Oxygen Shortage: ಮುತ್ತನಲ್ಲೂರು ಕೆರೆಯಲ್ಲಿ ನೂರಾರು ಮೀನುಗಳ ಸಾವು, ಮಾಲಿನ್ಯವೇ ಇದಕ್ಕೆ ಕಾರಣವೆಂದ ಸ್ಥಳೀಯರು
ಬೆಂಗಳೂರು: ಮುತ್ತನಲ್ಲೂರು ಕೆರೆಯಲ್ಲಿ ನೂರಾರು ಮೀನುಗಳ ಸಾವಿಗೀಡಾಗಿದ್ದು, ಮಾಲಿನ್ಯವೇ ಇದಕ್ಕೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ. ಸತ್ತ ಮೀನುಗಳಿಂದ ದುರ್ವಾಸನೆ ಬರುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು, ಕೆರೆ ಸಂರಕ್ಷಣಾ ಹೋರಾಟಗಾರರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಮತ್ತು ಸ್ಥಳೀಯ ಅಧಿಕಾರಿಗಳಿಗೆ ಶನಿವಾರ ದೂರು ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನೀರಿನ ಸ್ಯಾಂಪಲ್ ಶೇಖರಿಸಿಕೊಂಡು ಹೋಗಿದ್ದಾರೆ. ಎಲೆಕ್ರ್ಟಾನಿಕ್ ಸಿಟಿ ಚಂದಾಪುರದ ಬಳಿಯಿರುವ ಸುವಿಶಾಲ ಮುತ್ತನಲ್ಲೂರು ಕೆರೆ ಸದಾ ನೀರಿನಿಂದ ತುಂಬಿರುತ್ತದೆ. ಆದರೆ ಇದಕ್ಕೆ ಜಿಗಣಿ, […]
ಬೆಂಗಳೂರು: ಮುತ್ತನಲ್ಲೂರು ಕೆರೆಯಲ್ಲಿ ನೂರಾರು ಮೀನುಗಳ ಸಾವಿಗೀಡಾಗಿದ್ದು, ಮಾಲಿನ್ಯವೇ ಇದಕ್ಕೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ. ಸತ್ತ ಮೀನುಗಳಿಂದ ದುರ್ವಾಸನೆ ಬರುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು, ಕೆರೆ ಸಂರಕ್ಷಣಾ ಹೋರಾಟಗಾರರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಮತ್ತು ಸ್ಥಳೀಯ ಅಧಿಕಾರಿಗಳಿಗೆ ಶನಿವಾರ ದೂರು ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನೀರಿನ ಸ್ಯಾಂಪಲ್ ಶೇಖರಿಸಿಕೊಂಡು ಹೋಗಿದ್ದಾರೆ. ಎಲೆಕ್ರ್ಟಾನಿಕ್ ಸಿಟಿ ಚಂದಾಪುರದ ಬಳಿಯಿರುವ ಸುವಿಶಾಲ ಮುತ್ತನಲ್ಲೂರು ಕೆರೆ ಸದಾ ನೀರಿನಿಂದ ತುಂಬಿರುತ್ತದೆ. ಆದರೆ ಇದಕ್ಕೆ ಜಿಗಣಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಅಂಟಿಕೊಂಡಿರುವುದರಿಂದ ಕೈಗಾರಿಕೆಗಳ ತ್ಯಾಜ್ಯ, ಮಲಿನ ಪದಾರ್ಥಗಳು ಸೀದಾ ಕೆರೆಯನ್ನು ತುಂಬುತ್ತಿವೆ. ಚಂದಾಪುರ ಕೆರೆಯಿಂದಲೂ ನೀರು ಹರಿದುಬರುತ್ತಿದೆ. ಆದರೆ ಚಂದಾಪುರ ಕೆರೆಯೂ ಕೈಗಾರಿಕೆಗಳಿಂದಾಗಿ ತೀವ್ರವಾಗಿ ಮಲಿನಗೊಂಡಿದೆ ಅನ್ನುತ್ತಾರೆ ಸ್ಥಳೀಯರು.
ಮುತ್ತನಲ್ಲೂರು ಕೆರೆಯಲ್ಲಿಯೂ Oxygen Shortage!
ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಸುಪಾಸಿನ ಜನ ನಾವು ಮಾತ್ರ ಈ ಕೆಟ್ಟ ವಾಸನೆ ಸೇವಿಸಿಕೊಂಡು ಬದುಕು ನಡೆಸಬೇಕಿದೆ ಎನ್ನುತ್ತಾರೆ ಸ್ಥಳೀಯ ಜನ. ನೀರಿನಲ್ಲಿ ಆಕ್ಸಿಜನ್ ಪ್ರಮಾಣ (dissolved oxygen -DO) ಕಡಿಮೆಯಾಗಿ ಮೀನುಗಳು ಸಾಮೂಹಿಕವಾಗಿ ಸತ್ತಿವೆ. ಜೊತೆಗೆ ಸಮೀಪದ ಕೈಗಾರಿಕೆಗಳಿಂದ ಮತ್ತು ಕೈಷಿ ಭೂಮಿಯಿಂದ ತ್ಯಾಜ್ಯಗಳು ಮತ್ತು ಕೀಟನಾಶಕಗಳು ಅಧಿಕ ಪ್ರಮಾಣದಲ್ಲಿ ಹರಿದುಬಂದು ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಕೆಂಪೇಗೌಡರ ನಾಡು ಅಗಾಧವಾಗಿ ಬೆಳೆದುಬಿಟ್ಟಿದ್ದು, ಸ್ಥಳೀಯ ಕೈಗಾರಿಕೆಗಳು ಹೊರಸೂಸುವ ಮಲಿನಕಾರಕ ತ್ಯಾಜ್ಯಗಳಿಗೆ ಬೆಂಗಳೂರಿನಲ್ಲಿರುವ ನೂರಾರು ಕೆರೆಗಳು ಆಶ್ರಯತಾಣವಾಗಿವೆ. ಇದು ಕೆರೆಯಂಗಳದಲ್ಲಿನ ಜೀವವೈವಿಧ್ಯಕ್ಕೆ ಮಾರಕವಾಗಿದೆ. ಇದರ ಪರಿಣಾಮವೇ ಹೀಗೆ ಸಾವಿರಾರು ಮೀನುಗಳ ಮಾರಣವಾಗುತ್ತಿವೆ ಅನ್ನುತ್ತಾರೆ ಸ್ಥಳೀಯರು.
(thousands of dead fish float Muthanallur lake in South Bangalore localites blame industrial pollution)
ಆನೇಕಲ್: ಮದ್ದೂರಮ್ಮ ಜಾತ್ರೆಗಾಗಿ ಕೆರೆ ಶುದ್ಧಿ ಮಾಡುವಾಗ ಶಿವಲಿಂಗ ಪತ್ತೆ, ಶಿವಲಿಂಗ ನೋಡಲು ಮುಗಿಬಿದ್ದ ಜನ
Published On - 4:08 pm, Mon, 17 May 21