ಕೊವಿಡ್ 19 ಸೋಂಕಿಗೆ ನಲುಗಿರುವ ಭಾರತಕ್ಕೆ ಕೆನಡಾದಿಂದ ನೆರವು; ವೆಂಟಿಲೇಟರ್, ರೆಮ್ಡಿಸಿವರ್ ಚುಚ್ಚುಮದ್ದು ರವಾನೆ
ಭಾರತದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ತೀವ್ರತೆ ಮಿತಿಮೀರಿದೆ. ದಿನಕ್ಕೆ ಸುಮಾರು 4000 ಜನರು ಕೊರೊನಾದಿಂದ ಸಾಯುತ್ತಿದ್ದಾರೆ.
ಕೊವಿಡ್ 19 ಎರಡನೇ ಅಲೆಯ ಹೊಡೆತಕ್ಕೆ ನಲುಗುತ್ತಿರುವ ಭಾರತಕ್ಕೆ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಯುಎಸ್, ಯುಕೆಗಳು ಈಗಾಗಲೇ ಆಕ್ಸಿಜನ್, ವೆಂಟಿಲೇಟರ್ಗಳನ್ನು ಕಳಿಸಿವೆ. ಇದೀಗ ಕೆನಡಾ ಕೂಡ ಭಾರತಕ್ಕೆ ತನ್ನ ಕೈಲಾದ ಸಹಾಯ ಮಾಡಲು ಮುಂದಾಗಿದ್ದು, 25,000 ಬಾಟಲು ರೆಮ್ಡಿಸಿವರ್ ಚುಚ್ಚುಮದ್ದುಗಳು ಮತ್ತು 350 ವೆಂಟಿಲೇಟರ್ಗಳನ್ನು ಕಳಿಸಿಕೊಟ್ಟಿದೆ.
ಭಾರತದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ತೀವ್ರತೆ ಮಿತಿಮೀರಿದೆ. ದಿನಕ್ಕೆ ಸುಮಾರು 4000 ಜನರು ಕೊರೊನಾದಿಂದ ಸಾಯುತ್ತಿದ್ದಾರೆ. ಆಕ್ಸಿಜನ್, ಬೆಡ್, ವೆಂಟಿಲೇಟರ್ಗಳ ಕೊರತೆ ಉಂಟಾಗಿದೆ. ಇದೀಗ ಕೆನಡಾ ಸರ್ಕಾರ ತನ್ನ ರಾಷ್ಟ್ರೀ ತುರ್ತು ಸ್ಟ್ರಾಟೆಜಿಕ್ ದಾಸ್ತಾನಿನಿಂದ ಈ ಉಪಕರಣಗಳನ್ನು ಕಳಿಸಿದೆ.
ಭಾರತದಿಂದ ಲಸಿಕೆ ನೆರವು ಪಡೆದಿರುವ ಕೆನಡಾ ಇದೀಗ ಭಾರತಕ್ಕೆ ಅಗತ್ಯ ಇರುವ ನೆರವನ್ನು ನೀಡಲು ಕೈಲಾದಷ್ಟು ಪ್ರಯತ್ನಿಸುವುದಾಗಿ ಹೇಳಿದೆ. ಕೊವಿಡ್ ವಿರುದ್ಧ ಹೋರಾಟದಲ್ಲಿ ನಾವು ಭಾರತೀಯರೊಂದಿಗೆ ಇರುತ್ತೇವೆ. ಇದು ಜಾಗತಿಕ ಸಾಂಕ್ರಾಮಿಕ ರೋಗವಾಗಿದೆ. ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವಿಶ್ವದ ಎಲ್ಲ ರಾಷ್ಟ್ರಗಳೂ ಒಂದಾಗಿ ಸೋಂಕಿನ ವಿರುದ್ಧ ಹೋರಾಡಬೇಕು ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವ ಮಾರ್ಕ್ ಗಾರ್ನಿಯೋ ಹೇಳಿದ್ದಾರೆ.
ಇದನ್ನೂ ಓದಿ: ಲಸಿಕೆಯ ಶಕ್ತಿಯಿಂದಲೇ ಪೊಲೀಸರಿಗೆ ಕೊರೊನಾ ಸೋಂಕಿನ 2ನೇ ಅಲೆ ಎದುರಿಸಲು ಸಾಧ್ಯವಾಯ್ತು: ಪ್ರವೀಣ್ ಸೂದ್
ಡಬಲ್ ಮಾಸ್ಕ್ ಧರಿಸುವುದರ ಮಹತ್ವದ ಕುರಿತು ಪೋಸ್ಟ್ ಹಂಚಿಕೊಂಡ ಮುಂಬೈ ಪೊಲೀಸರು
Canada sending ventilators, remdesivir to india in the support of covid 19 battle