ಮುಂಬೈ: ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ ಕೊರೊನಾ ಮಹಾಮಾರಿ ಇದೀಗ ವಿಮಾನ ಸಂಸ್ಥೆ ಸಿಬ್ಬಂದಿಯ ದೇಹವನ್ನೂ ಹೊಕ್ಕಿದೆ. ಮುಂಬೈನಲ್ಲಿ ಏರ್ ಇಂಡಿಯಾದ 7 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಏರಿ ಇಂಡಿಯಾದ ಓರ್ವ ಇಂಜಿನಿಯರ್, ಓರ್ವ ಟೆಕ್ನಿಷಿಯನ್ ಹಾಗೂ ಐವರು ಪೈಲಟ್ ಸೇರಿ 7 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
ಈ ಎಲ್ಲಾ ಪೈಲಟ್‌ಗಳು ಮುಂಬೈ ಮೂಲದವರಾಗಿದ್ದಾರೆ. ಮೊದಲು ಇವರಲ್ಲಿ ಕೊರೊನಾ ವೈರಸ್ನ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗುವ 72 ಗಂಟೆಗಳ ಮೊದಲು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅದರ ಪ್ರಕಾರ ಅವರು ಕೊವಿಡ್-19 ಸೋಂಕಿಗೆ ಒಳಗಾಗಿದ್ದಾರೆಂದು ವರದಿ ಬಂದಿದೆ.
ವಿಮಾನಯಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಈಗಾಗಲೇ ಸರ್ಕಾರ ಹೊರಡಿಸಿದೆ. ಅದರಂತೆ ಸಿಬ್ಬಂದಿ ವಿಮಾನ ಹಾರಾಟ ಪ್ರಾರಂಭವಾಗುವ ಮೊದಲು ಮತ್ತು ನಂತರ ಕೊರೊನಾ ವೈರಸ್ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ.
Published On - 6:21 pm, Sun, 10 May 20