ದೆಹಲಿ: ಪಿಎಂ-ಕೇರ್ಸ್ ಫಂಡ್ನಡಿ ದೇಶಾದ್ಯಂತ ಸುಮಾರು 45,946 ವೆಂಟಿಲೇಟರ್ಗಳನ್ನು ವಿತರಿಸಲಾಗಿದೆ. ಕೊವಿಡ್ 19 ಉಲ್ಬಣಗೊಂಡಿರುವ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಅನಿವಾರ್ಯತೆಯೂ ಉಂಟಾಗಿದೆ. ಅದರ ಒಂದು ಭಾಗವಾಗಿ ದೇಶಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ಕೊವಿಡ್ 19 ಎರಡನೇ ಅಲೆ ವಿರುದ್ಧ ಧೈರ್ಯದಿಂದ ಹೋರಾಡುತ್ತಿದೆ. ಇವೆಲ್ ಭಾರತದಲ್ಲಿಯೇ ತಯಾರಾದ ವೆಂಟಿಲೇಟರ್ಗಳಾಗಿವೆ. ಸುಮಾರು 2000 ಕೋಟಿ ರೂಪಾಯಿ ವೆಚ್ಚದಲ್ಲಿ ಪಿಎಂ ಕೇರ್ಸ್ ಇದನ್ನು ಖರೀದಿಸಿ, ಅಗತ್ಯ ಇರುವ ಕಡೆಗೆ ಹಂಚಿದೆ ಎಂದೂ ಬಿಜೆಪಿ ಮಾಹಿತಿ ನೀಡಿದೆ. ಒಟ್ಟು 45,946 ವೆಂಟಿಲೇಟರ್ಗಳ ಪೈಕಿ ಅತ್ಯಂತ ಹೆಚ್ಚು ಅಂದರೆ 5555 ವೆಂಟಿಲೇಟರ್ಗಳನ್ನು, ಕೊರೊನಾ ಸೋಂಕಿನ ತೀವ್ರತೆ ಅತ್ಯಂತ ಹೆಚ್ಚಾಗಿರುವ ಮಹಾರಾಷ್ಟ್ರಕ್ಕೆ ವಿತರಿಸಲಾಗಿದೆ. ಹಾಗೇ ರಾಷ್ಟ್ರ ರಾಜಧಾನಿ ದೆಹಲಿಗೆ ಅತ್ಯಂತ ಕಡಿಮೆ ಸಂಖ್ಯೆ ಅಂದರೆ ಕೇವಲ 763 ವೆಂಟಿಲೇಟರ್ ನೀಡಿದ್ದಾಗಿ ಕೇಂದ್ರಸರ್ಕಾರ ಮಾಹಿತಿ ನೀಡಿದೆ.
ಇನ್ನುಳಿದಂತೆ ಪಂಜಾಬ್ಗೆ 810, ಉತ್ತರಪ್ರದೇಶಕ್ಕೆ 5316, ಪಶ್ಚಿಮ ಬಂಗಾಳಕ್ಕೆ 1245, ತಮಿಳುನಾಡಿಗೆ 1450 ಮತ್ತು 3569 ವೆಂಟಿಲೇಟರ್ಗಳನ್ನು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಕಳಿಸಲಾಗಿದೆ. ಹಾಗೇ, ಇನ್ನೂ ಜೂನ್ ಅಂತ್ಯದೊಳಗೆ 14,000ವೆಂಟಿಲೇಟರ್ಗಳನ್ನು ವಿತರಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.
India battling against COVID 2nd wave bravely under PM Modi.
Nearly 50,000 ventilators have been distributed pan-India under PM-CARES fund. #IndiaFightsCorona pic.twitter.com/3M2r564xky
— BJP (@BJP4India) May 17, 2021
ಇದನ್ನೂ ಓದಿ:ಮಳೆಗಾಲ ಆರಂಭಕ್ಕೂ ಮುನ್ನ ಅಪಾಯಕಾರಿ ಸ್ಥಳಗಳ ಗುರುತಿಸುವ ಪ್ರಕ್ರಿಯೆ ನಡೆದಿದೆ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್
Oxygen Shortage: ಮುತ್ತನಲ್ಲೂರು ಕೆರೆಯಲ್ಲಿ ನೂರಾರು ಮೀನುಗಳ ಸಾವು, ಮಾಲಿನ್ಯವೇ ಇದಕ್ಕೆ ಕಾರಣವೆಂದ ಸ್ಥಳೀಯರು