ಕೇವಲ 9 ತಿಂಗಳಲ್ಲಿ 42 ಅವಳಿಗಳು; ದಾಖಲೆ ಬರೆದ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆ

ಕಳೆದ 9 ತಿಂಗಳಲ್ಲಿ ಬೀಡ್ ಸರ್ಕಾರಿ ಆಸ್ಪತ್ರೆಯಲ್ಲಿ 42 ಜೋಡಿ ಅವಳಿ ಮಕ್ಕಳು ಜನಿಸಿವೆ. ವೈದ್ಯರ ಪ್ರಕಾರ, ಇನ್-ವಿಟ್ರೊ ಫಲೀಕರಣ IVF ಸೇರಿದಂತೆ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಮತ್ತು ಕುಟುಂಬದ ಇತಿಹಾಸದಂತಹ ಅಂಶಗಳು ಅವಳಿ ಜನನಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿವೆ. ಸಿಸೇರಿಯನ್ ಮತ್ತು ನೈಸರ್ಗಿಕವಾಗಿ ಹೆರಿಗೆ ಮಾಡಿಸಿ 42 ಜೋಡಿ ಅವಳಿ ಮಕ್ಕಳ ಡೆಲಿವರಿ ಮಾಡಲಾಗಿದೆ. 

ಕೇವಲ 9 ತಿಂಗಳಲ್ಲಿ 42 ಅವಳಿಗಳು; ದಾಖಲೆ ಬರೆದ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆ
Twins

Updated on: Oct 05, 2025 | 4:24 PM

ಬೀಡ್, ಅಕ್ಟೋಬರ್ 5: ಒಂದು ಕಾಲದಲ್ಲಿ ಬಹಳ ಅಪರೂಪವೆಂದು ಪರಿಗಣಿಸಲಾಗಿದ್ದ ಅವಳಿ ಮಕ್ಕಳು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವೆಂಬಂತಾಗಿದೆ. ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿಗಳ ಜನನವು ದಾಖಲೆ ನಿರ್ಮಿಸಿದೆ. ಕಳೆದ 9 ತಿಂಗಳಲ್ಲಿ ಬೀಡ್ ಸರ್ಕಾರಿ ಆಸ್ಪತ್ರೆಯಲ್ಲಿ 42 ಜೋಡಿ ಅವಳಿ ಮಕ್ಕಳು ಜನಿಸಿವೆ.

ಸಿಸೇರಿಯನ್ ಮತ್ತು ನೈಸರ್ಗಿಕವಾಗಿ ಹೆರಿಗೆ ಮಾಡಿಸಿ 42 ಜೋಡಿ ಅವಳಿ ಮಕ್ಕಳ ಡೆಲಿವರಿ ಮಾಡಲಾಗಿದೆ. ವೈದ್ಯರ ಪ್ರಕಾರ, ಇನ್-ವಿಟ್ರೊ ಫಲೀಕರಣ IVF ಸೇರಿದಂತೆ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಮತ್ತು ಕುಟುಂಬದ ಇತಿಹಾಸದಂತಹ ಅಂಶಗಳು ಅವಳಿ ಜನನಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿವೆ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಅವಳಿ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆ ಸ್ವಲ್ಪ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು; 4 ಜನ ನಾಪತ್ತೆ

ಬೀಡ್ ಸಿವಿಲ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ (RMO) ಡಾ. ಎಲ್.ಆರ್. ಟಂಡೇಲ್ ಈ ಬಗ್ಗೆ ಮಾಹಿತಿ ನೀಡಿದ್ದು, “ಕಳೆದ ಕೆಲವು ವರ್ಷಗಳಲ್ಲಿ ಅವಳಿ ಮತ್ತು ತ್ರಿವಳಿ ಜನನಗಳ ಪ್ರಮಾಣ ಖಂಡಿತವಾಗಿಯೂ ಹೆಚ್ಚಾಗಿದೆ. ಕಳೆದ 9 ತಿಂಗಳುಗಳಲ್ಲಿಯೇ ಇಲ್ಲಿ 42 ಸೆಟ್ ಅವಳಿ ಮಕ್ಕಳು ಜನಿಸಿದ್ದಾರೆ. ನಮ್ಮ ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU) ಶಿಶುಗಳಿಗೆ ಬೇಕಾದ ಎಲ್ಲ ಸೌಲಭ್ಯ ಪೂರೈಸಲು ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us