AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮಾರಿ ಅಟ್ಟಹಾಸ: ಎನ್​ಎಸ್​ಜಿ ಕಮಾಂಡೋ ಕೋವಿಡ್​ಗೆ ಬಲಿ, ಅವರಿಗೂ ಸಿಗಲಿಲ್ಲ ವೆಂಟಿಲೇಟರ್​ ಆಂಬುಲೆನ್ಸ್​

ಕೊನೆಗೆ ಅದುಹೇಗೋ ವೆಂಟಿಲೇರ್​ ಪ್ರಾಪ್ತಿಯಾಗಿತ್ತು. ಆದರೆ ಆ ವೇಳೆಗೆ ಗೋಲ್ಡನ್​ ಅವರ್​​ ಅಂದ್ರೆ ಅಮೂಲ್ಯ ಸಮಯ ಕಳೆದಿತ್ತು. ಹೃದಯ ಸ್ತಂಭನದಿಂದಾಗಿ ಬುಧವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು. ಭಯೋತ್ಪಾದಕರನ್ನು ಸದೆಬಡಿಯುವ ಅತ್ಯುನ್ನತ ಸಶಸ್ತ್ರ ಪಡೆಯಾದ National Security Guard (NSG) ಯಲ್ಲಿ ಕೊರೊನಾಗೆ ಇದು ಮೊದಲ ಬಲಿಯಾಗಿದೆ.

ಕೊರೊನಾ ಮಾರಿ ಅಟ್ಟಹಾಸ: ಎನ್​ಎಸ್​ಜಿ ಕಮಾಂಡೋ ಕೋವಿಡ್​ಗೆ ಬಲಿ, ಅವರಿಗೂ ಸಿಗಲಿಲ್ಲ ವೆಂಟಿಲೇಟರ್​ ಆಂಬುಲೆನ್ಸ್​
ಕೊರೊನಾ ಮಾರಿ ಅಟ್ಟಹಾಸ: ಎನ್​ಎಸ್​ಜಿ ಕಮಾಂಡೋ ಕೋವಿಡ್​ಗೆ ಬಲಿ, ಅವರಿಗೂ ಸಿಗಲಿಲ್ಲ ವೆಂಟಿಲೇಟರ್​ ಆಂಬುಲೆನ್ಸ್​
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 06, 2021 | 9:57 AM

Share

ಎನ್​ಎಸ್​ಜಿ ಕಮಾಂಡೋಗಳು ಅಂದ್ರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ದೃಢವಾಗಿರುವವರು ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಈ ಕೊರೊನಾ ಮಾರಿ ಅಂತಹವರನ್ನೂ ಬಿಟ್ಟಿಲ್ಲ. ಮೊದಲ ಬಾರಿಗೆ ಎನ್​ಎಸ್​ಜಿ ಕಮಾಂಡೋ ಒಬ್ಬರು ಕೋವಿಡ್​ಗೆ ಬಲಿಯಾಗಿದ್ದಾರೆ. ಅದೇನು ದುರಾದೃಷ್ಟವೋ ಅಥವಾ ದೇಶಕ್ಕೇ ಅಂಥಾ ಗತಿ ಬಂದಿದೆಯೋ.. ಎನ್​ಎಸ್​ಜಿ ಕಮಾಂಡೋಗೂ ಸಕಾಲಕ್ಕೆ ವೆಂಟಿಲೇಟರ್​ ಆಂಬುಲೆನ್ಸ್​ ಸಿಗಲಿಲ್ಲ. ಹಾಗಾಗಿ ಅವರು ಕೊನೆಯುಸಿರೆಳೆದಿದ್ದಾರೆ.

ಗ್ರೂಪ್​ ಕಮಾಂಡರ್​ ಆಗಿದ್ದ ಬಿ ಕೆ ಝಾ (54 ವರ್ಷ) ಅವರಿಗೆ ಏಪ್ರಿಲ್​ 19ರಂದು ಕೊರೊನಾ ಸೋಂಕು ತಗುಲಿತ್ತು. ಗ್ರೇಟರ್​ ನೋಯ್ಡಾದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್​ ಪಡೆಗಳ ಆಸ್ಪತ್ರೆಯಲ್ಲಿ (CAPF Hospital) ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ ಅಲ್ಲಿ ಅವರಿಗೆ ಎರಡು ಕಾರ್ಯನಿರ್ವಹಿಸದ ವೆಂಟಿಲೇಟರ್​​ಗಳು ಸ್ವಾಗತ ಕೋರಿದ್ದವು. ಅಲ್ಲಿಂದ ಅವರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್​ ಮಾಡಲು ಜೀವರಕ್ಷಕ ಆಂಬುಲೆನ್ಸ್​ ಸಹ ಸಿಗಲಿಲ್ಲ.

ಕೊನೆಗೆ ಅದುಹೇಗೋ ವೆಂಟಿಲೇರ್​ ಪ್ರಾಪ್ತಿಯಾಗಿತ್ತು. ಆದರೆ ಆ ವೇಳೆಗೆ ಗೋಲ್ಡನ್​ ಅವರ್​​ ಅಂದ್ರೆ ಅಮೂಲ್ಯ ಸಮಯ ಕಳೆದಿತ್ತು. ಹೃದಯ ಸ್ತಂಭನದಿಂದಾಗಿ ಬುಧವಾರ ಬೆಳಗ್ಗೆ ಅವರು ಕೊನೆಯುಸಿರೆಳೆದರು. ಭಯೋತ್ಪಾದಕರನ್ನು ಸದೆಬಡಿಯುವ ಅತ್ಯುನ್ನತ ಸಶಸ್ತ್ರ ಪಡೆಯಾದ National Security Guard (NSG) ಯಲ್ಲಿ ಕೊರೊನಾಗೆ ಇದು ಮೊದಲ ಬಲಿಯಾಗಿದೆ. ಅಂದಹಾಗೆ NSG ಪಡೆಯಲ್ಲಿ ಇದುವರೆಗೂ 4,00ಕ್ಕೂ ಹೆಚ್ಚು ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 60 ಪ್ರಕರಣಗಳು ಸಕ್ರಿಯವಾಗಿವೆ.

ಬಿಹಾರ ಮೂಲದ ಬಿ ಕೆ ಝಾ ಅವರು 1993ರಲ್ಲಿ ಗಡಿ ಭದ್ರತಾ ಪಡೆಗೆ (Border Security Force -BSF) ಆಯ್ಕೆಗೊಂಡಿದ್ದರು. 2018ರಲ್ಲಿ ಡೆಪ್ಯುಟೇಶನ್​ ಮೇಲೆ NSG ಪಡೆ ಸೇರಿಕೊಂಡಿದ್ದರು. ಈ ಬಗ್ಗೆ NSG ಪಡೆ ಟ್ವೀಟ್​ ಮಾಡಿದ್ದು, ಹಿರಿಯ ಯೋಧನ ಸಾವಿಗೆ ಕಂಬನಿ ಮಿಡಿದಿದೆ.

(NSG commando BK Jha died of Covid 19 precious time lost in arranging ventilator ambulance) ಇದನ್ನೂ ಓದಿ:

ಆಮ್ಲಜನಕ ಕೊರತೆ ನೀಗಿಸಲು ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದ ಚಾಮರಾಜನಗರ ಜಿಲ್ಲಾಡಳಿತ

Published On - 9:50 am, Thu, 6 May 21

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್