AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಆಯೋಗದ ಸದಸ್ಯರ ಆಯ್ಕೆಗೆ ಸ್ವತಂತ್ರ ಕೊಲಿಜಿಯಂ ನೇಮಿಸುವಂತೆ ಸುಪ್ರೀಂಕೋರ್ಟ್​ಗೆ ಮೊರೆ

ಸಂವಿಧಾನದ ಮೂಲ ಸ್ವರೂಪವೇ ಪ್ರಜಾಪ್ರಭುತ್ವ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದಕ್ಕಾಗಿ ತನ್ಮೂಲಕ ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡುವುದಕ್ಕಾಗಿ ಇಂತಹ ಸ್ವತಂತ್ರ ಚುನಾವಣಾ ಆಯೋಗದ ಜರೂರತ್ತು ಬಹಳಷ್ಟಿದೆ. ಅದನ್ನು ರಾಜಕೀಯ ಮತ್ತು ಕಾರ್ಯಾಂಗದಿಂದ ಬೇರ್ಪಡಿಸಬೇಕಿದೆ ಎಂದು ADR ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

ಚುನಾವಣಾ ಆಯೋಗದ ಸದಸ್ಯರ ಆಯ್ಕೆಗೆ ಸ್ವತಂತ್ರ ಕೊಲಿಜಿಯಂ ನೇಮಿಸುವಂತೆ ಸುಪ್ರೀಂಕೋರ್ಟ್​ಗೆ ಮೊರೆ
ಚುನಾವಣಾ ಆಯೋಗದ ಸದಸ್ಯರ ಆಯ್ಕೆಗೆ ಸ್ವತಂತ್ರ ಕೊಲಿಜಿಯಂ ನೇಮಿಸುವಂತೆ ಸುಪ್ರೀಂಕೋರ್ಟ್​ಗೆ ಮೊರೆ
ಸಾಧು ಶ್ರೀನಾಥ್​
| Updated By: Skanda|

Updated on: May 18, 2021 | 9:57 AM

Share

ನವದೆಹಲಿ: ಭಾರತದಲ್ಲಿ ಚುನಾವಣಾ ಆಯೋಗವನ್ನು ರಾಜಕೀಯ ಮತ್ತು ಕಾರ್ಯಾಂಗದಿಂದ ಮುಕ್ತಗೊಳಿಸಿ, ಸ್ವತಂತ್ರ ಸಂಸ್ಥೆಯನ್ನಾಗಿಸುವ ಮಾತು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಚುನಾವಣಾ ಆಯೋಗದ ಸದಸ್ಯರ ನೇಮಕಕ್ಕೆ ಸ್ವತಂತ್ರ ಆಯ್ಕೆ ಮಂಡಳಿಯನ್ನು ನೇಮಿಸುವಂತೆ ಕೋರಿ ಅಸೋಸಿಯಷನ್​ ಫಾರ್​ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms -ADR)​ ಸುಪ್ರೀಂಕೋರ್ಟ್​ನಲ್ಲಿ ಇದೀಗ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್​ ಖ್ಯಾತ ವಕೀಲ ಪ್ರಶಾಂತ್​ ಭೂಷಣ್​ ಅವರ ಮೂಲಕ ಈ ಅರ್ಜಿ ಸಲ್ಲಿಸಿದೆ.

ADR ಸಲ್ಲಿಸಿರುವ ಈ ಮನವಿಯಲ್ಲಿ ಪ್ರಸ್ತುತ ಚುನಾವಣಾ ಆಯೋಗದ ಸದ್ಯಸರ ನೇಮಕಾತಿ ಕಾರ್ಯವನ್ನು ಕಾರ್ಯಾಂಗವೇ ನಿಭಾಯಿಸುತ್ತಿದೆ. ಸಂವಿಧಾನದ Article 324(2) ಅನುಸಾರ ಕಾರ್ಯಾಂಗ ಇದನ್ನು ನೆರವೇರಿಸುತ್ತಿದೆ. ಆದರೆ ಜನರಿಗೆ ಇದನ್ನು ಪ್ರಶ್ನಿಸುವುದು ಅಸಾಧ್ಯವಾಗಿದೆ. ಹಾಗಾಗಿ ಚುನಾವಣಾ ಆಯೋಗಕ್ಕೆ ಸದಸ್ಯರನ್ನು ನೇಮಿಸುವ ಪ್ರಕ್ರಿಯೆಯನ್ನು ಸ್ವತಂತ್ರ ಆಯ್ಕೆ ಮಂಡಳಿಗೆ ಒಪ್ಪಿಸಬೇಕು ಎಂದು ವಾದ ಮಂಡಿಸಿದೆ. ವಾಸ್ತವವಾಗಿ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದೆ. ಆದರೆ ಕಾರ್ಯಾಂಗವೇ ತನಗೆ ಇಷ್ಟವಾದವರನ್ನು ತನ್ನ ಮರ್ಜಿಯಲ್ಲಿ ನೇಮಿಸುವುದರಿಂದ ಅದು ಮತ್ತೊಂದು ಕಾರ್ಯಾಂಗ ಸಂಸ್ಥೆಯಾಗಿ ಕಾರ್ಯನಿರ್ವವಿಹಿಸುತ್ತಿದೆ ಅಷ್ಟೇ. ಹಾಗಾಗಿ ಇದನ್ನು ಬದಲಾಯಿಸುವ ಅಗತ್ಯವಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಂವಿಧಾನದ ಮೂಲ ಸ್ವರೂಪವೇ ಪ್ರಜಾಪ್ರಭುತ್ವ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದಕ್ಕಾಗಿ ತನ್ಮೂಲಕ ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡುವುದಕ್ಕಾಗಿ ಇಂತಹ ಸ್ವತಂತ್ರ ಚುನಾವಣಾ ಆಯೋಗದ ಜರೂರತ್ತು ಬಹಳಷ್ಟಿದೆ. ಅದನ್ನು ರಾಜಕೀಯ ಮತ್ತು ಕಾರ್ಯಾಂಗದಿಂದ ಬೇರ್ಪಡಿಸಬೇಕಿದೆ ಎಂದು ADR ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

(ADR Moves Supreme Court though Advocate Prashant Bhushan Seeking Independent Collegium For Appointment Of Election Commission Members)