AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೊಬ್ಬ ಕಟ್ಟಾ ಸ್ತ್ರೀಸಮಾನತಾ ವಾದಿ ಎನ್ನುತ್ತ ಮದುವೆಯ ದಿನ ತಾಳಿ ಕಟ್ಟಿಸಿಕೊಂಡ ವರ; ಸೀರೇನೂ ಉಟ್ಟಿದ್ರೆ ಆಗ್ತಿತ್ತು ಎಂದ್ರು ನೆಟ್ಟಿಗರು

ಶಾರ್ದೂಲ್​ರ ಈ ನಿರ್ಧಾರದಿಂದ ಮನೆಯವರು, ಸಂಬಂಧಿಕರೆಲ್ಲ ಅಚ್ಚರಿಗೆ ಒಳಗಾಗುತ್ತಾರೆ. ಮಹಿಳಾ ಸಮಾನತೆಯನ್ನು ನಂಬಿಕೊಂಡು ಬಂದಿರುವ ನಾನು ಮಂಗಲಸೂತ್ರ ಧರಿಸುವವನೇ ಎಂದು ಪಟ್ಟುಹಿಡಿಯುತ್ತಾರೆ. ಯಾರು ಏನೇ ಹೇಳಿದರೂ ಕೇಳುವುದಿಲ್ಲ.

ನಾನೊಬ್ಬ ಕಟ್ಟಾ ಸ್ತ್ರೀಸಮಾನತಾ ವಾದಿ ಎನ್ನುತ್ತ ಮದುವೆಯ ದಿನ ತಾಳಿ ಕಟ್ಟಿಸಿಕೊಂಡ ವರ; ಸೀರೇನೂ ಉಟ್ಟಿದ್ರೆ ಆಗ್ತಿತ್ತು ಎಂದ್ರು ನೆಟ್ಟಿಗರು
ಪತಿಗೆ ತಾಳಿ ಕಟ್ಟುತ್ತಿರುವ ಪತ್ನಿ
Lakshmi Hegde
|

Updated on: May 06, 2021 | 12:08 PM

Share

ಮದುವೆಯಲ್ಲಿ ವಧು-ವರರಿಬ್ಬರೂ ಪರಸ್ಪರ ಹಾರ ಬದಲಿಸಿಕೊಳ್ಳುತ್ತಾರೆ ಹೊರತು ಮಂಗಲಸೂತ್ರವನ್ನು ಪರಸ್ಪರರಿಗೆ ಕಟ್ಟಿಕೊಳ್ಳುವುದಿಲ್ಲ. ಮಂಗಲಸೂತ್ರ ಅಥವಾ ತಾಳಿಯನ್ನು ವರ, ವಧುವಿಗೆ ಕಟ್ಟುವುದು ಸಂಪ್ರದಾಯ. ಆದರೆ ಈ ಜೋಡಿ ಮಂಗಲಸೂತ್ರವನ್ನೂ ಪರಸ್ಪರರು ಕಟ್ಟಿಕೊಂಡಿದ್ದಾರೆ. ಅಂದರೆ ವಧು ಮಾತ್ರವಲ್ಲ ವರನಿಗೂ ಮಂಗಲಸೂತ್ರ ಧಾರಣೆಯಾಗಿದೆ. ಇಲ್ಲಿ ವರ ವಧುವಿಗೆ ತಾಳಿ ಕಟ್ಟಿದ್ದರೆ, ವರನಿಗೆ ವಧು ತಾಳಿ ಕಟ್ಟಿದ್ದಾರೆ.

ಇದೊಂದು ವಿಭಿನ್ನ ಮದುವೆ. ಯಾಕೆ ಹುಡುಗಿಯವರು ಮಾತ್ರ ಮಂಗಲಸೂತ್ರ ಕಟ್ಟಿಕೊಳ್ಳಬೇಕು ಎಂಬುದು ವರನ ವಾದ.. ಸೀರೆನೂ ಉಟ್ಕೋಬಹುದಿತ್ತಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ.. ವ್ಯಂಗ್ಯ. ! ವರನ ಹೆಸರು ಶಾರ್ದೂಲ್​ ಕದಮ್​. ವಧು ತನುಜಾ. ನಾನ್ಯಾಕೆ ಮಂಗಲಸೂತ್ರ ಕಟ್ಟಿಸಿಕೊಂಡೆ ಎಂಬುದನ್ನು ಶಾರ್ದೂಲ್ ಕದಮ್​ ಹ್ಯೂಮನ್ ಆಫ್​ ಬಾಂಬೆ ಎಂಬ ಫೋಟೋ ಬ್ಲಾಗ್​ ಜತೆ ಹಂಚಿಕೊಂಡಿದ್ದಾರೆ. ಹಾಗೇ ಇವರ ಮದುವೆಯ ಕತೆ ಕೇಳುತ್ತಿದ್ದಂತೆ ನೆಟ್ಟಿಗರು ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ.

ತನುಜಾ ಮತ್ತು ಶಾರ್ದೂಲ್​ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರಾಗಿದ್ದರೂ ಅವರ ಲವ್​ ಸ್ಟೋರಿ ಶುರುವಾಗಿದ್ದು, ಸ್ನಾತಕೋತ್ತರ ಪದವಿ ಮುಗಿದು ನಾಲ್ಕು ವರ್ಷಗಳ ಬಳಿಕ. ತನುಜಾ ಇನ್​​ಸ್ಟಾಗ್ರಾಂನಲ್ಲಿ ಹಿಮೇಶ್​ ರಶ್ಮಿಯಾ ಅವರ ಒಂದು ಹಾಡನ್ನು ಶೇರ್​ ಮಾಡಿಕೊಂಡಿದ್ದರು. ಅದಕ್ಕೆ torture ಎಂದು ಕ್ಯಾಪ್ಷನ್ ಬರೆದಿದ್ದು. ನಾನು ಅದಕ್ಕೆ maha torture ಎಂದು ಪ್ರತಿಕ್ರಿಯೆ ನೀಡಿದ್ದೆ. ಅಲ್ಲಿಂದ ಮತ್ತೆ ನಮ್ಮಿಬ್ಬರ ನಡುವೆ ಮಾತುಕತೆ ಶುರುವಾಯಿತು ಎಂದು ಶಾರ್ದೂಲ್​ ತಿಳಿಸಿದ್ದಾರೆ. ಅಲ್ಲಿಂದ ಮಾತುಕತೆ ಶುರುವಾಗಿ ಒಮ್ಮೆ ಇಬ್ಬರೂ ಭೇಟಿಯಾಗಿದ್ದೆವು, ಹಾಗೇ ಇಬ್ಬರೂ ಟೀ ಕುಡಿಯುತ್ತ ಮಹಿಳಾವಾದದ ಬಗ್ಗೆ ಮಾತನಾಡುತ್ತಿದ್ದೆವು. ಆಗ ನಾನೊಬ್ಬ ಕಟ್ಟಾ ಸ್ತ್ರೀಸಮಾನತಾವಾದಿ ಎಂದು ಹೇಳಿದೆ. ನಾನು ಹೀಗೆ ಹೇಳುತ್ತೇನೆ ಎಂದು ಆಕೆ ನಿರೀಕ್ಷೆ ಮಾಡಿರಲಿಲ್ಲ ಎಂಬುದು ಅವಳ ನೋಟದಲ್ಲೇ ಗೊತ್ತಾಗುತ್ತಿತ್ತು ಎಂದು ಶಾರ್ದೂಲ್​ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ಒಂದು ವರ್ಷ ಡೇಟಿಂಗ್ ಮಾಡಿದ ಶಾರ್ದೂಲ್​ ಮತ್ತು ತನುಜಾ ನಂತರ ಮದುವೆಯಾಗಲು ತೀರ್ಮಾನಿಸುತ್ತಾರೆ. 2020ರ ಸೆಪ್ಟೆಂಬರ್ ನಲ್ಲಿ ಮದುವೆಯ ಬಗ್ಗೆ ಮಾತುಕತೆ ಶುರು ಮಾಡುತ್ತಾರೆ. ಈ ವೇಳೆ ಶಾರ್ದೂಲ್​ ತಮ್ಮ ಇಂಗಿತವನ್ನು ವ್ಯಕ್ತಪಡಿಸುತ್ತಾರೆ. ಮದುವೆಯಲ್ಲಿ ಯಾಕೆ ಸ್ತ್ರೀ ಮಾತ್ರ ಮಂಗಲಸೂತ್ರ ಕಟ್ಟಿಸಿಕೊಳ್ಳಬೇಕು. ನಮ್ಮ ಮದುವೆಯಲ್ಲಿ ಹಾಗಾಗುವುದು ಬೇಡ. ನನಗೆ ನೀನೂ ಕೂಡ ತಾಳಿ ಕಟ್ಟಬೇಕು ಎಂದು ತನುಜಾ ಬಳಿ ಹೇಳಿಕೊಳ್ಳುತ್ತಾರೆ.

ಶಾರ್ದೂಲ್​ರ ಈ ನಿರ್ಧಾರದಿಂದ ಮನೆಯವರು, ಸಂಬಂಧಿಕರೆಲ್ಲ ಅಚ್ಚರಿಗೆ ಒಳಗಾಗುತ್ತಾರೆ. ಮಹಿಳಾ ಸಮಾನತೆಯನ್ನು ನಂಬಿಕೊಂಡು ಬಂದಿರುವ ನಾನು ಮಂಗಲಸೂತ್ರ ಧರಿಸುವವನೇ ಎಂದು ಪಟ್ಟುಹಿಡಿಯುತ್ತಾರೆ. ಯಾರು ಏನೇ ಹೇಳಿದರೂ ಕೇಳುವುದಿಲ್ಲ. ಅಷ್ಟೇ ಅಲ್ಲ, ಕೆಲವು ಸಂಪ್ರದಾಯದ ಪ್ರಕಾರ ವಧುವಿನ ಮನೆಯವರೇ ಮದುವೆಯ ಎಲ್ಲ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಆದರೆ ಶಾರ್ದೂಲ್​ ಅದರಲ್ಲೂ ದೊಡ್ಡತನ ತೋರುತ್ತಾರೆ. ತನುಜಾ ಮನೆಗೆ ಹೋಗಿ, ವಿವಾಹದ ಎಲ್ಲ ಖರ್ಚನ್ನೂ ವಿಭಜಿಸಿಕೊಳ್ಳೋಣ ಎಂದು ಹೇಳುತ್ತಾರೆ.

ಇನ್ನು ಮದುವೆ ಮುನ್ನಾದಿನ ಕೂಡ ತನುಜಾ ಮತ್ತೆ ಕೇಳುತ್ತಾರೆ. ನೀವು ನಿಜಕ್ಕೂ ಮಂಗಲಸೂತ್ರ ಧರಿಸುತ್ತೀರಾ ಎಂದು. ಆಗಲೂ ಶಾರ್ದೂಲ್​ ತಮ್ಮ ನಿರ್ಧಾರಕ್ಕೆ ಬದ್ಧರಾಗಿಯೇ ಇರುತ್ತಾರೆ. ಕೊನೆಗೂ ಮದುವೆಯಲ್ಲಿ ಇಬ್ಬರೂ ಮಂಗಲಸೂತ್ರವನ್ನು ಧರಿಸಿಕೊಳ್ಳುತ್ತಾರೆ.

ಇವರ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಂತೂ ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ. ಸೀರೆ ಉಟ್ಟೇ ಕುಳಿದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ. ಆದರೆ ಅದ್ಯಾವುದಕ್ಕೂ ಈ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಇವತ್ತಿಗೂ ಟ್ರೋಲ್ ಆಗುತ್ತಿದ್ದೇವೆ. ಅದೇನೂ ಸಮಸ್ಯೆಯಿಲ್ಲ. ನನಗೆ ಹೆಣ್ಣುಮಕ್ಕಳ ಮನಸು ಅರ್ಥವಾಗುತ್ತದೆ. ಅವರ ಭಾವನೆಯನ್ನು ನಾನು ಗೌರವಿಸುತ್ತೇನೆ ಎಂದು ಶಾರ್ದೂಲ್ ಹೇಳಿದ್ದಾರೆ. ಇವರ ಮದುವೆಯಾಗಿ ನಾಲ್ಕು ತಿಂಗಳಾಗಿದ್ದು, ಅಂದು ತನುಜಾ ಕೈಯ್ಯಲಿ ಕಟ್ಟಿಸಿಕೊಂಡ ತಾಳಿಯನ್ನು ಇಂದಿಗೂ ಶಾರ್ದೂಲ್ ತೆಗೆದಿಲ್ಲ.

Shardul And Tanuja 1

ಶಾರ್ದೂಲ್ ಮತ್ತು ತನುಜಾ

ಇದನ್ನೂ ಓದಿ: ಡಿಸಿಎಂ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಆಪರೇಷನ್ ಆಕ್ಸಿಜನ್; ತಪ್ಪಿದ ಭಾರೀ ಅನಾಹುತ, ಉಳಿಯಿತು 200 ಸೋಂಕಿತರ ಜೀವ

ಒಂದು ಬೈಕ್​, ಆರು ಜನ, ಸಕುಟುಂಬ ಸಮೇತರಾಗಿ ಮದುವೆಗೆ ಪಯಣ; ಚಾಲಕನಿಗೆ ನಡು ರಸ್ತೆಯಲ್ಲೇ ಕೈ ಮುಗಿದ ಪೊಲೀಸರು

couple trolled in social media after exchange Mangalasutra in their wedding