AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಪ್ಸ್ಟೀನ್ ಲಿಂಕ್ ಆರೋಪದ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಹರ್ದೀಪ್ ಸಿಂಗ್ ಪುರಿ ಪುತ್ರಿ

ತನ್ನ ವಿರುದ್ಧ ಮಾಡಲಾಗಿರುವ ಎಪ್ಸ್ಟೀನ್ ಲಿಂಕ್ ಆರೋಪದಿಂದಾಗಿ ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಮಗಳು ಹಿಮಾಯನಿ ಪುರಿ ದೆಹಲಿ ಹೈಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪ್ರತಿವಾದಿಗಳಿಂದ 10 ಕೋಟಿ ರೂ. ಪರಿಹಾರ ಕೋರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಶಿಕ್ಷೆಗೊಳಗಾದ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ತಮ್ಮನ್ನು ಲಿಂಕ್ ಮಾಡುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ವಿರುದ್ಧ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಎಪ್ಸ್ಟೀನ್ ಲಿಂಕ್ ಆರೋಪದ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಹರ್ದೀಪ್ ಸಿಂಗ್ ಪುರಿ ಪುತ್ರಿ
Hardeep Singh Puri
ಸುಷ್ಮಾ ಚಕ್ರೆ
|

Updated on: Mar 16, 2026 | 5:25 PM

Share

ನವದೆಹಲಿ, ಮಾರ್ಚ್ 16: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರ ಪುತ್ರಿ ಹಿಮಾಯನಿ ಪುರಿ ಹಲವಾರು ವ್ಯಕ್ತಿಗಳು ಮತ್ತು ಆನ್‌ಲೈನ್ ಪ್ಲಾಟ್​ಫಾರ್ಮ್​ಗಳ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ವ್ಯಕ್ತಿಗಳು ಮತ್ತು ಪ್ಲಾಟ್​ಫಾರ್ಮ್​ಗಳು ತಮ್ಮ ಬಗ್ಗೆ ಮಾನಹಾನಿಕರ ವಿಷಯವನ್ನು ಹರಡುತ್ತಿದ್ದು, ಕ್ರಿಮಿನಲ್ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಕಲ್ಪಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿ ದೆಹಲು ಹೈಕೋರ್ಟ್​ನಲ್ಲಿ 10 ಕೋಟಿ ರೂ.ಗಳ ಸಿವಿಲ್ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ಎಎನ್‌ಐ ವರದಿ ಪ್ರಕಾರ, ಹಿಮಾಯನಿ ಪುರಿ ತಮ್ಮ ಅರ್ಜಿಯಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ಬಗ್ಗೆ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ತಮ್ಮ ಮತ್ತು ಎಪ್ಸ್ಟೀನ್ ನಡುವಿನ ಸಂಬಂಧವನ್ನು ತಪ್ಪು ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ. ಈ ವಿಷಯವು ತಮ್ಮ ಖ್ಯಾತಿ ಮತ್ತು ವೈಯಕ್ತಿಕ ವಿಶ್ವಾಸಾರ್ಹತೆಗೆ ಗಂಭೀರ ಹಾನಿಯನ್ನುಂಟುಮಾಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಪ್​ಸ್ಟೀನ್​ ಫೈಲ್ಸ್​ ಎಂದರೇನು? ಟ್ರಂಪ್ ಹೆಸರಿರುವುದು ನಿಜವೇ? ಎಲಾನ್ ಮಸ್ಕ್ ಆರೋಪವೇನು?

ಹಿಮಾಯನಿ ಪುರಿ ಅವರು ಜೆಫ್ರಿ ಎಪ್ಸ್ಟೀನ್ ಜೊತೆ ನೇರ ಅಥವಾ ಪರೋಕ್ಷ ವ್ಯವಹಾರ, ಹಣಕಾಸು, ವೈಯಕ್ತಿಕ ಅಥವಾ ನೆಟ್‌ವರ್ಕ್ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಸೂಚಿಸುವ ಆಧಾರರಹಿತ ಆರೋಪಗಳನ್ನು ಪ್ರತಿವಾದಿಗಳು ಸೃಷ್ಟಿಸಿದ್ದಾರೆ ಮತ್ತು ಪ್ರಸಾರ ಮಾಡಿದ್ದಾರೆ. ಅವರು ಎಪ್ಸ್ಟೀನ್ ಅಥವಾ ಅವರ ಸಹಚರರಿಂದ ಹಣಕಾಸಿನ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಲೆಹ್ಮನ್ ಬ್ರದರ್ಸ್‌ನ ಪತನಕ್ಕೆ ರಾಬರ್ಟ್ ಮಿಲ್ಲಾರ್ಡ್ ಪುರಿಯವರೊಂದಿಗೆ ಕೆಲಸ ಮಾಡಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಪ್ರಕಟಿಸಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಈ ಆರೋಪಗಳು “ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತವಾದುದು” ಎಂದು ಹಿಮಾಯನಿ ಪುರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎಕ್ಸ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಲಿಂಕ್ಡ್‌ಇನ್ ಸೇರಿದಂತೆ ಹಲವಾರು ಪ್ಲಾಟ್​​ಫಾರ್ಮ್​ಗಳು, ಬ್ಲಾಗ್‌ಗಳು ಮತ್ತು ಡಿಜಿಟಲ್ ಸುದ್ದಿ ಪೋರ್ಟಲ್‌ಗಳಲ್ಲಿ ಈ ವಿಷಯವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇವು ವರದಿಗಳು, ಪೋಸ್ಟ್‌ಗಳು, ವೀಡಿಯೊಗಳು, ಕಿರುಚಿತ್ರಗಳು, ಥಂಬ್‌ನೇಲ್‌ಗಳು ಮತ್ತು ಹೆಡ್​​ಲೈನ್​ಗಳ ಮೂಲಕ ಸುಳ್ಳು ನಿಸುದ್ದಿಗಳನ್ನು ಹರಡಿದೆ ಮತ್ತು ತಮ್ಮ ಖ್ಯಾತಿಗೆ ಹಾನಿ ಮಾಡಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಜೆಫ್ರಿ ಎಪ್ಸ್ಟೀನ್‌ ದಾಖಲೆ; ಪಟ್ಟಿಯಲ್ಲಿದೆ ಪ್ರಮುಖರ ಹೆಸರು, ಏನಿದು ಪ್ರಕರಣ?

ಹೀಗಾಗಿ, ವಿವಾದಿತ ವಿಷಯವನ್ನು ಡಿಲೀಟ್ ಮಾಡಲು ನ್ಯಾಯಾಲಯದ ಆದೇಶ, ಮುಂದಿನ ದಿನಗಳಲ್ಲಿ ಅಂತಹ ವಿಷಯವನ್ನು ಪ್ರಕಟಿಸದಂತೆ ಶಾಶ್ವತ ತಡೆಯಾಜ್ಞೆ, 10 ಕೋಟಿ ರೂ. ಪರಿಹಾರ ಮತ್ತು ಪ್ರತಿವಾದಿಗಳಿಂದ ಬೇಷರತ್ತಾದ ಕ್ಷಮೆಯಾಚನೆಯನ್ನು ಹಿಮಾಯನಿ ಪುರಿ ಕೋರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ