Covid Cases In India: ಕಳೆದ 24 ಗಂಟೆಗಳಲ್ಲಿ 4,329 ಮಂದಿ ಸಾವು, 2.63 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ
Coronavirus Cases: ಕಳೆದೆರಡು ದಿನಗಳಿಂದ ದೇಶದಲ್ಲಿ ಹೊಸ ಕೊವಿಡ್ ಪ್ರಕರಣಗಳು3 ಲಕ್ಷಕ್ಕಿಂತ ಕಡಿಮೆ ಆಗಿದೆ. ದೇಶದಲ್ಲೀಗ ಒಟ್ಟು ಕೊವಿಡ್ ರೋಗಿಗಳ ಸಂಖ್ಯೆ 2.5ಕೋಟಿ ಆಗಿದೆ. ಇಲ್ಲಿಯವರೆಗೆ 2.78 ಲಕ್ಷ ರೋಗಿಗಳು ಮೃತಪಟ್ಟಿದ್ದಾರೆ.
ದೆಹಲಿ: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 2.63 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 4,329 ಮಂದಿ ಸಾವಿಗೀಡಾಗಿದ್ದಾರೆ. ಕಳೆದೆರಡು ದಿನಗಳಿಂದ ದೇಶದಲ್ಲಿ ಹೊಸ ಕೊವಿಡ್ ಪ್ರಕರಣಗಳು 3 ಲಕ್ಷಕ್ಕಿಂತ ಕಡಿಮೆ ಆಗಿದೆ. ದೇಶದಲ್ಲೀಗ ಒಟ್ಟು ಕೊವಿಡ್ ರೋಗಿಗಳ ಸಂಖ್ಯೆ 2.5ಕೋಟಿ ಆಗಿದೆ. ಇಲ್ಲಿಯವರೆಗೆ 2.78 ಲಕ್ಷ ರೋಗಿಗಳು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇ 14.09 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 33 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 4,22,436 ಮಂದಿ ಚೇತರಿಸಿಕೊಂಡಿದ್ದಾರೆ.
ಕಳೆದ ಹದಿನೈದು ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳು ಶೇಕಡಾ 52 ರಷ್ಟು ಕುಸಿದು 1.49 ಲಕ್ಷಕ್ಕೆ ಇಳಿದಿವೆ. ರಾಜ್ಯವು ಸೋಮವಾರ 9,391 ಹೊಸ ಪ್ರಕರಣಗಳು ಮತ್ತು 285 ಸಾವುಗಳನ್ನು ವರದಿ ಮಾಡಿದೆ .
India reports 2,63,533 new #COVID19 cases, 4,22,436 discharges and 4,329 deaths in the last 24 hours, as per Union Health Ministry
Total cases: 2,52,28,996 Total discharges: 2,15,96,512 Death toll: 2,78,719 Active cases: 33,53,765
Total vaccination: 18,44,53,149 pic.twitter.com/75fXkY6Xjh
— ANI (@ANI) May 18, 2021
ಸಕ್ರಿಯ ಕೋವಿಡ್ -19 ಪ್ರಕರಣಗಳು 1.65 ಲಕ್ಷ ಇಳಿಕೆಯಾಗಿದೆ. ಕರ್ನಾಟಕದಲ್ಲಿ 38,603 ಪ್ರಕರಣಗಳು ವರದಿ ಆಗಿದ್ದು ತಮಿಳುನಾಡು 33,075 ಪ್ರಕರಣಗಳನ್ನು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ 26,616 ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ ಕನಿಷ್ಠ 4,329 ಸಾವುಗಳು ವರದಿಯಾಗಿವೆ, ಇದು ಒಂದು ದಿನದಲ್ಲಿ ಇದುವರೆಗೆ ಸಂಭವಿಸಿದ ಅತಿ ಹೆಚ್ಚು ಸಾವಿನ ಸಂಖ್ಯೆ ಇದಾಗಿದೆ. ಮಹಾರಾಷ್ಟ್ರದಲ್ಲಿ 1,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದರೆ, ಕರ್ನಾಟಕದಲ್ಲಿ 476 ಮಂದಿ ಸಾವನ್ನಪ್ಪಿದ್ದಾರೆ.
ಭಾರತವು ಸೋಮವಾರ ತನ್ನ ಸಕ್ರಿಯ ಪ್ರಕರಣಗಳು ಸುಮಾರು 1.65 ಲಕ್ಷಗಳಷ್ಟು ಇಳಿಕೆಯಾಗಿದೆ. ದೇಶದಲ್ಲಿ ಈಗ 33.52 ಲಕ್ಷ ಸಕ್ರಿಯ ಪ್ರಕರಣಗಳಿವೆ.
ಹಿಮಾಚಲ ಪ್ರದೇಶದಲ್ಲಿ 70 ಹೊಸ ಕೊವಿಡ್ ಪ್ರಕರಣ ದಾಖಲು ಹಿಮಾಚಲ ಪ್ರದೇಶದಲ್ಲಿ ಭಾನುವಾರ 70 ಕೋವಿಡ್ ಸಾವುಗಳು ಮತ್ತು ಸೋಮವಾರ ಮಧ್ಯಾಹ್ನ 2 ರ ವೇಳೆಗೆ 35 ಸಾವುಗಳು ದಾಖಲಾಗಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಮೇ ತಿಂಗಳಲ್ಲಿ ಮಾತ್ರ ಒಟ್ಟು 827 ಕೋವಿಡ್ ರೋಗಿಗಳು ಹಿಮಾಚಲದಲ್ಲಿ ಸಾವನ್ನಪ್ಪಿದ್ದಾರೆ.
Rajasthan reports 11,597 new #COVID19 cases, 29,459 recoveries and 157 deaths in the last 24 hours.
Total cases 8,71,266 Total recoveries 6,87,969 Death toll 6934
Active cases 1,76,363 pic.twitter.com/IVPr43va3x
— ANI (@ANI) May 17, 2021
ಕಳೆದ 24 ಗಂಟೆಗಳಲ್ಲಿ 11,597 ಹೊಸ ಪ್ರಕರಣಗಳು, 29,459 ಚೇತರಿಕೆ ಪ್ರಕರಣ ಮತ್ತು 157 ಸಾವುಗಳು ರಾಜಸ್ಥಾನದಲ್ಲಿ ವರದಿಯಾಗಿದೆ.
ಈ ತಿಂಗಳ ಮೊದಲಾರ್ಧದಲ್ಲಿ ವರದಿಯಾದ ಸಾವುಗಳ ಸಂಖ್ಯೆ ನೋಯಿಡಾ ಮತ್ತು ಗಾಜಿಯಾಬಾದ್‌ನಲ್ಲಿ ಒಟ್ಟಾರೆ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಅರ್ಧದಷ್ಟಿದೆ. ಕಳೆದ ವರ್ಷ ಮಾರ್ಚ್‌ನಿಂದ ನೋಯ್ಡಾದಲ್ಲಿ ವರದಿಯಾದ 392 ಸಾವುಗಳ ಪೈಕಿ 180 ಸಾವುಗಳು ಮೇ 1 ಮತ್ತು 16 ರ ನಡುವೆ ಸೇರ್ಪಡೆಯಾಗಿದೆ. ಸರ್ಕಾರದ ಮಾಹಿತಿಯ ಪ್ರಕಾರ, ಮೇ ಮೊದಲಾರ್ಧದಲ್ಲಿ ಜಿಲ್ಲೆಯ ಒಟ್ಟು ಸಾವುಗಳ ಶೇ 46 ನಷ್ಟಿದೆ.
121 ಸಾವುಗಳೊಂದಿಗೆ ಏಪ್ರಿಲ್‌ನಲ್ಲಿ ಒಟ್ಟು ಸಾವುಗಳಲ್ಲಿ ಶೇ 31 ನಷ್ಟಿದೆ. ವಾಸ್ತವವಾಗಿ, ಏಪ್ರಿಲ್ 1 ಮತ್ತು ಮೇ 16 ರ ನಡುವಿನ ಅವಧಿಯು ನೋಯ್ಡಾದಲ್ಲಿ ನಡೆದ ಕೊವಿಡ್ ಸಾವುಗಳು ಶೇ 77% ನಷ್ಟಿದೆ. ಮಾರ್ಚ್ 2020 ಮತ್ತು ಮಾರ್ಚ್ 2021 ರ ನಡುವೆ ಜಿಲ್ಲೆಯಲ್ಲಿ 91 ಸಾವುನೋವುಗಳು ದಾಖಲಾಗಿವೆ.
ಅದೇ ರೀತಿ, ಗಾಜಿಯಾಬಾದ್‌ನಲ್ಲಿ, ಜಿಲ್ಲೆಯ ಒಟ್ಟು ಕೋವಿಡ್ ಸಾವುಗಳಲ್ಲಿ ಶೇ 74 ರಷ್ಟು ಏಪ್ರಿಲ್ 1 ಮತ್ತು ಮೇ 16 ರ ನಡುವೆ ವರದಿಯಾಗಿದೆ. ಮೇ ಮೊದಲ 16 ದಿನಗಳಲ್ಲಿ 169 ಸಾವುಗಳು ದಾಖಲಾಗಿವೆ. ಗಾಜಿಯಾಬಾದ್‌ನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 375 ಮತ್ತು ಮೇ 1 ಮತ್ತು ಮೇ 16 ರ ನಡುವೆ ಸಂಭವಿಸಿದ ಸಾವುನೋವುಗಳು ಅದರಲ್ಲಿ ಶೇ 45 ನಷ್ಟಿದೆ. ಮಾರ್ಚ್ 2020 ರಿಂದ ಮಾರ್ಚ್ 2021 ರವರೆಗೆ ಜಿಲ್ಲೆಯಲ್ಲಿ 102 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ತೆಲಂಗಾಣದಲ್ಲಿ 3961 ಹೊಸ ಕೊವಿಡ್ ಪ್ರಕರಣಗಳು, 5559 ಚೇತರಿಕೆ ಮತ್ತು 30 ಸಾವುಗಳು ವರದಿ ಆಗಿದೆ. ರಾಜಸ್ಥಾನದಲ್ಲಿ ಕಳೆದ 24 ಗಂಟೆಗಳಲ್ಲಿ 11,597 ಹೊಸ ಕೊವಿಡ್ ಪ್ರಕರಣಗಳು, 29,459 ಚೇತರಿಕೆ ಮತ್ತು 157 ಸಾವುಗಳನ್ನು ವರದಿ ಮಾಡಿದೆ.
ಮಹಾರಾಷ್ಟ್ರದಲ್ಲಿ 26,616 ಹೊಸ ಕೊವಿಡ್ ಪ್ರಕರಣಗಳು, 48,211 ಚೇತರಿಕೆ ಮತ್ತು 516 ಸಾವುಗಳನ್ನು ವರದಿ ಆಗಿದ್ದು ಪಶ್ಚಿಮ ಬಂಗಾಳದಲ್ಲಿ ಇಂದು 19,003 ಹೊಸ ಕೊವಿಡ್ ಪ್ರಕರಣಗಳು, 19,101 ಚೇತರಿಕೆ ಮತ್ತು 147 ಸಾವುಗಳು ವರದಿ ಆಗಿದೆ.
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 38,603 ಹೊಸ ಕೊವಿಡ್ ಪ್ರಕರಣಗಳು, 34,635 ಚೇತರಿಕೆ ಮತ್ತು 476 ಸಾವುಗಳು ವರದಿ ಮಾಡಿದೆ. ತಮಿಳುನಾಡಿನಲ್ಲಿ 33,075 ಹೊಸ ಕೊವಿಡ್ ಪ್ರಕರಣಗಳು, 20,486 ಚೇತರಿಕೆ ಮತ್ತು 335 ಸಾವುಗಳು ವರದಿ ಮಾಡಿದೆ.
ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 1240 ಹೊಸ ಕೊವಿಡ್ ಪ್ರಕರಣಗಳು, 2587 ಚೇತರಿಕೆ ಮತ್ತು 48 ಸಾವುಗಳು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ 4524 ಹೊಸ ಕೊವಿಡ್ ಪ್ರಕರಣಗಳು, 10,918 ಚೇತರಿಕೆ ಮತ್ತು 340 ಸಾವುಗಳು ದೆಹಲಿಯಲ್ಲಿ ವರದಿ ಮಾಡಿದೆ.
ಇದನ್ನೂ ಓದಿ: ಕೊವಿಡ್-19 ಮಹಾಮಾರಿ ವಯಸ್ಕರಲ್ಲಿ ಖಿನ್ನತೆ, ಹತಾಶೆ, ಒಂಟಿತನದಂಥ ಮಾನಸಿಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತಿದೆ
Published On - 10:44 am, Tue, 18 May 21