Coronavirus India Update: ಭಾರತದಲ್ಲಿ 4.12 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3980 ಮಂದಿ ಸಾವು

Covid 19 India: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ 4,12,262 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ  3,29,113 ಚೇತರಿಸಿದ್ದು , 3,980 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35,66,398  ಆಗಿದೆ . 16,25,13,339 ಮಂದಿ ಕೊವಿಡ್ ಲಸಿಕೆ  ಪಡೆದಿದ್ದಾರೆ.

Coronavirus India Update: ಭಾರತದಲ್ಲಿ 4.12 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3980 ಮಂದಿ ಸಾವು
ದೆಹಲಿಯಿ ಕೊವಿಡ್ ಆಸ್ಪತ್ರೆ
Follow us
ರಶ್ಮಿ ಕಲ್ಲಕಟ್ಟ
|

Updated on:May 06, 2021 | 10:53 AM

ದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 4,12,262 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದ್ದು 3,980 ಮಂದಿ ಸಾವಿಗೀಡಾಗಿದ್ದಾರೆ. ಏಪ್ರಿಲ್ 30ರಂದು ದೇಶದಲ್ಲಿ 4ಲಕ್ಷ ಕೊವಿಡ್ ಪ್ರಕರಣ ಪತ್ತೆಯಾಗಿತ್ತು. ಇದೀಗ ದೇಶದಲ್ಲಿ 2.0 6 ಕೋಟಿಗಿಂತಲೂ ಹೆಚ್ಚು ಕೊವಿಡ್ ಪ್ರಕರಣಗಳಿದ್ದು, 35.66 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ 50,000 ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಕೇರಳದಲ್ಲಿ 42,000ಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿ ಆಗಿವೆ. ಮಹಾರಾಷ್ಟ್ರದಲ್ಲಿ 57,000 ಕ್ಕಿಂತಲೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ 4,12,262 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ  3,29,113 ಚೇತರಿಸಿದ್ದು , 3,980 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35,66,398  ಆಗಿದೆ . 16,25,13,339 ಮಂದಿ ಕೊವಿಡ್ ಲಸಿಕೆ  ಪಡೆದಿದ್ದಾರೆ.

ಒಡಿಶಾದಲ್ಲಿ  10,521  ಹೊಸ ಕೊವಿಡ್ ಪ್ರಕರಣಗಳು  ವರದಿ ಆಗಿದ್ದು 6,176 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ  ಪ್ರಕರಣಗಳ ಸಂಖ್ಯೆ 81,585 ಆಗಿದೆ.

ಆರೋಗ್ಯ  ಸಚಿವಾಲಯದ ಅಂಕಿ ಅಂಶಗಳ ಪ್ರಕಾರ  ಕೇರಳದಲ್ಲಿ 376004 ಕೊವಿಡ್ ಪ್ರಕರಣಗಳಿದ್ದು  5565 ಮಂದಿ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ  ಕೊರೊನಾ ಸೋಂಕಿತರ ಸಂಖ್ಯೆ 128311, ಸಾವಿಗೀಡಾದವರ ಸಂಖ್ಯೆ 14779 ಆಗಿದೆ.  ತೆಲಂಗಾಣದಲ್ಲಿರುವ ಕೊವಿಡ್ ರೋಗಿಗಳ ಸಂಖ್ಯೆ  77127 ಆಗಿದ್ದು ಈವರೆಗೆ 2579 ಮಂದಿ ಮೃತಪಟ್ಟಿದ್ದಾರೆ. 170588 ಮಂದಿ ಕೊರೊನಾ  ರೋಗಿಗಳಿದ್ದು 8374 ಮಂದಿ ಸಾವಿಗೀಡಾಗಿದ್ದಾರೆ.

ಕೊವಿಡ್ 3ನೇ ಅಲೆ ತಡೆ ಅಸಾಧ್ಯ

ಕೊವಿಡ್-19 ಮೂರನೇ ಅಲೆ ತಡೆಯಲು ಸಾಧ್ಯವಿಲ್ಲ. ಆ ಹಂತದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸುವ ವೇಗವೂ ಹೆಚ್ಚು. ಆದರೆ ಯಾವ ಸಮಯದಲ್ಲಿ ಈ ಅಲೆ ಕಾಣಿಸುತ್ತದೆ ಎಂದು ಹೇಳಲಾಗುವುದಿಲ್ಲ. ಕೊವಿಡ್ ಲಸಿಕೆಗಳು ಈಗ ಇರುವ ಕೊರೊನಾವೈರಸ್ ಪ್ರಭೇದಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿವೆ. ಹೊಸ ಪ್ರಭೇದವು ಭಾರತ ಸೇರಿದಂತೆ ಜಗತ್ತಿನಾದ್ಯಂತ ಕಾಣಿಸಿಕೊಳ್ಳಲಿದೆ. ಆದರೆ ಪ್ರಸರಣ ಅಧಿಕವಾಗಿರುತ್ತದೆ. ಮುಂಬರುವ ದಿನಗಳಲ್ಲಿ ರೋಗನಿರೋಧಕ ತಪ್ಪಿಸುವ ರೂಪಾಂತರಿಗಳು ಮತ್ತು ರೋಗದ ತೀವ್ರತೆಯನ್ನು ಕಡಿಮೆ ಅಥವಾ ಹೆಚ್ಚಿಸಬಹುದು ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್, ಪ್ರಕರಣಗಳು ಹೆಚ್ಚಾಗದಂತೆ ತಡೆಯಲು ಲಾಕ್​ಡೌನ್ ಮಾತ್ರ ಪರಿಹಾರವೇ ಎಂದು ಕೇಳಿದಾಗ, ಅಗತ್ಯವಿದ್ದರೆ ಆ ಆಯ್ಕೆಗಳನ್ನು ಚರ್ಚಿಸಲಾಗುತ್ತದೆ. ಪ್ರಸರಣ ಸರಪಳಿಯನ್ನು ನಿಗ್ರಹಿಸಲು ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳಿಗೆ ಈಗಾಗಲೇ ಮಾರ್ಗಸೂಚಿ ಇದೆ ಎಂದಿದ್ದಾರೆ.  ಅದೇ  ವೇಳೆ ಕೊವಿಡ್ ಪ್ರಾಣಿಗಳ ಮೂಲಕ ಹರಡುತ್ತಿಲ್ಲ, ಇದು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂದು ಪೌಲ್ ಹೇಳಿದ್ದಾರೆ.

ಹೊಸ ರೂಪಾಂತರಿ  ವೈರಸ್  ಎದುರಿಸಲು ಕೊವಿಡ್  ಲಸಿಕೆಗಳ ನಿಯಮಿತ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದಿದ್ದಾರೆ ವಿಜಯ್  ರಾಘವನ್.  ಏತನ್ಮಧ್ಯೆ, ಕೊರೊನಾವೈರಸ್ ಪ್ರಕರಣಗಳಲ್ಲಿ ಪ್ರತಿ ದಿನ  ಶೇಕಡಾ 2.4 ರಷ್ಟು ಏರಿಕೆ ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಕೊವಿಡ್-19 ಪಿಡುಗಿನ ಎರಡನೇ ಅಲೆ ಕೊನೆಗೊಂಡ ನಂತರ ಮೂರನೇ ಅಲೆ ಎದುರಿಸಲು ಸಿದ್ಧರಾಗಿರಬೇಕು: ಡಾ ವಿವೇಕ್ ಜವಳಿ

(Coronavirus India reported 412262 new cases and 3980 deaths in the last 24 hours)

Published On - 10:31 am, Thu, 6 May 21