
ಅಹಮದಾಬಾದ್, ಜನವರಿ 29: ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ 60 ವರ್ಷದ ರೈತರೊಬ್ಬರು ತನ್ನನ್ನು ಮತ್ತು ತನ್ನ ಮಗನನ್ನು ರಕ್ಷಿಸಿಕೊಳ್ಳಲು ಚಿರತೆಯನ್ನು (Leopard Attack) ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯ ದಾಳಿಯ ನಂತರ ರೈತ ಬಾಬು ಅವರ ಮಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಕೊಂದಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ರಾತ್ರಿ ಜಿಲ್ಲಾ ಕೇಂದ್ರವಾದ ವೆರಾವಲ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗ್ಯಾಂಗ್ಡಾ ಗ್ರಾಮದ ಹೊರವಲಯದಲ್ಲಿರುವ ತನ್ನ ಮನೆಯ ವರಾಂಡಾದಲ್ಲಿ ಬಾಬು ವಾಜಾ ವಿಶ್ರಾಂತಿ ಪಡೆಯುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಹತ್ತಿರದ ಹೊಲದಿಂದ ಹೊರಬಂದ ಚಿರತೆಯೊಂದು ಬಾಬು ಅವರ ಮೇಲೆ ಹಾರಿತು. ಆಗ ಅಲ್ಲಿಗೆ ಬಂದ ಅವರ ಮಗನ ಮೇಲೂ ದಾಳಿ ಮಾಡಿತು.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ
ಬಾಬು ವಾಜಾ ಅವರ ಪ್ರಕಾರ, ಚಿರತೆ ಅವರ ತೋಳನ್ನು ಕಚ್ಚಿ ಹಿಡಿದು ಎಳೆಯಲು ಪ್ರಾರಂಭಿಸಿತು. “ನನ್ನ ಕಿರುಚಾಟ ಕೇಳಿ ನನ್ನ ಮಗ ಶಾರ್ದೂಲ್ ನನ್ನನ್ನು ರಕ್ಷಿಸಲು ಓಡಿ ಬಂದ. ಆದರೆ, ಚಿರತೆ ಅವನ ಮೇಲೆ ಹಾರಿ ಗಾಯಗೊಳಿಸಿತು. ನಾನು ಶಾರ್ದೂಲ್ನನ್ನು ಉಳಿಸಲು ಪ್ರಯತ್ನಿಸಿದಾಗ ಚಿರತೆ ಮತ್ತೆ ನನ್ನ ಮೇಲೆ ಹಾರಿತು. ಆಗ ಏನು ಮಾಡುವುದೆಂದು ತಿಳಿಯದೆ ಅಲ್ಲೇ ಇದ್ದ ಕತ್ತಿಯನ್ನು ತೆಗೆದುಕೊಂಡು ಚಿರತೆಗೆ ಹೊಡೆದೆ” ಎಂದು ಬಾಬು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬಾಬು ಮತ್ತು ಅವರ ಮಗನ ಮುಂಗೈ ಮತ್ತು ಹಣೆಯ ಮೇಲೆ ಗಾಯಗಳಾಗಿವೆ. ವರಾಂಡಾದಲ್ಲಿ ಇರಿಸಲಾಗಿದ್ದ ಕತ್ತಿಯನ್ನು ಹಿಡಿದು ಚಿರತೆಯನ್ನು ಕೊಲ್ಲಲಾಗಿದೆ. ಈ ಘಟನೆಯ ಬಗ್ಗೆ ತಿಳಿದ ನಂತರ, ಭರ್ವಾದ್ ಮತ್ತು ಅವರ ತಂಡ ಸ್ಥಳಕ್ಕೆ ತಲುಪಿ ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ