ಕೊವಿಡ್ 19 2ನೇ ಅಲೆಗೆ ಸಿಲುಕಿರುವ ಭಾರತದೊಂದಿಗೆ ಒಗ್ಗಟ್ಟಿನ ಮಂತ್ರ ಪಠಿಸುತ್ತಿದೆ ಯುಎಸ್; ಸಂದೇಶ ನೀಡಲಿರುವ ಕಮಲಾ ಹ್ಯಾರಿಸ್
ಕೊವಿಡ್ 19 ಎರಡನೇ ಅಲೆ ತೀವ್ರವಾಗಿರುವ ಭಾರತಕ್ಕೆ ಸಹಾಯ ಮಾಡಲು ಸಿದ್ಧ ಎಂದು ಈಗಾಗಲೇ ಅಮೆರಿಕ ತಿಳಿಸಿದೆ. ಆಕ್ಸಿಜನ್ ಸೇರಿ ಕೆಲವು ವೈದ್ಯಕೀಯ ಉಪಕರಣಗಳನ್ನು ಅಮೆರಿಕಕ್ಕೆ ಕಳಿಸಿದೆ.
ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿರುವ ಭಾರತದೊಂದಿಗೆ ಒಗ್ಗಟ್ಟಾಗಿರಬೇಕು ಎಂಬ ಸಂದೇಶವನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಶುಕ್ರವಾರ ( ಮೇ 7)ದಂದು ನೀಡಲಿದ್ದಾರೆ. ಹಾಗೇ, ಕೊರೊನಾ ವೈರಸ್ ಸಾಂಕ್ರಾಮಿಕದ ಅಂತ್ಯಕ್ಕೆ, ಜೀವಗಳ ರಕ್ಷಣೆಗಾಗಿ ಭಾರತದೊಂದಿಗೆ ಅಮೆರಿಕ ಸದಾ ಪಾಲುದಾರನಾಗಿ ಇರುತ್ತದೆ ಎಂಬ ಮಾತನ್ನು ಅವರು ಈ ವೇಳೆ ಆಡಲಿದ್ದಾರೆ.
ಭಾರತದಲ್ಲಿ ಯುಎಸ್ನಿಂದ ಕೊವಿಡ್ ನಿಯಂತ್ರಣಾ ಕ್ರಮಗಳನ್ನು ಹೆಚ್ಚಿಸುವುದು ಎಂಬ ವಿಚಾರದ ಬಗ್ಗೆ ಆನ್ಲೈನ್ ಮೂಲಕ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಕಮಲಾ ಹ್ಯಾರಿಸ್ ಮಾತನಾಡಲಿದ್ದಾರೆ. ಈ ವೇಳೆ ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್ನ್ನು ನಿಯಂತ್ರಿಸಲು ನಮ್ಮ ಸಹಕಾರ ಸಂಪೂರ್ಣವಾಗಿ ಇರಲಿದೆ, ನಿಮ್ಮೊಂದಿಗೆ ಒಗ್ಗಟ್ಟಾಗಿ ಇರುತ್ತೇವೆ ಎಂಬ ಸಂದೇಶವನ್ನು ಅವರು ನೀಡಲಿದ್ದಾರೆ ಎಂದು ಯುಎಸ್ ರಾಜ್ಯ ಇಲಾಖೆಯ ದಕ್ಷಿಣ ಮತ್ತು ಕೇಂದ್ರ ಏಷ್ಯಾ ಬ್ಯೂರೊ ತಿಳಿಸಿದೆ. ಈ ಕಾರ್ಯಕ್ರಮ ಶುಕ್ರವಾರ ಸಂಜೆ ಹೊತ್ತಿಗೆ ನಡೆಯಲಿದೆ.
ಕೊವಿಡ್ 19 ಎರಡನೇ ಅಲೆ ತೀವ್ರವಾಗಿರುವ ಭಾರತಕ್ಕೆ ಸಹಾಯ ಮಾಡಲು ಸಿದ್ಧ ಎಂದು ಈಗಾಗಲೇ ಅಮೆರಿಕ ತಿಳಿಸಿದೆ. ಆಕ್ಸಿಜನ್ ಸೇರಿ ಕೆಲವು ವೈದ್ಯಕೀಯ ಉಪಕರಣಗಳನ್ನು ಅಮೆರಿಕಕ್ಕೆ ಕಳಿಸಿದೆ. ಕೊವಿಡ್ ಮೊದಲ ಅಲೆಯಲ್ಲಿ ಭಾರತ ಅಮೆರಿಕಕ್ಕೆ ಸಹಾಯ ಮಾಡಿತ್ತು. ಜೀವರಕ್ಷಕ ರೆಮ್ಡೆಸಿವಿರ್ನ್ನು ಕಳಿಸಿತ್ತು. ಅದನ್ನು ನೆನಪಿಸಿಕೊಂಡ ಜೋ ಬೈಡನ್ ಅವರೂ ಕೂಡ ತಾವು ಭಾರತದ ಪರ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಹೆಚ್ಚಾದ ಕೊರೊನಾ ಸೋಂಕಿತರು; ಎರಡನೇ ಅಲೆಯಲ್ಲಿ ಸೋಂಕಿತರ ಹೆಚ್ಚಳಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ