ದೆಹಲಿ: ಮುಂದಿನ ಆಗಸ್ಟ್ ತಿಂಗಳಿಂದ ಡಿಸೆಂಬರ್ ತಿಂಗಳ ನಡುವೆ 200 ಕೋಟಿ ಡೋಸ್ಗೂ ಹೆಚ್ಚು ಕೊವಿಡ್ ಲಸಿಕೆ ಭಾರತದಲ್ಲಿ ಲಭ್ಯವಾಗಲಿವೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ದೇಶದಲ್ಲಿ ನಡೆಯುತ್ತಿರುವ ಕೊವಿಡ್ ವಿರುದ್ಧದ ಹೋರಾಟದಲ್ಲಿ ಈ ಲಸಿಕೆಗಳು ಬಹುಮುಖ್ಯ ಪಾತ್ರ ವಹಿಸಲಿವೆ ಎಂದು ಹೇಳಲಾಗಿದೆ.
ಈ ಲಸಿಕೆಗಳ ಪೈಕಿ ಸೇರಮ್ ಇನ್ಸ್ಟಿಟ್ಯೂಟ್ನ 75 ಕೋಟಿ ಡೋಸ್ ಆಸ್ಟ್ರೋಜೆನೆಕಾ, ಭಾರತ್ ಬಯೋಟೆಕ್ನ 55 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಇರಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ. ಒಟ್ಟು 216 ಕೋಟಿ ಡೋಸ್ ಲಸಿಕೆಗಳನ್ನು ಮುಂದಿನ ಅಗಸ್ಟ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಉತ್ಪಾದನೆಯಾಗಲಿವೆ. ಇದು ದೇಶದ ಜನರನ್ನು ಕೊವಿಡ್ನಿಂದ ರಕ್ಷಿಸಲು ಸಹಕಾರಿಯಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ 300 ಕೋಟಿ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ ಎಂದು ಸಹ ಅವರು ತಿಳಿಸಿದ್ದಾರೆ.
ಮುಂದಿನ ಈ ಅವಧಿಗಳಲ್ಲಿ ಉತ್ಪಾದನೆ ಆಗಲಿರುವ ಲಸಿಕೆಗಳ ಪೈಕಿ ಬಯಾಲಾಜಿಕಲ್ ಇ ಸಂಸ್ಥೆಯ 30 ಕೋಟಿ ಲಸಿಕೆ, ಸೇರಮ್ ಇನ್ಸ್ಟಿಟ್ಯೂಟ್ನ 20 ಕೋಟಿ ನೊವಾವಾಕ್ಸ್ ಲಸಿಕೆ, 16 ಕೋಟಿ ಡೋಸ್ ಸ್ಪುಟ್ನಿಕ್ ವಿ ಲಸಿಕೆ, ಭಾರತ್ ಬಯೋಟೆಕ್ನ 10 ಕೋಟಿ ಡೋಸ್ ನಸಲ್ ಲಸಿಕೆ, ಝೈಡಸ್ ಕ್ಯಾಡಿಲ್ಲಾದ 5 ಕೋಟಿ ಡೋಸ್ ಲಸಿಕೆ, ಜಿನ್ನೋವಾದ 6 ಕೋಟಿ ಡೋಸ್ ಲಸಿಕೆಯೂ ಇರಲಿದೆ.
ಅಮೆರಿಕಾ ಒಪ್ಪಿಗೆ ನೀಡಿದ ಯಾವುದೇ ಲಸಿಕೆಯನ್ನು ಭಾರತದಲ್ಲೂ ಬಳಕೆ ಮಾಡಬಹುದು. ಲಸಿಕೆ ಆಮದಿಗೆ ಸರ್ಕಾರ ಯಾವುದೇ ಸುಂಕ ವಿಧಿಸುತ್ತಿಲ್ಲ. ಒಂದೆರಡು ದಿನಗಳಲ್ಲಿಯೇ ಪರವಾನಗಿಯನ್ನೂ ನೀಡಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಮತ್ತು ಲಸಿಕೆ ಬಳಕೆ ಬಗ್ಗೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖಾಂಶಗಳು
Karnataka SSLC Exam 2021: ಜೂ.21ರಿಂದ ಪ್ರಾರಂಭವಾಗಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿಕೆ
(200 Crore Covid 19 shots to be available by end of 2021 says Union govt)
Published On - 9:15 pm, Thu, 13 May 21