ಒಂದೇ ಆಸ್ಪತ್ರೆಯ 80 ವೈದ್ಯರಿಗೆ ಕೊರೊನಾ ಸೋಂಕು; ಒಪಿಡಿ ಬಂದ್​

|

Updated on: May 10, 2021 | 3:11 PM

ದೆಹಲಿಯ ಗುರು ತೇಜ್​ ಬಜದ್ದೂರ್​ ಆಸ್ಪತ್ರೆಯ ಯುವ ವೈದ್ಯ ಡಾ. ಅನಾಸ್​ ಮುಜಾಹಿದ್ದ ಅವರು ಕೊರೊನಾ ದೃಢಪಟ್ಟ ಒಂದೇ ತಾಸಿನಲ್ಲಿ ಸಾವನ್ನಪ್ಪಿದ್ದಾರೆ.

ಒಂದೇ ಆಸ್ಪತ್ರೆಯ 80 ವೈದ್ಯರಿಗೆ ಕೊರೊನಾ ಸೋಂಕು; ಒಪಿಡಿ ಬಂದ್​
ಪ್ರಾತಿನಿಧಿಕ ಚಿತ್ರ
Follow us on

ದೆಹಲಿಯ ಸರೋಜ್​ ಆಸ್ಪತ್ರೆಯ 80 ವೈದ್ಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂಥ ಹೊತ್ತಲ್ಲೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ಈ ಆಸ್ಪತ್ರೆಯ ಹಿರಿಯ ಸರ್ಜನ್​ ಅನಿಲ್​ಕುಮಾರ್ ರಾವತ್​ ಅವರೂ ಸಹ ಎರಡು ದಿನಗಳ ಹಿಂದೆ ಕೊರೊನಾದಿಂದಲೇ ಮೃತಪಟ್ಟಿದ್ದರು.

ಕೊವಿಡ್ ಸೋಂಕಿಗೆ ಒಳಗಾಗಿರುವ 80 ವೈದ್ಯರಲ್ಲಿ 12 ವೈದ್ಯರು ಇದೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಸದ್ಯ ಸರೋಜ್​ ಆಸ್ಪತ್ರೆಯಲ್ಲಿ ಒಪಿಡಿಯನ್ನು ಬಂದ್​ ಮಾಡಲಾಗಿದೆ. ದೆಹಲಿಯಾದ್ಯಂತ ಒಟ್ಟು 300 ವೈದ್ಯರಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ಇನ್ನು ದೆಹಲಿಯ ಗುರು ತೇಜ್​ ಬಜದ್ದೂರ್​ ಆಸ್ಪತ್ರೆಯ ಯುವ ವೈದ್ಯ ಡಾ. ಅನಾಸ್​ ಮುಜಾಹಿದ್ದ ಅವರು ಕೊರೊನಾ ದೃಢಪಟ್ಟ ಒಂದೇ ತಾಸಿನಲ್ಲಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮಿತಿಮೀರುತ್ತಿದ್ದು ಭಾನುವಾರ ಒಂದೇ ದಿನ 13,336 ಸೋಂಕಿತರು ದಾಖಲಾಗಿದ್ದು, 273ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಂಡ್ಯದ ಮಿಮ್ಸ್‌ನಲ್ಲಿ ಕೊರೊನಾ ಸೋಂಕಿತರ ಪರದಾಟ; ಬೆಡ್ ಇಲ್ಲದೆ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣ

ನೀವು ಕೂಡ ಬೇಗ ಲಸಿಕೆ ಪಡೆಯಿರಿ; ಮೊದಲ ಹಂತದ ಕೊರೊನಾ ಲಸಿಕೆ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

80 doctors at Saroj Hospital tested Positive for Coronavirus in Delhi