ಮೊಮ್ಮಕ್ಕಳಿಗಾಗಿ ವಡಾ ಪಾವ್ ತರಲು ಹೋದಾಗ ಬೈಕ್​​ನಲ್ಲಿದ್ದ 4.95 ಲಕ್ಷ ರೂ. ಮೌಲ್ಯದ ಚಿನ್ನದ ಬ್ಯಾಗ್ ಎಗರಿಸಿದ ಕಳ್ಳ

|

Updated on: Aug 31, 2024 | 1:00 PM

ವೃದ್ಧ ದಂಪತಿಗಳು ಬ್ಯಾಂಕ್‌ನಿಂದ ಮನೆಗೆ ಹೋಗುತ್ತಿದ್ದಾಗ ಮೊಮ್ಮಕ್ಕಳಿಗಾಗಿ ಶೆವಲೆವಾಡಿಯ ಅಂಗಡಿಯಿಂದ ವಡಾ ಪಾವ್ ತೆಗೆದುಕೊಂಡು ಹೋಗಲು ಬೈಕ್​​​ ನಿಲ್ಲಿಸಿದ್ದಾರೆ. ಈ ವೇಳೆ ಕಳ್ಳನೊಬ್ಬ ಬಂದ ಬೈಕ್​​ನಲ್ಲಿದ್ದ ₹4.95 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ. ಈ ಬಗ್ಗೆ ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ಮೊಮ್ಮಕ್ಕಳಿಗಾಗಿ ವಡಾ ಪಾವ್ ತರಲು ಹೋದಾಗ ಬೈಕ್​​ನಲ್ಲಿದ್ದ 4.95 ಲಕ್ಷ ರೂ. ಮೌಲ್ಯದ ಚಿನ್ನದ ಬ್ಯಾಗ್ ಎಗರಿಸಿದ ಕಳ್ಳ
ವಿಡಿಯೋ ಇಲ್ಲಿದೆ
Follow us on

ಪುಣೆ, ಆ.31: ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವೃದ್ಧ ದಂಪತಿಗಳು ಬ್ಯಾಂಕ್‌ನಿಂದ ಮನೆಗೆ ಹೋಗುತ್ತಿದ್ದಾಗ ಮೊಮ್ಮಕ್ಕಳಿಗಾಗಿ ಶೆವಲೆವಾಡಿಯ ಅಂಗಡಿಯಿಂದ ವಡಾ ಪಾವ್ ತೆಗೆದುಕೊಂಡು ಹೋಗಲು ಬೈಕ್​​​ ನಿಲ್ಲಿಸಿದ್ದಾರೆ. ಈ ವೇಳೆ ಕಳ್ಳನೊಬ್ಬ ಬಂದ ಬೈಕ್​​ನಲ್ಲಿದ್ದ ₹4.95 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇದೀಗ ಈ ಬಗ್ಗೆ ಸಿಸಿಟಿವಿಯಲ್ಲಿ ವಿಡಿಯೋವೊಂದು ಸೆರೆಯಾಗಿದೆ.

ಇನ್ನು ಮಾಹಿತಿಗಳ ಪ್ರಕಾರ, ದಷ್ಟ್ರಥ್ ಬಾಬೌಲಾಲ್ ಧಾಮ್ನೆ ಮತ್ತು ಅವರ ಪತ್ನಿ ಜಯಶ್ರೀ ಅವರು ಉರುಳಿ ಕಾಂಚನ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬ್ಯಾಂಕ್​​ನಲ್ಲಿ ಚಿನ್ನವನ್ನು ಅಡವಿಟ್ಟು ₹ 8 ಸಾಲ ಪಡೆದಿದ್ದರು. ಅಡವಿಟ್ಟ ಚಿನ್ನವನ್ನು ಬಿಡಿಸಲು ಬ್ಯಾಂಕ್‌ಗೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದಾರೆ. ಬ್ಯಾಂಕ್​​ನ ಕೆಲಸ ಮುಗಿಸಿ ಬರಬೇಕಾದರೆ ಮಧ್ಯಾಹ್ನ 3:45ಕ್ಕೆ ಪುಣೆ-ಸೋಲಾಪುರ ರಸ್ತೆಯ ಶೆವಲೆವಾಡಿಯ ವಡಾ ಪಾವ್ ಅಂಗಡಿಯಲ್ಲಿ ನಿಲ್ಲಿಸಿದರು. ದಷ್ಟ್ರಥ್ ಬಾಬೌಲಾಲ್ ಧಾಮ್ನೆ ಅವರು ವಡಾ ಪಾವ್ ತೆಗೆದುಕೊಳ್ಳಲು ಹೋದಾಗ ಜಯಶ್ರೀ ವಾಹನದ ಬಳಿಯೇ ನಿಂತಿದ್ದರು.

ಇದನ್ನೂ ಓದಿ: ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದ ಕ್ಯಾಬ್​​​​ ಡ್ರೈವರ್​ನನ್ನು ಎತ್ತಿ ನೆಲಕ್ಕೆ ಎಸೆದ ಮಾಲೀಕ

ವಿಡಿಯೋ ಇಲ್ಲಿದೆ ನೋಡಿ:

ಆಭರಣಗಳು, ಬ್ಯಾಂಕ್ ದಾಖಲೆಗಳು ಮತ್ತು ಮೊಬೈಲ್ ಫೋನ್ ಒಳಗೊಂಡ ಬಟ್ಟೆ ಚೀಲವನ್ನು ಬೈಕ್​​ನ ಹ್ಯಾಂಡಲ್ ಬಳಿ ಇಟ್ಟಿದ್ದರು. ಜಯಶ್ರೀ ಅವರ ಗಮನ ಬೇರೆರ ಕಡೆ ಹೋಗುತ್ತಿದ್ದಂತೆ, ಕಳ್ಳ ವಾಹನದ ಬಳಿ ಬಂದು ಬ್ಯಾಗ್ ಹಿಡಿದುಕೊಂಡು ಓಡಿ ಹೋಗಿದ್ದಾನೆ. ಜಯಶ್ರೀ ಅವರು ಬೊಬ್ಬೆ ಹೊಡೆಯುತ್ತ ಕಳ್ಳನ ಹಿಂದೆ ಓಡಿದ್ದಾರೆ. ಆ ಬ್ಯಾಗ್​ನಲ್ಲಿ ಚಿನ್ನದ ಬಳೆಗಳು, ಚಿನ್ನದ ಉಂಗುರ, ಮಂಗಳಸೂತ್ರ ಇತ್ಯಾದಿಗಳು ಇತ್ತು ಎಂದು ಹೇಳಲಾಗಿದೆ. ಇನ್ನು ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 173 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ