ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್ ಕೊರೊನಾದಿಂದ ವೇದಾಂತ ಆಸ್ಪತ್ರೆಯಲ್ಲಿ ನಿಧನ

Ajit Singh Death News: ಮಾಜಿ ಕೇಂದ್ರ ಸಚಿವ ಚೌಧರಿ ಅಜಿತ್​ ಸಿಂಗ್​ ಅವರು ಕೊರೊನಾ ಸೋಂಕಿನಿಂದ ಗುರುವಾರ ನಿಧನರಾಗಿದ್ದಾರೆ.

ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್ ಕೊರೊನಾದಿಂದ ವೇದಾಂತ ಆಸ್ಪತ್ರೆಯಲ್ಲಿ ನಿಧನ
ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್

ರಾಷ್ಟ್ರೀಯ ಲೋಕಾ ದಳದ (ಆರ್​ಡಿಎಲ್​) ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಚೌಧರಿ ಅಜಿತ್​ ಸಿಂಗ್​ ಅವರು ಕೊರೊನಾ ಸೋಂಕಿನಿಂದ ಗುರುವಾರ ನಿಧನರಾಗಿದ್ದಾರೆ. 82 ವರ್ಷದ ಉತ್ತರಪ್ರದೇಶದ ಆರ್‌.ಎಲ್.ಡಿ‌ ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್ ಅವರು ಕೊವಿಡ್​ ಪಾಸಿಟಿವ್​ ವರದಿಯ ಬಳಿಕ ಗುರುಗ್ರಾಮದ ವೇದಾಂತ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು.

ಶ್ವಾಸಕೋಶದ ಸೋಂಕಿನಿಂದಾಗಿ ಅಜಿತ್​ ಸಿಂಗ್​ ಅವರ ಸ್ಥಿತಿ ಕಳೆದ ಮಂಗಳವಾರ ಹದಗೆಟ್ಟಿತ್ತು. ಇಂದು ಗುರುವಾರ ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಪುತ್ರ ಅಜಿತ್​ ಸಿಂಗ್​ ಅವರು ದೇಶಕ್ಕೆ ಹಿಂದಿರುಗುವ ಮೊದಲು ಅಮೆರಿಕಾದಲ್ಲಿ ಕಂಪ್ಯೂಟರ್​ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 15 ವರ್ಷಗಳ ಕಾಲ ಈ ಉದ್ಯಮದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಜಿತ್ ಸಿಂಗ್ ಅವರು ಬಾಗ್​ಪತ್​ನಿಂದ ಏಳು ಬಾರಿ ಸಂಸದರಾಗಿದ್ದರು. ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಡಳಿತಾಧಿಕಾರಿ ರಾಜ್‌ಕುಮಾರ್ ಸಚೆತಿ ಕೊರೊನಾ ಸೋಂಕಿಗೆ ಬಲಿ

(ajit singh death news rashtriya lok dal chief ex union minister ajit singh passed away due to covid 19)