ಅಹಮದಾಬಾದ್: ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಾ? ಹಾಗಾದರೆ ನೀವು ಓದಲೇಬೇಕಾದ ಸುದ್ದಿಯೊಂದು ಇಲ್ಲಿದೆ. ನೀವೇನಾದರೂ ನೋಟಿಸ್ ಅವಧಿ ಮುಗಿಸದೇ ಕೆಲಸ ಬಿಟ್ಟರೆ ಶೇ. 18 ಜಿಎಸ್‌ಟಿ ಅವಧಿಯ ಮುನ್ನ ಕೆಲಸ ತೊರೆಯುವ ಯೋಚನೆ ಹೊಂದಿದ್ದರೆ ಅದನ್ನು ತ್ಯಜಿಸುವುದೊಳಿತು.
ಖಾಸಗಿ ಕಂಪನಿ ಉದ್ಯೋಗಿಗಳು ಕೆಲಸ ಬಿಡುವಾಗ ನೋಟಿಸ್ ಅವಧಿಯಲ್ಲಿ ಕೆಲಸ ಮಾಡದಿದ್ದರೆ ಶೇ. 18 ರಷ್ಟು ಜಿಎಸ್‌ಟಿ ಪಾವತಿಸಬೇಕು ಎಂದು ಗುಜರಾತ್ನ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಆದೇಶಿಸಿದೆ. ಗುಜರಾತ್ನ ಖಾಸಗಿ ರಫ್ತು ಕಂಪನಿಯೊಂದರ ಉದ್ಯೋಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.
ಖಾಸಗಿ ಉದ್ಯೋಗಿಗಳು ಕೆಲಸ ತೊರೆಯುವಾಗ ನೋಟಿಸ್ ಅವಧಿಯ ಮೂರು ತಿಂಗಳು ಕೆಲಸ ಮಾಡಬೇಕು. ನೋಟಿಸ್ ಅವಧಿಯಲ್ಲಿ ಕೆಲಸ ನಿರ್ವಹಿಸದಿದ್ದರೆ ಸಂಬಳದ ಶೇ. 18 ರಷ್ಟು ಜಿಎಸ್‌ಟಿ ಪಾವತಿಸಬೇಕು ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಆದೇಶಿಸಿದೆ. ಕೆಲಸಕ್ಕೆ ಸೇರುವಾಗ ನಡೆದಿರುವ ಒಪ್ಪಂದದಂತೆ ಮೂರು ತಿಂಗಳ ನೋಟಿಸ್ ಅವಧಿ ಪೂರೈಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Published On - 12:06 pm, Fri, 15 January 21