳನ್ನು ತೆಲಂಗಾಣದಾದ್ಯಂತವಿರುವ ಇತರ ಜೈಲುಗಳಿಗೆ ಕಳುಹಿಸಲಾಗುವುದು. ಯಾಕೆಂದರೆ, 69 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ 135 ವರ್ಷಗಳಷ್ಟು ಹಳೆಯದಾದ ನಿಜಾಮ್ ಯುಗದ ಜೈಲು ಒಂದು ತಿಂಗಳೊಳಗೆ ಖಾಲಿ ಆಗಬೇಕಿದೆ. ಈ ಜೈಲನ್ನು ಒಂದು ವರ್ಷದೊಳಗೆ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು.
ಇದು ಸೂಕ್ಷ್ಮ ಕಾರ್ಯಾಚರಣೆಯಾಗಿದ್ದು, ಸುಮಾರು 1,000 ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿದೆ. ಭದ್ರತಾ ಸಮಸ್ಯೆಗಳು ಮತ್ತು ಕಾಳಜಿಗಳು ಇರುತ್ತವೆ. ಪೊಲೀಸರು ಬಹಳ ಸಹಕಾರ ನೀಡಿದ್ದಾರೆ. ಅವರು ಖೈದಿಗಳಿಗೆ ಬೆಂಗಾವಲು ವಾಹನಗಳನ್ನು ನೀಡಿದರು, ಸಶಸ್ತ್ರ ಬೆಂಗಾವಲು ಸಹ ನೀಡಲಾಯಿತು” ಎಂದು ತೆಲಂಗಾಣ ಡಿಜಿ (ಕಾರಾಗೃಹ) ರಾಜೀವ್ ತ್ರಿವೇದಿ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಕಳೆದ ತಿಂಗಳು ಭೇಟಿ ನೀಡಿದ ನಂತರ ಜೈಲನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸುವ ನಿರ್ಧಾರ ಕೈಗೊಂಡಿದ್ದರು. ಕಳೆದ ಭಾನುವಾರ ಸಚಿವ ಸಂಪುಟ ಅನುಮತಿ ನೀಡಿತು.
ಈ ಜೈಲಿನಲ್ಲಿ ಅತಿ 600ಕ್ಕಿಂತಲೂ ಹೆಚ್ಚು ಅಪರಾಧಿಗಳು ಇದ್ದರು. ಇವರನ್ನು ಇಲ್ಲಿಂದ ಸ್ಥಳಾಂತರಿಸಲು ನಾವು ನ್ಯಾಯಾಲಯದ ಅನುಮತಿ ಪಡೆಯಬೇಕು” ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ತೆಲಂಗಾಣದ ಜೈಲುಗಳು, ವಿಶೇಷವಾಗಿ ಇದು ಕೈಗಾರಿಕೆ ಮತ್ತು ಉದ್ಯಮವನ್ನು ಹೊಂದಿದ್ದು, ಕೈದಿಗಳಿಗೆ ಆರ್ಥಿಕ ಚಟುವಟಿಕೆಯನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.
“ಇಲ್ಲಿ ಸಾಕಷ್ಟು ಉದ್ಯಮಗಳಿವೆ. ಇಲ್ಲಿ ಕಾರ್ಪೆಟ್ ಮಗ್ಗಗಳು ಬಹಳ ಪ್ರಸಿದ್ಧವಾಗಿವೆ. ಕೈಗಾರಿಕಾ ಯಂತ್ರೋಪಕರಣಗಳು, ಕ್ಯಾಮೆರಾ, ಉಪಕರಣಗಳು, ಎಲೆಕ್ಟ್ರಾನಿಕ್ಸ್ ಇವೆಲ್ಲವೂ ಇವೆ, ನಾವು ಬೇರೆಡೆ ಅದನ್ನು ಸುರಕ್ಷಿತವಾಗಿರಿಸುತ್ತಿದ್ದೇವೆ” ಎಂದು ತ್ರಿವೇದಿ ಹೇಳಿದರು.
“ಅತ್ಯಾಧುನಿಕ ಜೈಲು” ಯನ್ನು ನಿರ್ಮಿಸುವ ಯೋಜನೆಗೆ ಶೀಘ್ರದಲ್ಲೇ ಪರ್ಯಾಯ ಭೂಮಿಯನ್ನು ನೀಡಲಾಗುವುದು ಎಂದು ಡಿಜಿ ಆಶಿಸಿದ್ದಾರೆ. ಮುಖ್ಯಮಂತ್ರಿಗಳು ಮಾನವೀಯ ವರ್ತನೆಯನ್ನು ಬಯಸುತ್ತಾರೆ ಮತ್ತು ಸೌಲಭ್ಯವು ಆಧುನಿಕವಾಗಿರಬೇಕು. ಶಿಕ್ಷೆಗಿಂತ ಹೆಚ್ಚಾಗಿ,ಅದು ಸುಧಾರಣೆ, ತರಬೇತಿಗೆ ಒತ್ತು ನೀಡಬೇಕು ”ಎಂದು ತ್ರಿವೇದಿ ಹೇಳಿದರು.
ತೆಲಂಗಾಣದ ಕೊವಿಡ್ ಸೌಲಭ್ಯವಾಗಿ ಹೊರಹೊಮ್ಮಿರುವ ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯನ್ನು 2003 ರಲ್ಲಿ ತನ್ನ ಹೊಸ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಯಿತು. ಅದಕ್ಕಾಗಿ ಇದು 88 ವರ್ಷದ ಮುಶೀರಾಬಾದ್ ಜೈಲು ಕೆಡವಲಾಗಿತ್ತು. 135 ವರ್ಷಗಳಷ್ಟು ಹಳೆಯದಾದ ನಿಜಾಮಿ ಜೈಲು ಇನ್ನು ಮುಂದೆ ಹೊಸ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗಲಿದ್ದು ಹೈದರಾಬಾದ್‌ನ ಆರೋಗ್ಯ ಮೂಲಸೌಕರ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತರ ತೆಲಂಗಾಣ ಜಿಲ್ಲೆಗಳ ಜನರ ಅಗತ್ಯಗಳನ್ನು ಪೂರೈಸಲಿದೆ.
ಇದನ್ನೂ ಓದಿ: ₹ 43,000 ಕೋಟಿ ವೆಚ್ಚದಲ್ಲಿ ಆರು ಹೈಟೆಕ್ ಜಲಾಂತರ್ಗಾಮಿಗಳ ನಿರ್ಮಾಣ: ಬೃಹತ್ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ
Published On - 8:15 pm, Fri, 4 June 21