ಕೊವಿಡ್-19 ಪಿಡುಗಿನ ಎರಡನೇ ಅಲೆ ಕೊನೆಗೊಂಡ ನಂತರ ಮೂರನೇ ಅಲೆ ಎದುರಿಸಲು ಸಿದ್ಧರಾಗಿರಬೇಕು: ಡಾ ವಿವೇಕ್ ಜವಳಿ

ಸುಮಾರು 4 ತಿಂಗಳ ಕಾಲ (120 ದಿನ) ಕಾಡಲಿರುವ ಎರಡನೇ ಅಲೆಯು ಮೊದಲ ಅಲೆಗಿಂತ ವೇಗವಾಗಿ ತನ್ನ ಕದಂಬ ಬಾಹುಗಳನ್ನು ಚಾಚಿದೆ. ಕೊರೊನಾ ರೂಪಾಂತರಿ ವೈರಸ್​ ಭಾರತದಲ್ಲಿ ಮೊದಲು ಪ್ರವೇಶವಾಗಿದ್ದು ಮುಂಬೈ ಮಹಾನಗರಿಯಲ್ಲಿ ಎಂದು ಹೇಳಿರುವ ಡಾ ಜವಳಿ ಮುಂದಿನ 20-25 ದಿನಗಳಲ್ಲಿ ಇದರ ತೀವ್ರತೆ ಇಳಿಮುಖಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಬಹುದು ಎನ್ನುತ್ತಾರೆ.

ಕೊವಿಡ್-19 ಪಿಡುಗಿನ ಎರಡನೇ ಅಲೆ ಕೊನೆಗೊಂಡ ನಂತರ ಮೂರನೇ ಅಲೆ ಎದುರಿಸಲು ಸಿದ್ಧರಾಗಿರಬೇಕು: ಡಾ ವಿವೇಕ್ ಜವಳಿ
ಡಾ ವಿವೇಕ್ ಜವಳಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Apr 23, 2021 | 11:05 PM

ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ ವಿವೇಕ್ ಜವಳಿ ಅವರು ಮೂರನೇ ಅಲೆ ಬಗ್ಗೆ ಎಚ್ಚರಿಸಿದ್ದು ಜನರು ಎರಡನೇ ಅಲೆಯ ತೀವ್ರತೆ ಕೊನೆಗೊಂಡ ನಂತರ ಯಾವ ಕಾರಣಕ್ಕೂ ಯಾಮಾರಬಾರದೆಂದು ಹೇಳಿದ್ದಾರೆ. ಫೇಸ್​ಬುಕ್​ನಲ್ಲಿ ಅವರು ಒಂದು ಪೋಸ್ಟ್ ಮೂಲಕ ಮೂರನೇ ಅಲೆಯ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಅಲೆ ಭಾರತವನ್ನು ತಲ್ಲಣಿಸುವಂತೆ ಮಾಡಿದೆ ಎಂದು ಹೇಳಿರುವ ಅವರು, ದೇಶದ ಎಲ್ಲಾ ಮೂಲೆಗಳಲ್ಲಿ ಜನರು ಭೀತಿಗೊಳಗಾಗಿದ್ದಾರೆ ಎಂದಿದ್ದಾರೆ.

ಸುಮಾರು 4 ತಿಂಗಳ ಕಾಲ (120 ದಿನ) ಕಾಡಲಿರುವ ಎರಡನೇ ಅಲೆಯು ಮೊದಲ ಅಲೆಗಿಂತ ವೇಗವಾಗಿ ತನ್ನ ಕದಂಬ ಬಾಹುಗಳನ್ನು ಚಾಚಿದೆ. ಕೊರೊನಾ ರೂಪಾಂತರಿ ವೈರಸ್​ ಭಾರತದಲ್ಲಿ ಮೊದಲು ಪ್ರವೇಶವಾಗಿದ್ದು ಮುಂಬೈ ಮಹಾನಗರಿಯಲ್ಲಿ ಎಂದು ಹೇಳಿರುವ ಡಾ ಜವಳಿ ಮುಂದಿನ 20-25 ದಿನಗಳಲ್ಲಿ ಇದರ ತೀವ್ರತೆ ಇಳಿಮುಖಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಬಹುದು ಎನ್ನುತ್ತಾರೆ.

ಮೂರನೇ ಅಲೆ ಬಗ್ಗೆ ಪ್ರಪಂಚದ ಎಲ್ಲ ಜನರಿಗೆ ಗೊತ್ತಿದೆ ಅದು ಎರಡನೆ ಅಲೆ ತಗ್ಗಿದ ಸುಮಾರು 100 ದಿಗಳ ನಂತರ ಆರಂಭವಾಗಲಿದೆ. ಹೀಗಾಗಿ ಅದನ್ನು ಎದುರಿಸಲು ನಾವು ಸನ್ನದ್ಧರಾಗಿರಬೇಕು, ಯಾವ ಕಾರಣಕ್ಕೂ ಪೀಡೆ ತೊಲಗಿತು ಎಂಬ ನಿರಾಳ ಭಾವ ತಾಳಬಾರದೆಂದು ಡಾ ಜವಳಿ ಹೇಳುತ್ತಾರೆ. ಮೂರನೇ ಅಲೆ ವಿರುದ್ಧ ನಾವು ಜಯಿಸಬೇಕಾದರೆ, ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲ ಭಾರತೀಯರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಕೊವಿಡ್-19 ಪಿಡುಗಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ ಅವು ಅನೂಚಾನಾಗಿ ಜಾರಿಗೊಳ್ಳವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಮೂರನೆ ಅಲೆಯ ಸಂದರ್ಭದಲ್ಲಿ ಜನರು ವರ್ತನೆ ಹೇಗಿಬೇಕೆನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಜನರಿಗೆ ರವಾನೆಯಾಗಬೇಕು ಎಂದು ಡಾ ಜವಳಿ ಹೇಳಿದ್ದಾರೆ. ಎರಡನೇ ಮತ್ತು ಮೂರನೇ ಅಲೆಗಳ ನಡುವಿನ ಸಮಯವನ್ನು ಸೋಂಕನ್ನು ಎದುರಿಸುವ ತಯಾರಿಗೋಸ್ಕರ ಬಳಸಿಕೊಳ್ಳುವ ಗಂಭೀರ ಪ್ರಯತ್ನ ಮಾಡಬೇಕು ಎಂದು ಅವರು ಹೇಳುತ್ತಾರೆ.

ಕೊವಿಡ್ ವಿರುದ್ಧ ನಾವೆಲ್ಲ ಸಮರದಲ್ಲಿ ಭಾಗಿಯಾಗಿದ್ದೇವೆ, ಹಾಗಾಗಿ ಈ ಹೋರಾಟದಲ್ಲಿ ಚಿಲ್ಲರೆ ರಾಜಕಾರಣಕ್ಕೆ, ದೋಷಾರೋಪಣೆಗಳಿಗೆ ಆಸ್ಪದ ನೀಡದೆ, ಎಲ್ಲರೂ ಒಗ್ಗಟ್ಟಿನಿಂದ, ಒಂದೇ ಮನಸ್ಸಿನಿಂದ ಹೋರಾಡಿದಲ್ಲಿ ಮಾತ್ರ ಅದು ಮಾಡಬಹುದಾದ ಹಾನಿಯನ್ನು ಕಡಿಮೆ ಮಾಡಬಹುದು ಎಂದು ಡಾ ಜವಳಿ ಹೇಳಿದ್ದಾರೆ. ಹಿಂದೆ ಆಗಬೇಕಿದ್ದೆಲ್ಲ ಆಗಿ ಹೋಗಿದೆ, ಮಾಡಬೇಕಾಗಿದ್ದನ್ನು ಮಾಡಿಯಾಗಿದೆ. ಆದರೆ ಆಗ ಕಲಿತಿರುವ ಪಾಠಗಳನ್ನು ನಾವು ಯಾವತ್ತೂ ಮರೆಯಬಾರದು ಎಂದು ಹೇಳುತ್ತಾ ಡಾ ವಿವೇಕ್ ಜವಳಿ ಅವರ ಸೈನ್ ಆಫ್​ ಮಾಡಿದ್ದಾರೆ.

ಇದನ್ನೂ ಓದಿ: Karnataka Weekend Lockdown: ವೀಕೆಂಡ್​ ಲಾಕ್​ಡೌನ್- ಏನಿರುತ್ತೆ ಮತ್ತು ಏನಿರಲ್ಲ, ಯಾರೆಲ್ಲ ಆಚೆ ಬರಬಹುದು, ಆಸ್ಪತ್ರೆಗಳಿಗೆ ಹೋಗಬಹುದಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

Published On - 10:40 pm, Fri, 23 April 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ