ಕೊವಿಡ್​ ಸೋಂಕಿನಿಂದ ಪುಪ್ಪುಸ ಉಳಿಸಲು ಡಿಆರ್​ಡಿಓ ಹೊಸ ಔಷಧಿ ಆವಿಷ್ಕಾರ: ತುರ್ತು ಬಳಕೆಗೆ ಬಿಡುಗಡೆ

|

Updated on: May 08, 2021 | 5:32 PM

ಏಪ್ರಿಲ್ 2020 ರಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ, ಐಎನ್‌ಎಂಎಎಸ್-ಡಿಆರ್‌ಡಿಒ ವಿಜ್ಞಾನಿಗಳು ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ ಸೆಂಟರ್ (ಸಿಸಿಎಂಬಿ) ಸಹಾಯದಿಂದ 2-ಡಿಜಿಯ ಪ್ರಯೋಗಗಳನ್ನು ತಮ್ಮ ಪ್ರಯೋಗಾಲದಲ್ಲಿ ನಡೆಸಿದ್ದರು

ಕೊವಿಡ್​ ಸೋಂಕಿನಿಂದ ಪುಪ್ಪುಸ ಉಳಿಸಲು ಡಿಆರ್​ಡಿಓ ಹೊಸ ಔಷಧಿ ಆವಿಷ್ಕಾರ: ತುರ್ತು ಬಳಕೆಗೆ ಬಿಡುಗಡೆ
ಕೊವಿಡ್​ ಸೋಂಕಿನಿಂದ ಪುಪ್ಪುಸ ಉಳಿಸಲು ಡಿಆರ್​ಡಿಓ ಹೊಸ ಔಷಧಿ ಆವಿಷ್ಕಾರ: ತುರ್ತು ಬಳಕೆಗೆ ಬಿಡುಗಡೆ
Follow us on

ಕಳೆದ ವರ್ಷ ಕೊವಿಡ್ ಮೊದಲ ಅಲೆ ಬಂದಾಗ ಹೈಡ್ರಾಕ್ಸಿಕ್ಲೊರೋಕ್ವಿನ್ ಅಮೇಲೆ ರೆಮ್ಡಿಸಿವರ್ ಔಷಧಿ ನೀಡಿ ರೋಗಿಗಳ ಪುಪ್ಪುಸಕ್ಕೆ ಇಳಿದ ಕೊವಿಡ್ ವೈರಸನ್ನು ಮಣಿಸಲು ವಿಶ್ವದ ಅನೇಕ ದೇಶಗಳ ವಿಜ್ಞಾನಿಗಳು ಹರಸಾಹಸ ಪಟ್ಟಿದ್ದರು. ಈಗ, ಭಾರತದ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಇನ್ನೊಂದು ಔಷಧವನ್ನು ಕಂಡು ಹಿಡಿದಿದ್ದಾರೆ. ಈ ಔಷಧ, ಕೊವಿಡ್​ನ ಸೋಂಕು ಜಾಸ್ತಿ ಆಗಿ ಪುಪ್ಪುಸಕ್ಕೆ ಇಳಿದಾಗ ಉಂಟಾಗುವ ಆಮ್ಲಜನಕದ ಕೊರತೆಯಿಂದ ಉಸಿರಾಟದ ತೊಂದರೆ ಆಗಿ ಜನ ತೀವ್ರ ಸಂಕಷ್ಟಕ್ಕೆ ಈಡಾಗಿದ್ದರು. ಪೌಡರ್ ರೂಪದಲ್ಲಿ ಬರುವ ಈ ಔಷಧವನ್ನು ತೆಗೆದುಕೊಂಡರೆ, ವೈರಸ್​ನ ಸೋಂಕು ತೀವ್ರತರದಲ್ಲಿ ಕಡಿಮೆ ಆಗಿರುವುದನ್ನು ಕಂಡುಕೊಂಡ ನಂತರ ಈಗ ಕೊವಿಡ್ ಸೋಂಕಿತರಿಗೆ ಅನುಕೂಲ ಆಗಲಿ ಎಂದು ಬಿಡುಗಡೆ ಮಾಡಲಾಗುತ್ತಿದೆ. 2020ರಲ್ಲಿ ಅಭಿವೃದ್ಧಿ ಪಡಿಸಿದ್ದ ಈ ಔಷಧವನ್ನು ಎರಡನೇ ಹಂತದ ಪ್ರಯೋಗದ ನಂತರ ಹೊರ ಜಗತ್ತಿಗೆ ಎಂದು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಇಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಿದೆ.

ಹೆಸರು ಮತ್ತು ಇನ್ನಿತರೆ ಮಾಹಿತಿ ಏನು?
ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಸಹಾಯಕ ಔಷಧ ಎಂದು ಕರೆಯುತ್ತಾರೆ. ಅಂದರೆ ಇದೇ ಪ್ರಧಾನ ಔಷಧಿ ಅಲ್ಲ. ಉಳಿದ ಔಷಧಿ ಜೊತೆಗೆ ಇದನ್ನು ಕೊಟ್ಟಾಗ ಸೋಂಕಿನ ತೀವ್ರತೆ ಕಡಿಮೆ ಆಗುತ್ತ ಬರುತ್ತದೆ. ಪ್ರಾಥಮಿಕ ಚಿಕಿತ್ಸೆಗೆ ಸಹಾಯ ಮಾಡುವುದು ಇದರ ಉದ್ದೇಶ. ತೀವ್ರವಾದ ಕೋವಿಡ್ -19 ಪ್ರಕರಣಗಳಲ್ಲಿ ಸಹಾಯಕ ಚಿಕಿತ್ಸೆಯಾಗಿ ಬಳಸಲು ಕೊಟ್ಟ ಔಷಧಿಯ ಹೆಸರು 2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ). “ಗ್ಲೂಕೋಸ್‌ನ ಜೆನೆರಿಕ್ ಅಣು ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿಸಬಹುದು” ಎಂದು ಡಿಆರ್‌ಡಿಒ ಹೇಳಿಕೆಯಲ್ಲಿ ತಿಳಿಸಿದೆ.

“ಔಷಧಿಯನ್ನು ಡಿಆರ್‌ಡಿಒ ಲ್ಯಾಬ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ ಅವರು ಡಾ. ರೆಡ್ಡಿ ಅವರ ಪ್ರಯೋಗಾಲಯಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ರೋಗಿಗಳ ಮೇಲಿನ ಪ್ರಯೋಗದಲ್ಲಿ, ಈ ಅಣುವು ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.”

ಹಾಗೆ ನೋಡಿದರೆ ರೆಮ್ಡಿಸಿವರ್ ಕೊಟ್ಟು ಈಗ ಆ ಪ್ರಯೋಗ ಮಾಡುತ್ತಿದ್ದರು. ಆದರೆ ರೆಮ್ಡಿಸಿವರ್ ಬಳಕೆಯಿಂದ ಯಾವ ಪ್ರಯೋಜನ ಇಲ್ಲ ಎಂಬುದನ್ನು ವೈದ್ಯರು ಕಂಡುಕೊಂಡ ಹಿನ್ನೆಲೆಯಲ್ಲಿ ಈ ಔಷಧಿ ಮುಖ್ಯ ಎನ್ನಿಸುತ್ತದೆ.

ಡಿಆರ್‌ಡಿಒ ಪ್ರಕಟಣೆಯ ಪ್ರಕಾರ, 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ರೋಗ ಲಕ್ಷಣದ ಆಧಾರದ ಮೇಲೆ ನೀಡುವ ಚಿಕಿತ್ಸೆಯಲ್ಲಿ (symptomatic treatment) ಕಡಿಮೆ ಎಂದರೂ 2.5 ದಿನ ಬೇಗ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ. ಔಷಧವು ಪುಡಿ ರೂಪದಲ್ಲಿ ಸ್ಯಾಚೆಟ್‌ಗಳಲ್ಲಿ ಬರುತ್ತದೆ. ಇದನ್ನು ನೀರಿನಲ್ಲಿ ಕರಗಿಸಿ ಮೌಖಿಕವಾಗಿ ತೆಗೆದುಕೊಳ್ಳಲಾಗುತ್ತದೆ. ಇದನ್ನು ತೆಗೆದುಕೊಂಡಾಗ, ಇದರ ಪ್ರಭಾವ ವೈರಸ್ ಸೋಂಕಿತ ಜೀವಕೋಶವನ್ನು ತಲುಪುತ್ತದೆ. “ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ” ಎಂದು ಡಿಆರ್‌ಡಿಒ ಹೇಳಿದೆ.

ಯಾವಾಗ ಅಭಿವೃದ್ಧಿ ಮಾಡಿದ್ದರು?
ಏಪ್ರಿಲ್ 2020 ರಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ, ಐಎನ್‌ಎಂಎಎಸ್-ಡಿಆರ್‌ಡಿಒ ವಿಜ್ಞಾನಿಗಳು ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಮಾಲಿಕ್ಯುಲಾರ್ ಬಯಾಲಜಿ ಸೆಂಟರ್ (ಸಿಸಿಎಂಬಿ) ಸಹಾಯದಿಂದ 2-ಡಿಜಿಯ ಪ್ರಯೋಗಗಳನ್ನು ತಮ್ಮ ಪ್ರಯೋಗಾಲಯದಲ್ಲಿ ನಡೆಸಿದ್ದರು. ಆಮೇಲೆ, ಡಿಸಿಜಿಐ ಮೇ 2020 ರಲ್ಲಿ ಕೋವಿಡ್ -19 ರೋಗಿಗಳಲ್ಲಿ 2-ಡಿಜಿಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಿತ್ತು.

2020 ರ ಮೇ ನಿಂದ ಅಕ್ಟೋಬರ್ ವರೆಗೆ ನಡೆಸಿದ 2ನೇ ಹಂತದ ಪ್ರಯೋಗಗಳಲ್ಲಿ (ಡೋಸ್-ರೇಂಜಿಂಗ್ ಸೇರಿದಂತೆ), ಔಷಧವು ಸುರಕ್ಷಿತವೆಂದು ಕಂಡುಬಂದಿದೆ ಮತ್ತು ರೋಗಿಗಳ ಚೇತರಿಕೆಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದ ಹಿನ್ನೆಲೆಯಲ್ಲಿ, ಈಗ ಕೊವಿಡ್ ಸೋಂಕಿತರಿಗೆ ನೀಡಲು ತುರ್ತು ಅನುಮತಿ ನೀಡಲಾಗಿದೆ ಎಂದು ಪ್ರಕಟಣೆ ಹೇಳಿದೆ.

” II-A ಹಂತದಲ್ಲಿ 6 ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೀಡಲಾಯಿತು ಮತ್ತು II-B ಹಂತದಲ್ಲಿ ಎಷ್ಟು ಡೋಸ್ ಕೊಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ದೇಶದಾದ್ಯಂತ 11 ಆಸ್ಪತ್ರೆಗಳಲ್ಲಿ ಈ ಪ್ರಯೋಗವನ್ನು ನಡೆಸಲಾಯಿತು. 110 ರೋಗಿಗಳ ಮೇಲೆ ಹಂತ II ಪ್ರಯೋಗವನ್ನು ನಡೆಸಲಾಯಿತು” ಎಂದು ಡಿಆರ್‌ಡಿಒ ತಿಳಿಸಿದೆ.

ಇದನ್ನೂ ಓದಿ:

ಕೆಲವು ನೋವು ನಿವಾರಕ ಔಷಧಿಗಳು ಕೊವಿಡ್ ರೋಗ ಮತ್ತಷ್ಟು ಉಲ್ಬಣವಾಗುವಂತೆ ಮಾಡುತ್ತವೆ, ಎನ್‌ಎಸ್‌ಎಐಡಿ ಬಳಸಬೇಡಿ: ಐಸಿಎಂಆರ್ ಸಲಹೆ

ರೆಮ್​ಡೆಸಿವರ್​​ಗೆ ಪರ್ಯಾಯ ದೇಸಿ ಆಯುಧ್​ ಅಡ್ವಾನ್ಸ್​! ಔಷಧಿ ಪಡೆದ ವಾರದೊಳಗೆ ಸೋಂಕಿತರು ಗುಣಮುಖ ಎಂದ ಅಧ್ಯಯನ

(2DG medicine developed by DRDO lab approved for Covid-19 patients released to market by Dr Reddy lab)

Published On - 5:25 pm, Sat, 8 May 21