ಡಬಲ್ ಮಾಸ್ಕ್ ಧರಿಸುವುದರ ಮಹತ್ವದ ಕುರಿತು ಪೋಸ್ಟ್ ಹಂಚಿಕೊಂಡ ಮುಂಬೈ ಪೊಲೀಸರು
Double Mask: ಎರಡು ಮುಖಗವಸನ್ನು ಧರಿಸುವುದರ ಮಹತ್ವಕ್ಕೆ ಒತ್ತು ನೀಡಲು ಟ್ವೀಟ್ನಲ್ಲಿ ಪರಿಣಾಮಕಾರಿಯಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕೊವಿಡ್ 19 ಎರಡನೇ ಅಲೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ವೈದ್ಯಕೀಯ ತಜ್ಞರು ಮತ್ತು ಅಧಿಕಾರಿಗಳು ಎರಡು ಮುಖಗವಸನ್ನು (ಡಬಲ್ ಮಾಸ್ಕ್) ಬಳಸುವುದು ಮತ್ತು ಅದರ ಮಹತ್ವದ ಕುರಿತಾಗಿ ಜನರಿಗೆ ಸಲಹೆ ನೀಡುತ್ತಿದ್ದಾರೆ.
ಈ ಕುರಿತಂತೆ ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವುದು ವೈರಲ್ ಆಗುತ್ತಿದೆ. ಎರಡು ಮುಖಗವಸನ್ನು ಧರಿಸುವುದರ ಮಹತ್ವಕ್ಕೆ ಒತ್ತು ನೀಡಲು ಟ್ವೀಟ್ನಲ್ಲಿ ಪರಿಣಾಮಕಾರಿಯಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
1975ರಲ್ಲಿ ಬಿಡುಗಡೆಗೊಂಡ ‘ಶೋಲೆ’ ಚಲನಚಿತ್ರದಲ್ಲಿನ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ (ಜೈ ಮತ್ತು ವೀರು) ಅವರ ಸಂಭಾಷಣೆಯೊಂದನ್ನು ಟ್ವಿಟ್ರ್ ಪೋಸ್ಟ್ನಲ್ಲಿ ಹಂಚಿಕೊಳ್ಳಲಾಗಿದೆ. ಶೋಲೆ ಚಿತ್ರದಲ್ಲಿನ ಪಾತ್ರಧಾರಿಗಳಾದ ಜೈ ಮತ್ತು ವೀರು ಅವರ ಸಂಭಾಷಣೆಯನ್ನು ಉಲ್ಲೇಖಿಸಲಾಗಿದೆ. ಚಿತ್ರದಲ್ಲಿನ ‘ಡೆನಿಮ್ ಆನ್ ಡೆನಿಮ್’ ಎಂಬ ಸಂಭಾಷಣೆಯನ್ನು ಪ್ರಸ್ತುತಕ್ಕೆ ಹೋಲಿಸಿ ಎರಡು ಮುಖಗವಸು ಧರಿಸಿ ವ್ಯಕ್ತಿಗೆ ‘ಮಾಸ್ಕ್ ಆನ್ ಮಾಸ್ಕ್’ ಎಂದು ಬರೆದು ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಜೊತೆಗೆ ‘ಕಿತ್ನೆ ಮಾಸ್ಕ್ ಸೇಫ್ ಹೈ’ ಎಂದು ಪೋಸ್ಟ್ನಲ್ಲಿ ಶೀರ್ಷಿಕೆ ನೀಡಲಾಗಿದೆ.
Kitne Mask Safe Hai? Poore 2 Sarkar!#MaskDoLe#TakingOnCorona pic.twitter.com/fZ2188PA2u
— Mumbai Police (@MumbaiPolice) May 5, 2021
ಇದನ್ನೂ ಓದಿ: ಮದುವೆಯಲ್ಲಿ ಹೂಮಾಲೆ ಬದಲಾಯಿಸಲು ಬಿದಿರಿನ ಕೋಲು ಬಳಸಿದ ದಂಪತಿ; ವೈರಲ್ ಆಯ್ತು ವಿಡಿಯೋ
ಪ್ರಾರ್ಥನೆ ಮಾಡಿದ ಬಳಿಕವೇ ಆಹಾರ ಸೇವಿಸುವ ನಾಯಿಮರಿಗಳು; ವಿಡಿಯೋ ವೈರಲ್