ಶೋಪಿಯಾನಾ: ದಕ್ಷಿಣಕಾಶ್ಮೀರದ ಶೋಪಿಯಾನಾ ಜಿಲ್ಲೆಯ ಕಣಿಗಾಂವ್ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಹಾಗೇ, ಇತ್ತೀಚೆಗಷ್ಟೆ ಉಗ್ರ ಸಂಘಟನೆ ಸೇರಿದ್ದವನೊಬ್ಬ ಭದ್ರತಾ ಪಡೆಯೆದುರು ಶರಣಾಗಿದ್ದಾನೆ.
ಇಂದು ಬೆಳಗ್ಗೆಯಿಂದಲೇ ಎನ್ಕೌಂಟರ್ ಶುರುವಾಗಿತ್ತು. ಎಲ್ಲರೂ ಶರಣಾಗುವಂತೆ ಭದ್ರತಾ ಪಡೆ ಹೇಳಿದರೂ ಉಗ್ರರು ಒಪ್ಪಲಿಲ್ಲ. ಹಾಗಾಗಿ ಗುಂಡೇಟು ನೀಡಿ ಕೊಲ್ಲಲಾಗಿದೆ. ಅದರಲ್ಲೊಬ್ಬ ಶರಣಾಗಿ ಬದುಕಿದ್ದಾನೆ ಎಂದು ಕಾಶ್ಮೀರಿ ಪೊಲೀಸ್ ಟ್ವೀಟ್ ಮಾಡಿದ್ದಾರೆ. ಈ ಉಗ್ರರೆಲ್ಲ ಸ್ಥಳೀಯ ಉಗ್ರಸಂಘಟನೆ ಅಲ್-ಬದ್ರ್ಗೆ ಸೇರಿದವರಾಗಿದ್ದಾರೆ. ಇವರನ್ನೆಲ್ಲ ಶರಣಾಗುವಂತೆ ಮಾಡಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಭದ್ರತಾ ಪಡೆಯೆದುರು ಶರಣಾದ ಉಗ್ರನ ಹೆಸರು ತೌಸಿಫ್ ಅಹ್ಮದ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಇದನ್ನೂ ಓದಿ: ಕೊವಿಡ್ 19 ಸೋಂಕಿಗೆ ನಲುಗಿರುವ ಭಾರತಕ್ಕೆ ಕೆನಡಾದಿಂದ ನೆರವು; ವೆಂಟಿಲೇಟರ್, ರೆಮ್ಡಿಸಿವರ್ ಚುಚ್ಚುಮದ್ದು ರವಾನೆ
3 Terrorists Killed in Encounter At Jammu And Kashmir’s Shopian District